ಅನಿವಾಸಿ ಭಾರತೀಯರಿಂದ ಶಿಕ್ಷಣದ ಕಡೆ ಒತ್ತು ಅಭಿನಂದನಾರ್ಹ: ಅಶೋಕ್ ರೈ

KannadaprabhaNewsNetwork |  
Published : Nov 29, 2025, 11:17 PM IST
ಫೋಟೋ: ೨೩ಪಿಟಿಆರ್- ಎಂಎಲ್‌ಎಸೌದಿ ಅರೇಬಿಯಾದಲ್ಲಿ ನಡೆದ ಕುಂಬ್ರ ಕೆಐಸಿ ಎಲೆವೇಶನ್ ಸಮ್ಮಿಟ್‌ನಲ್ಲಿ ಶಾಸಕ ಅಶೋಕ್ ರೈ ಭಾಗವಹಿಸಿದ್ದರು. | Kannada Prabha

ಸಾರಾಂಶ

ಪುತ್ತೂರು ಶಾಸಕ ಅಶೋಕ್ ರೈ ಒಂದು ವಾರ ಗಲ್ಫ್ ರಾಷ್ಟ್ರಗಳ ಪ್ರವಾಸದಲ್ಲಿದ್ದು ಪ್ರವಾಸದ ವೇಳೆ ಸೌದಿ ಅರೇಬಿಯಾದ ಅಲ್ ಜುಬೈಲ್‌ನಲ್ಲಿ ಕುಂಬ್ರ ಕೆಐಸಿ ಇದರ ಎಲೆವೇಶನ್ ಸಮ್ಮಿಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ಒಂದು ವಾರ ಗಲ್ಫ್ ರಾಷ್ಟ್ರಗಳ ಪ್ರವಾಸದಲ್ಲಿದ್ದು ಪ್ರವಾಸದ ವೇಳೆ ಸೌದಿ ಅರೇಬಿಯಾದ ಅಲ್ ಜುಬೈಲ್‌ನಲ್ಲಿ ಕುಂಬ್ರ ಕೆಐಸಿ ಇದರ ಎಲೆವೇಶನ್ ಸಮ್ಮಿಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಜುಬೈಲ್‌ಗೆ ಆಗಮಿಸಿದ ಶಾಸಕರನ್ನು ಅನಿವಾಸಿ ಭಾರತೀಯರು ಬರಮಾಡಿಕೊಂಡರು.

ಎಲೆವೇಶನ್ ಸಮ್ಮಿಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅಶೋಕ್ ರೈ ,ಗಲ್ಫ್ ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ವಿವಿಧ ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 10 ಸಾವಿರಕ್ಕೂ ಮಿಕ್ಕಿ ಭಾರತೀಯರು ಸೌದಿ ಅರೇಬಿಯಾದಲ್ಲೇ ಇದ್ದಾರೆ ಎಂಬ ಮಾಹಿತಿ ದೊರಕಿದೆ. ವಿದೇಶದಲ್ಲಿ ಬಂದು ಉದ್ಯಮವನ್ನು ನಡೆಸಿ ಉದ್ಯಮದ ಒಂದು ಪಾಲು ಲಾಭಾಂಶದಲ್ಲಿ ತಮ್ಮ ದೇಶದಲ್ಲಿರುವ ವಿದ್ಯಾ ಸಂಸ್ಥೆಗಳು ಹಾಗೂ ಶೈಕ್ಷಣಿಕ ಉದ್ದೇಶಕ್ಕೆ ನೆರವು ನೀಡುತ್ತಿರುವುದು ಅಭಿನಂದನಾರ್ಹ ಕಾರ್ಯ ಎಂದರು. ಶಿಕ್ಷಣ ಪಡೆದಾಗ ಮಾತ್ರ ನಾವು ಉತ್ತುಂಗ ಪದವಿಗೇರಲು ಸಾಧ್ಯವಾಗುತ್ತದೆ. ಭಾರತ ವಿಶ್ವ ಗುರುವಾಗಬೇಕಾದರೆ ಅದು ಭಾಷಣದಿಂದ ಸಾಧ್ಯವಿಲ್ಲ. ದೇಶದಲ್ಲಿರುವ ಪ್ರತಿಯೊಂದು ಮಗು ಕೂಡಾ ಶಿಕ್ಷಣ ಪಡೆಯಬೇಕು, ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಆಗಿದ್ದಲ್ಲಿ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ ಎಂದರು.

ವಿಧಾನಸಭಾ ಅಧ್ಯಕ್ಷ ಯು ಟಿ ಖಾದರ್ ಮಾತನಾಡಿ, ಕೆಐಸಿ ಶಿಕ್ಷಣ ಸಂಸ್ಥೆಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಕೊಡಿಸುವಲ್ಲಿ ಮುತುವರ್ಜಿವಹಿಸುವುದಾಗಿ ಭರವಸೆ ನೀಡಿದರು.

ಕೆಐಸಿ ಸಂಚಾಲಕ ಕೆ ಪಿ ಅಹ್ಮದ್ ಹಾಜಿ , ಸಿಂಡಿಕೇಟ್ ಸದಸ್ಯ ಯು ಟಿ ಇಫ್ತಿಕಾರ್, ತೌಸೀಫ್ ಅಹ್ಮದ್, ಪ್ಲಾಂಟ್ ಸೊಲ್ಯುಷನ್‌ನ ಅಸ್ಕಾಫ್, ತ್ವಾಹಿರ್ ಸಾಲ್ಮರ, ಭಾರತ್ ಮುಸ್ತಫಾ, ಇಂಜನಿಯರ್ ಫೈರೋಝ್ ಪಹದ್, ಮುಶ್ತಾಕ್ ಕೋಡಿಂಬಾಡಿ, ಆಸಿಫ್ ದರ್ಬೆ, ಫಾರೂಕ್ ಫೋರ್ಟು ಪೋಲಿಯೋ, ಶರೀಫ್ ಸಾಲ್ಮರ, ಹಾರಿಸ್ ಆರಂಡ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಂದಿಗೂ ಬೆನ್ನಿಗೆ ಚೂರಿ ಹಾಕಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌
ಸ್ವಾಮೀಜಿಗಳು ರಸ್ತೆಗೆ ಇಳಿಯದಿದ್ದರೆ ಗೌಡರು ಸಿಎಂ ಆಗುತ್ತಿದ್ದರೆ? : ಡಿಕೆಶಿ