ದಾಬಸ್‍ಪೇಟೆ: ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಜೊತೆಗೆ ಕಾಂಗ್ರೆಸ್ ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದ್ದೇನೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಮೈಲನಹಳ್ಳಿ ಗ್ರಾಮದಲ್ಲಿ ನೆಲಮಂಗಲ ನಗರ, ತ್ಯಾಮಗೊಂಡ್ಲು, ಸೋಂಪುರ, ಸೋಲೂರು ಬ್ಲಾಕ್ ನೂತನ ಅಧ್ಯಕ್ಷರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಅವರು, ನೆಲಮಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಜವಾಬ್ದಾರಿ ಹೊತ್ತಿರುವ ನೂತನ ಬ್ಲಾಕ್ ಅಧ್ಯಕ್ಷರು ಪಕ್ಷ ಸಂಘಟನೆಗೆ ಒತ್ತು ನೀಡಿ ಮುಂಬರುವ ಪಂಚಾಯತಿ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು. ನಮ್ಮ ಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ಅರ್ಥ ಮಾಡಿಸಬೇಕು. ಆಂತರಿಕ ಕಲಹಗಳನ್ನು ಮರೆತು ಪಕ್ಷ ಕಟ್ಟಲು ಮುಂದಾಗಬೇಕು. ತಾಲೂಕಿನ 27 ಗ್ರಾಪಂಗಳಲ್ಲಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು. ಮಹಿಳೆಯರಿಗೂ ಅವಕಾಶ ಕಲ್ಪಿಸಲಾಗುತ್ತದೆ ಎಂದರು.ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ ಮಾತನಾಡಿ, ಜಾತಿ, ಧರ್ಮ ಬಿಟ್ಟು ಪಕ್ಷದ ಸಿದ್ಧಾಂತಗಳಿಗೆ ಬದ್ದವಾಗಿ ಪಕ್ಷ ಸಂಘಟಿಸಿ 2028ಕ್ಕೆ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಬ್ಲಾಕ್ ಅಧ್ಯಕ್ಷರು ಕೆಲಸ ಮಾಡಬೇಕಿದೆ ಎಂದರು.
ಇದೇ ವೇಳೆ ನೆಲಮಂಗಲ ನಗರದ ಬ್ಲಾಕ್ ಅಧ್ಯಕ್ಷ ಸಿ.ಪ್ರದೀಪ್, ಕಸಬಾ ಬ್ಲಾಕ್ ಅಧ್ಯಕ್ಷ ಬೂದಿಹಾಲ್ ಮಂಜುನಾಥ್, ತ್ಯಾಮಗೊಂಡ್ಲು ಬ್ಲಾಕ್ ಅಧ್ಯಕ್ಷ ಹನುಮಂತೇಗೌಡ, ಸೋಂಪುರ ಹಾಗೂ ಸೋಲೂರು ಬ್ಲಾಕ್ ಅಧ್ಯಕ್ಷ ನಾಗರುದ್ರಶರ್ಮಾ (ಬಾಬು) ಸೇರಿ ಕೆಪಿಸಿಸಿ ಸದಸ್ಯ ಪ್ರಕಾಶ್ ಬಾಬು ಅವರಿಗೆ ನೇಮಕಾತಿ ಪತ್ರ ವಿತರಿಸಿದರು.ಈ ಸಂದರ್ಭದಲ್ಲಿ ಎನ್ ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ನಾರಾಯಣಗೌಡ, ನಗರಸಭೆ ಅಧ್ಯಕ್ಷ ಗಣೇಶ್, ಉಪಾಧ್ಯಕ್ಷ ಆನಂದ್, ಮುಖಂಡರಾದ ಬಿ.ಜಿ.ವಾಸು, ಸಿಎಂ.ಗೌಡ, ಮಿಲ್ಟ್ರಿ ಮೂರ್ತಿ ಇತರರಿದ್ದರು.
ಪೋಟೋ 2 :ಮೈಲನಹಳ್ಳಿಯಲ್ಲಿ ನೆಲಮಂಗಲ ನಗರ, ತ್ಯಾಮಗೊಂಡ್ಲು, ಸೋಂಪುರ, ಸೋಲೂರು ಬ್ಲಾಕ್ ನೂತನ ಅಧ್ಯಕ್ಷರಿಗೆ ಶಾಸಕ ಶ್ರೀನಿವಾಸ್ ನೇಮಕಾತಿ ಪತ್ರ ವಿತರಿಸಿದರು.