ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ತಾಲೂಕಿನ ಭೀಮನಬೀಡು ಗ್ರಾಮದ ಕಾಡ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗುಂಡ್ಲುಪೇಟೆ ಕೃಷಿ ಇಲಾಖೆ ಆಯೋಜಿಸಿದ್ದ ಜಲಾನಯನ ಅಭಿವೃದ್ಧಿ ಘಟಕ-ಪ್ರಧಾನ ಮಂತ್ರಿ ಕೃಷಿ ಸಂಚಾಯಿ ಯೋಜನೆ ೨.೦ ಜಲಾನಯನ ಮಹೋತ್ಸವ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕು ಬರ ಪೀಡಿತ ಪ್ರದೇಶದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ೨೦೧೨ ರಲ್ಲಿ ಆರಂಭವಾಗಿದ್ದು, ಹಂತ ಹಂತವಾಗಿ ನೀರು ತುಂಬಿಸುವ ಕೆಲಸ ಆಗುತ್ತಿತ್ತು ಕೆರೆಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆನಾನೂ ಕೂಡ ಪ್ರಯತ್ನ ಮಾಡುತ್ತಿದ್ದೇನೆ. ವಾಟರ್ ಸೇವಿಂಗ್ ಬೆಡ್ ರೈತರು ನಿರ್ಮಿಸಿಕೊಂಡರೆ ನೀರು ಸಂಗ್ರಹಣೆ ಆದರೆ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ ಎಂದರು.
ಗುಂಡ್ಲುಪೇಟೆಯಲ್ಲಿ ಐಸಿಐಸಿ ಬ್ಯಾಂಕ್ ಇಲ್ಲಿದಿದ್ದರೂ ಐಸಿಐಸಿ ಬ್ಯಾಂಕ್ ಸಿಎಸ್‌ಆರ್ ಫಂಡಲ್ಲಿ ಕಾಡಂಚಿನ ಶಾಲೆಗಳ ಮೂಲ ಸೌಕರ್ಯಗಳಿಗೆ ದೇಣಿಗೆ ನೀಡುತ್ತಿದೆ ಇದು ಒಳ್ಳೆಯ ಕೆಲಸ ಎಂದರು.ಸಮಾರಂಭದಲ್ಲಿ ಎಪಿಎಂಸಿ ಅಧ್ಯಕ್ಷ ಆರ್.ಎಸ್.ನಾಗರಾಜು,ತಾಪಂ ಮಾಜಿ ಸದಸ್ಯ ನೀಲಕಂಠಪ್ಪ,ಕೃಷಿ ಇಲಾಖೆ ಉಪ ನಿರ್ದೇಶಕ ಸುಷ್ಮ,ಸಹಾಯಕ ಕೃಷಿ ನಿರ್ದೇಶಕ ಶಶಿಧರ್,ಎಪಿಎಂಸಿ ಸದಸ್ಯ ಅರಸಶೆಟ್ಟಿ,ಗ್ರಾಪಂ ಸದಸ್ಯರಾದ ಮಂಗಳಮ್ಮ,ಮಹದೇವಮ್ಮ ಸೇರಿದಂತೆ ಹಲವರಿದ್ದರು.