ಸರ್ಕಾರ, ಜನರ ಮಧ್ಯೆ ನೌಕರರು ಸೇತುವೆ ಇದ್ದಂತೆ: ವಿಶ್ವನಾಥರೆಡ್ಡಿ

KannadaprabhaNewsNetwork | Published : Oct 8, 2023 12:00 AM

ಸಾರಾಂಶ

ಸರ್ಕಾರ, ಜನರ ಮಧ್ಯೆ ನೌಕರರು ಸೇತುವೆ ಇದ್ದಂತೆ: ವಿಶ್ವನಾಥರೆಡ್ಡಿ
- ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿ, ವಗಾರ್ವಣೆಗೊಂಡ ನೌಕರರಿಗೆ ಸನ್ಮಾನ ಸಮಾರಂಭ ಕನ್ನಡಪ್ರಭ ವಾರ್ತೆ ಶಹಾಪುರ ಸರ್ಕಾರ ಮತ್ತು ಸಾರ್ವಜನಿಕರ ಮಧ್ಯೆ ಸೇತುವೆಯಾಗಿ ನಮ್ಮ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ವಿಶ್ವನಾಥರೆಡ್ಡಿ ದರ್ಶನಾಪೂರ ಹೇಳಿದರು. ನಗರದ ಟೌನ್‌ಹಾಲ್ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ಹಾಗೂ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಶಹಾಪೂರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಹಾಗೂ ತಾಲೂಕಿನಿಂದ ಬೇರೆಡೆಗೆ ವರ್ಗಾವಣೆಗೊಂಡ ಎಲ್ಲಾ ಇಲಾಖೆಗಳ ಸರ್ಕಾರಿ ನೌಕರರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನೌಕರರು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ. ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಅನೇಕ ತೊಂದರೆಗಳ ಮಧ್ಯೆ ನೌಕರರು ತಮ್ಮ ಸೇವೆಯನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ ಎಂದರು. ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಸರ್ಕಾರಿ ನೌಕರರ ಸಂಘದ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಮಹಿಪಾಲರೆಡ್ಡಿ ಮಾಲಿಪಾಟೀಲ ಮಾತನಾಡುತ್ತಾ, ತಾಲೂಕಿನ ನೌಕರರ ಸಂಘವು ಅತ್ಯಂತ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು ರಾಜ್ಯ ಸಂಘದ ಮತ್ತು ಜಿಲ್ಲಾ ಸಂಘದ ನಿರ್ದೇಶನಗಳನ್ನು ಚಾಚು ತಪ್ಪದೇ ಪಾಲಿಸಲಾಗುತ್ತಿದೆ. ಇದರಿಂದ ರಾಜ್ಯಮಟ್ಟದಲ್ಲಿ ಉತ್ತಮವಾದ ಸಂಘಟನೆ ಎಂದು ಪ್ರಶಂಸೆಗೆ ಪಾತ್ರವಾಗಿದೆ ಎಂದು ಅಭಿಪ್ರಾಯಪಟ್ಟರು. ಕಲ್ಯಾಣ ಕರ್ನಾಟಕ ವಿಭಾಗಿಯ ಉಪಾಧ್ಯಕ್ಷರು ಮತ್ತು ಶಹಾಪೂರ ತಾಲೂಕಿನ ಅಧ್ಯಕ್ಷರಾದ ರಾಯಪ್ಪಗೌಡ ಹುಡೇದ ಮಾತನಾಡಿ, ತಾಲೂಕಿನಲ್ಲಿರುವ ವಿವಿಧ ವೃಂದ ಸಂಘಗಳ ಪದಾಧಿಕಾರಿಗಳು ಮತ್ತು ಎಲ್ಲಾ ಇಲಾಖೆಗಳ ಸಹಾಯ ಸಹಕಾರದಿಂದ ರಾಜ್ಯದಲ್ಲಿ ಉತ್ತಮ ಹೆಸರು ಗಳಿಸಲು ನಮ್ಮ ಸಂಘಕ್ಕೆ ಸಾಧ್ಯವಾಗಿದೆ. ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳು ನೌಕರರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ ಅವರ ಸಮಸ್ಯಗಳಿಗೆ ಸ್ಪಂಧಿಸಿ ನೌಕರರ ಶ್ರೇಯೋಭಿವೃದ್ಧಿಗಾಗಿ ಶ್ರಮವಹಿಸಲು ನೌಕರರಿಗೆ ಸಲಹೆ ನೀಡಿದರು. ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ತಾಲೂಕಿನಿಂದ ಬೇರೆಡೆಗೆ ವರ್ಗಾವಣೆಗೊಂಡ ತಾಲೂಕಿನ ವಿವಿಧ ಇಲಾಖೆಗಳ ನೌಕರರಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು. ಮುಖ್ಯ ಅಥಿತಿಗಳಾಗಿ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ. ನಾರಾಯಣ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಎಂ. ನಾಟೇಕಾರ, ಜಿಲ್ಲಾ ಕಾರ್ಯಧ್ಯಕ್ಷರಾದ ಬಸನಗೌಡ ಬೆಳ್ಳಿಕಟ್ಟಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಭೀಮನಗೌಡ ತಳೆವಾಡ, ರಾಜ್ಯ ಪರಿಷತ್ ಸದಸ್ಯರಾದ ಶಾಂತರಡ್ಡಿ ತುಂಬಿಗಿ, ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಗುಂಜಾಲಪ್ಪ ನಾಯಕ, ಪಿ.ಡಿ.ಓ. ಸಂಘದ ಅಧ್ಯಕ್ಷ ಭೀಮರಾಯ ಬಿರಾದಾರ, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷ ಅರುಂಧತಿ ಕುಲಕರ್ಣಿ, ಆರೋಗ್ಯ ನಿರೀಕ್ಷಣಾಧಿಕಾರಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಣಿಬಾತೆ, ಭೀಮರಾಯನಗುಡಿ ಯೋಜನಾ ಘಟಕದ ಮಾನಪ್ಪಗೌಡ ಕಮತಗಿ, ಆದರ್ಶ ವಿದ್ಯಾಲಯದ ಪ್ರಾಂಶುಪಾಲರಾದ ಹಣಮಂತ್ರಾಯ ಸೋಮಪೂರ, ಇವರು ಭಾಗವಹಿಸಿದ್ದರು. ಚಂದ್ರಕಲಾ ಜಮಖಂಡಿ ಸಂಗೀತ ಕಛೇರಿ ನಡೆಯಿತು. ಕವಿತಾ ಪತ್ತಾರ್‌ ಪ್ರಾರ್ಥಿಸಿ, ಆನಂದ್ ಸ್ವಾಗತಿಸಿ, ಅಮೋಘಸಿದ್ಧ ಕಾರ್ಯಕ್ರಮ ನಿರೂಪಿಸಿದರು. - 7ವೈಡಿಆರ್12 ಶಹಾಪುರ ಟೌನ್‌ಹಾಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಹಾಗೂ ವರ್ಗಾವಣೆಗೊಂಡ ಎಲ್ಲಾ ಇಲಾಖೆಗಳ ನೌಕರರಿಗೆ ಅಭಿನಂದಿಸಲಾಯಿತು.

Share this article