ಯೋಜನೆ ಅನುಷ್ಠಾನದಲ್ಲಿ ನೌಕರರ ಜವಾಬ್ದಾರಿ ಹೆಚ್ಚಿದೆ

KannadaprabhaNewsNetwork |  
Published : Feb 08, 2025, 12:33 AM IST
ಮುಂಡರಗಿಯಲ್ಲಿ ಜರುಗಿದ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾ ಘಟಕದ ವತಿಯಿಂದ ಜರುಗಿದ ಕಾರ್ಯಕ್ರಮದಲ್ಲಿ 2025ನೇ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ಸರ್ಕಾರವು ಜಾರಿಗೆ ತರುವ ಯೋಜನೆ ಕಟ್ಟ ಕಡೆಯ ವ್ಯಕ್ತಿಗೆ ಮುಟ್ಟಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಮಹತ್ವದ್ದಾಗಿರುತ್ತದೆ.

ಮುಂಡರಗಿ: ಬಹುತೇಕ ಸರ್ಕಾರಿ ಇಲಾಖೆಗಳಲ್ಲಿ ವಿವಿಧ ಖಾಲಿ ಹುದ್ದೆಗಳಿದ್ದು, ಅವುಗಳಿಂದ ಉಂಟಾಗುವ ಕೆಲಸದ ಒತ್ತಡದ ಮಧ್ಯದಲ್ಲಿಯೂ ಸಹ ಸರ್ಕಾರದ ಯೋಜನೆ ಯಶಸ್ವಿ ಅನುಷ್ಠಾನದಲ್ಲಿ ನೌಕರರ ಜವಾಬ್ದಾರಿ ಪ್ರಮುಖವಾಗಿದೆ. ಅದನ್ನು ಜಾಗರೂಕತೆಯಿಂದ ಮಾಡಬೇಕು ಎಂದು ತಹಸೀಲ್ದಾರ್‌ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.

ಅವರು ಇತ್ತೀಚೆಗೆ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮುಂಡರಗಿ ತಾಲೂಕು ಘಟಕದ 2025ರ ದಿನಚರಿ ಹಾಗೂ ರಾಜ್ಯ ಕಚೇರಿಯಿಂದ ನೀಡಿರುವ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರವು ಜಾರಿಗೆ ತರುವ ಯೋಜನೆ ಕಟ್ಟ ಕಡೆಯ ವ್ಯಕ್ತಿಗೆ ಮುಟ್ಟಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಮಹತ್ವದ್ದಾಗಿರುತ್ತದೆ. ಆ ಕಾರ್ಯ ಎಲ್ಲರೂ ಪ್ರಾಮಾಣಿಕವಾಗಿ ಮಾಡಬೇಕು ಎಂದ ಅವರು, ನೌಕರರ ಒತ್ತಡ ಕಡಿಮೆಗೊಳಿಸಲು ಸಂಘವು ಕ್ರೀಡಾ ಮತ್ತು ಸಾಹಿತ್ಯ ಚಟುವಟಿಕೆ ಏರ್ಪಡಿಸಿರುವ ಕುರಿತು ತಹಸೀಲ್ದಾರ್ ಶ್ಲಾಘಿಸಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ದಿನಚರಿ ಬಿಡುಗಡೆಗೊಳಿಸಿ ಮಾತನಾಡಿ, ಮುಂಡರಗಿ ತಾಲೂಕು ಶಾಖೆಯು ಕಳೆದೆರಡು ವರ್ಷಗಳಿಂದ ನೌಕರರಿಗಾಗಿ ಆಯೋಜಿಸಿದ ಅನೇಕ ಚಟುವಟಿಕೆ, ಆರೋಗ್ಯ ಶಿಬಿರಗಳ ಕುರಿತು ಅಭಿನಂದಿಸಿ ಇದು ಹೀಗೆ ಮುಂದುವರೆಯಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಫಢ್ನೇಶಿ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜಿಕರ ಪಾಲ್ಗೊಂಡು ಮುಂಡರಗಿ ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಸಂಘದ ಕಾರ್ಯಕ್ರಮ ನೌಕರರಿಗೆ ವಿವರಿಸುತ್ತಾ, ನೌಕರರಿಗೆ ಮರಣ ಶಾಸನವಾಗಿರುವ ಎನ್ ಪಿ ಎಸ್ ಯೋಜನೆ ರದ್ದುಗೊಳಿಸಿ ಓ ಪಿ ಎಸ್ ಯೋಜನೆ ಜಾರಿಗೊಳಿಸುವಲ್ಲಿ ರಾಜ್ಯಾಧ್ಯಕ್ಷ ಷಡಕ್ಷರಿ ನೇತೃತ್ವದಲ್ಲಿ ಸತತವಾಗಿ ಪ್ರಯತ್ನ ಮಾಡುತ್ತಿದೆ. ಹಾಗೂ ಓಪಿಎಸ್ ಶೀಘ್ರದಲ್ಲಿ ಜಾರಿಯಾಗುವ ಆಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರಾಣೇಶ, ಶಿವಯೋಗಿ ಕಲ್ಮಠ, ಗಂಗಾಧರ ಅಣ್ಣಿಗೇರಿ,ಅರುಣಾ ಸೋರಗಾಂವಿ, ಶಿವಕುಮಾರ ವಿಭೂತಿ, ಸವಿತಾ ಸಾಸವಿಹಳ್ಳಿ, ರವಿ ಕಲ್ಲಣ್ಣನವರ, ಕುಬೇರರೆಡ್ಡಿ, ರಾಘವೇಂದ್ರ ಜೆ, ನಾಗೇಂದ್ರ ಪಟ್ಟಣಶೆಟ್ಟಿ, ಶಂಕರ ಸರ್ವದೆ, ಮಲ್ಲಿಕಾರ್ಜುನ ಕಲಕಂಬಿ, ಶ್ರೀಧರ ದಾನಿ, ಜಗದೀಶ ಎ, ಬಸವಣ್ಣೆಪ್ಪ ಜಿ ಬಿ, ಮಹೇಶ ಅಲ್ಲಿಪುರ, ಜಗದೀಶ ಗುಳಾರಿ, ಎಸ್.ಎಸ್. ಮೇಟಿ, ವೈ.ಎಸ್. ದಡವಾಡ, ಹನುಮಂತ ಹಳ್ಳಿ, ಶ್ರೀಕಾಂತ ಅರಹುಣಸಿ, ಮಲ್ಲಿಕಾರ್ಜುನ ಬಾರಕೇರ, ಮೈಲಾರಪ್ಪ ಬೂದಿಹಾಳ, ಮೃತ್ಯುಂಜಯ ವಿಭೂತಿ, ಮಹಾಂತೇಶ ಹಲವಾಗಲಿ, ಬಿ.ಕೆ. ಸಂಜೀವಪ್ಪನವರ, ಸಂತೋಷ ಜಾಧವ, ಮುದುಕಪ್ಪ ಸಂಶಿ, ವಿಠಲ ನಾವಳ್ಳಿ, ಎಂ.ಕೆ.ಸ್ವಾಮಿ, ಎ.ಎಸ್. ಪಾಟೀಲ, ಮಲ್ಲಿಕಾರ್ಜುನ ಹಿರೇಗೌಡ್ರ, ಶಿವಕುಮಾರ ಸಜ್ಜನರ, ಎಸ್.ಸಿ.ಹರ್ತಿ, ಜೆ.ಬಿ.ಅಮಾತಿ, ಎ.ಡಿ.ಬಂಡಿ, ಎಂ.ಎಂ.ಬಂಡಿ, ವಿಶ್ವನಾಥ ಉಳ್ಳಾಗಡ್ಡಿ, ಮನೋಹರ ಎಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ 2024ನೇ ವರ್ಷದಲ್ಲಿ ನಿವೃತ್ತಿ ಹೊಂದಿರುವ ಸರ್ಕಾರಿ ನೌಕರರನ್ನು ಗೌರವಿಸಲಾಯಿತು. ನೂತನವಾಗಿ ನೌಕರರ ಸಂಘಕ್ಕೆ ಆಯ್ಕೆಯಾಗಿರುವ ಪದಾಧಿಕಾರಿಗಳು ಹಾಗೂ ನಿರ್ದೇಶಕರಿಗೆ ಪ್ರತಿಜ್ಞಾವಿಧಿ ಮೂಲಕ ಪದಗ್ರಹಣ ಮಾಡಿದರು. ಶಂಕರ್ ಸರ್ವದೇ ಸ್ವಾಗತಿಸಿ, ಶರಣು ಕಲಾಲ ನಿರೂಪಿಸಿ, ಮಹಾಂತೇಶ ಹಲವಾಗಲಿ ವಂದಿಸಿದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ