-ಕರ‍್ಲಕುಂಟೆ ಗ್ರಾಮದ ಕನ್ನಡ ರಕ್ಷಣಾ, ಸಾಂಸ್ಕೃತಿಕ ವೇದಿಕೆಯಿಂದ ಕನ್ನಡಿಗರಿಗೆ ಮೀಸಲಾತಿ ಪ್ರಕಟಿಸಲು ಮನವಿ
-----ಕನ್ನಡಪ್ರಭವಾರ್ತೆ ಚಳ್ಳಕೆರೆ
ಹಲವಾರು ವರ್ಷಗಳಿಂದ ಬೆಂಗಳೂರು ನಗರವೂ ಸೇರಿದಂತೆ ರಾಜ್ಯದ ಪ್ರತಿಷ್ಠಿತ ನಗರಗಳಲ್ಲಿ ಕಾರ್ಯನಿರ್ವಹಿಸುವ ಖಾಸಗಿ ಕಂಪನಿಗಳು ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಅನೇಕ ಬಾರಿ ಮನವಿ ಮಾಡಿದ್ದು. ಇತ್ತೀಚೆಗೆ ಸರ್ಕಾರ ಕನ್ನಡಿಗರಿಗೆ ಉದ್ಯೋಗವನ್ನು ದೊರಕಿಸಿಕೊಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯ ಮೂಲಕ ಮೀಸಲಾತಿ ನೀತಿ ಪ್ರಕಟಿಸಿ, ಪುನಃ ಅದನ್ನು ತಡೆ ಹಿಡಿದಿರುವುದನ್ನು ಕರ‍್ಲಕುಂಟೆ ಗ್ರಾಮದ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ತೀರ್ವವಾಗಿ ಖಂಡಿಸಿದೆ.ವೇದಿಕೆಯ ಅಧ್ಯಕ್ಷ, ಪತ್ರಕರ್ತ ಕರ‍್ಲಕುಂಟೆ ತಿಪ್ಪೇಸ್ವಾಮಿ ತಹಶೀಲ್ದಾರ್‌ಗೆ ನೀಡಿದ ಮನವಿಯಲ್ಲಿ ರಾಜ್ಯ ಸರ್ಕಾರ ಖಾಸಗಿ ಕಂಪನಿಯಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸಿಕೊಡುವ ಲ್ಲಿ ಮೀನಾಮೇಷ ಎಣಿಸುತ್ತಿದೆಯಲ್ಲದೆ, ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ರಾಜ್ಯ ಸರ್ಕಾರ ಈ ನಡೆ ಕನ್ನಡಿಗರಲ್ಲಿ ಅಸಮಧಾನ ಹಾಗೂ ಅನುಮಾನ ಹುಟ್ಟುಹಾಕಿದೆ. ಮುಖ್ಯಮಂತ್ರಿಗಳು ಈ ಕೂಡಲೇ ಖಾಸಗಿ ಕಂಪನಿಗಳಲ್ಲಿ ಸ್ಥಳೀಯ ಕನ್ನಡಿಗೆ ನಿಖರವಾಗಿ ಉದ್ಯೋಗ ದೊರಕಿಸಿಕೊಡುವಲ್ಲಿ ಸ್ವಷ್ಟ ಆದೇಶ ಹೊರಡಿಸುವಂತೆ ಮನವಿ ಮಾಡಿದ್ಧಾರೆ.
ತಹಶೀಲ್ಧಾರ್ ಪರವಾಗಿ ಮನವಿ ಸ್ವೀಕರಿಸಿದ ಶಿರಸ್ತೇದಾರ ಸದಾಶಿವಪ್ಪ, ತಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮಖ್ಯಮಂತ್ರಿಗಳಿಗೆ ಕಳಿಸುವ ಭರವಸೆ ನೀಡಿದರು. ದಲಿತ ಸಂಘಟನೆಯ ಪ್ರಮುಖ ನಾಟಕ ಟಿ.ವಿಜಯಕುಮಾರ್, ಸಾಮಾಜಿಕ ಕಾರ್ಯಕರ್ತ ಎಸ್.ಎಚ್.ಸೈಯದ್, ಮೈತ್ರಿದ್ಯಾಮಣ್ಣ, ವಿ.ವೀರೇಂದ್ರ, ಮೂರ್ತಿ, ಮಹಂತೇಶ, ಎನ್.ಎಸ್. ಪಾಂಡು, ರಾಜಣ್ಣ, ಬಸವರಾಜ ಮುಂತಾದವರು ಮನವಿ ಅರ್ಪಿಸಿದರು.------
ಪೋಟೋ: ೧೮ಸಿಎಲ್ಕೆ೨ಚಳ್ಳಕೆರೆ ನಗರದ ತಾಲೂಕು ಕಚೇರಿ ಆವರಣದಲ್ಲಿ ಕರ‍್ಲಕುಂಟೆ ಗ್ರಾಮದ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಕನ್ನಡಿಗರಿಗೆ ಮೀಸಲಾತಿ ಪ್ರಕಟಿಸಬೇಕೆಂದು ಮನವಿ ಅರ್ಪಿಸಿದರು.