ಕಿನ್ನಿಗೋಳಿ ಸಮೀಪದ ಐಕಳ ಪಂಚಾಯಿತಿ ವ್ಯಾಪ್ತಿಯ ಏಳಿಂಜೆಯಲ್ಲಿ ಏಳಿಂಜೆ ಲಿಟ್ಲ್ ಫ್ಲವರ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹಂಚಿನ ಮಾಡಿನ ಮೇಲೆ ಮರ ಬಿದ್ದ ಕಾರಣ ಮಾಡು ಸಂಪೂರ್ಣ ಕುಸಿದ್ದು ಬಿದ್ದು ಹೆಚ್ಚಿನ ಹಾನಿ ಸಂಭವಿಸಿದೆ. ಶಾಲೆಯ ಮಕ್ಕಳಿಗೆ ಯಾವುದೇ ಹಾನಿಯಾಗಿಲ್ಲ.ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೆನ್ನಬೆಟ್ಟು ಗ್ರಾಮದ ಮೆನ್ನಬೆಟ್ಟುವಿನ ಶಂಕರ ಆಚಾರ್ಯ ಎಂಬವರ ಮನೆಯ ಮಾಡಿನ ಮೇಲೆ ಮರ ಬಿದ್ದು ಹೆಚ್ಚಿನ ಹಾನಿಯಾಗಿದೆ.ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ ಮೂಲ್ಕಿಯ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ನರ್ಸರಿ ವಿಭಾಗದ ಆಟದ ಮೈದಾನದ ಆವರಣ ಗೋಡೆಯು ಕುಸಿದು ಬಿದ್ದು ಹಾನಿ ಸಂಭವಿಸಿದೆ. ಮಕ್ಕಳಿಗೆ ಹಾನಿಯಾಗಿಲ್ಲ.
ಮೂಲ್ಕಿ ತಾಲೂಕಿನ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಗುತ್ತಕಾಡು ಎಂಬಲ್ಲಿ ಬಿರುಸಿನ ಗಾಳಿ ಮಳೆಗೆ ರವಿ ಪೂಜಾರಿ ಎಂಬವರ ಹಂಚಿನ ಮಾಡಿನ ಮನೆಯ ಒಂದು ಭಾಗ ಗೋಡೆ ಸಮೇತ ಸಂಪೂರ್ಣ ಕುಸಿದು ಬಿದ್ದು ಹೆಚ್ಚಿನ ಹಾನಿ ಸಂಭವಿಸಿದೆ.ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ ಮೂಲ್ಕಿಯ ಚರಂತಿ ಪೇಟೆಯಲ್ಲಿ ಕೋಟೆ ಕೊಪ್ಪಲ ದೈವಸ್ಥಾನದ ಬಳಿ ರಸ್ತೆ ಬದಿಯ ದೊಡ್ಡ ಮರದ ಗೆಲ್ಲೊಂದು ಗಾಳಿಗೆ ವಿದ್ಯುತ್ ವಯರ್ ಹಾಗೂ ರಸ್ತೆಯ ಮೇಲೆ ಬಿದ್ದು ಹಾನಿ ಸಂಭವಿಸಿದೆ.ಮೂಲ್ಕಿ ತಾಲೂಕಿನಲ್ಲಿ ಗುರುವಾರ ಬೆಳಗ್ಗಿನಿಂದ ನಿರಂತರವಾಗಿ ಬಿರುಸಿನ ಗಾಳಿ ಸಹಿತ ಭಾರಿ ಮಳೆಯಾಗಿದ್ದು ಕೆಲವಡೆ ಹೆಚ್ಚಿನ ಹಾನಿ ಸಂಭವಿಸಿದೆ. ಮೂಲ್ಕಿ ತಾಲೂಕಿನ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಗುತ್ತಕಾಡುನಲ್ಲಿ ಬಿರುಸಿನ ಗಾಳಿ ಮಳೆಗೆ ರವಿ ಪೂಜಾರಿ ಎಂಬವರ ಹಂಚಿನ ಮನೆಯ ಒಂದು ಭಾಗ ಗೋಡೆ ಸಹಿತ ಸಂಪೂರ್ಣ ಕುಸಿದು ಬಿದ್ದು ಹೆಚ್ಚಿನ ಹಾನಿ ಸಂಭವಿಸಿದೆ.
ಮೂಲ್ಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೂಲ್ಕಿಯ ಚರಂತಿಪೇಟೆ ಕೋಟೆ ಕೊಪ್ಪಲ ದೈವಸ್ಥಾನದ ಬಳಿ ಒಳ ರಸ್ತೆಯಲ್ಲಿ ಮರದ ಗೆಲ್ಲು ವಿದ್ಯುತ್ ವಯರ್ ಹಾಗೂ ರಸ್ತೆಯ ಮೇಲೆ ಬಿದ್ದು ಹಾನಿ ಸಂಭವಿಸಿದೆ. ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದು ಮರ ತೆರವು ಕಾರ್ಯ ನಡೆಯುತ್ತಿದೆ. ಹಾನಿಗೀಡಾದ ಸ್ಥಳಕ್ಕೆ ಮೂಲ್ಕಿ ತಾಲೂಕು ಉಪ ತಹಸೀಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ನಿರೀಕ್ಷಕ ದಿನೇಶ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.