- ಗೆದ್ಲೆಹಳ್ಳಿಯ ಶಿವಮೊಗ್ಗ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ನಗದಿಯತ್ ಕಾವಲಿನ ಕೈಗಾರಿಕಾ ವಲಯ ವೀಕ್ಷಣೆ
ಬಯಲು ಪ್ರದೇಶವಾದ ಕಡೂರು ತಾಲೂಕಿನಲ್ಲಿ ಸಾವಿರಾರು ಯುಜನರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಕೈಗಾರಿಕೆ ಗಳನ್ನು ತೆರೆಯಲು ಸಕಲ ಸಿದ್ಧತೆ ನಡೆಯುತ್ತಿದೆ ಎಂದು ಶಾಸಕ ಕೆ.ಎಸ್ .ಆನಂದ್ ಹೇಳಿದರು.
ಬುಧವಾರ ಕ್ಷೇತ್ರದ ಗೆದ್ಲೆಹಳ್ಳಿ ಸಮೀಪದ ಶಿವಮೊಗ್ಗ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನಗದಿಯತ್ ಕಾವಲಿನಲ್ಲಿ ಸುಮಾರು 50 ಕೋಟಿ ರು. ವೆಚ್ಚದಲ್ಲಿ ಆರಂಭವಾಗುತ್ತಿರುವ ಕೈಗಾರಿಕಾ ವಲಯದಲ್ಲಿ ಕೆಐಎಡಿಬಿ ಅಧಿಕಾರಿ ಗಳೊಂದಿಗೆ ಭೇಟಿ ನೀಡಿ ಮೂಲಭೂತ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.ಕಡೂರು ತಾಲೂಕಿನಲ್ಲಿ ಯಾವುದೇ ಕೈಗಾರಿಕೆಗಳು ಇಲ್ಲದ ಕಾರಣ ತಾಲೂಕಿನ ಗ್ರಾಮೀಣ ಯುವಕರು ಕೆಲಸವಿಲ್ಲದೆ ಅನಿವಾರ್ಯವಾಗಿ ಬೆಂಗಳೂರಿನಂತಹ ನಗರಗಳಿಗೆ ಹೋಗುವ ಪರಿಸ್ಥಿತಿ ಇದೆ. ಸ್ಥಳೀಯವಾಗಿಯೇ ನಮ್ಮ ಯುವಕರಿಗೆ ಉದ್ಯೋಗ ಸಿಗುವಂತೆ ಕ್ರಮ ವಹಿಸುತ್ತಿದ್ದೇನೆ ಎಂದರು.
ಈಗಾಗಲೇ 15 ಲಕ್ಷ ಲೀ. ಸಾಮರ್ಥ್ಯದ ಕುಡಿವ ನೀರಿನ ಟ್ಯಾಂಕ್ ನಿರ್ಮಾಣವಾಗಿದ್ದು. ಈಗ 200 ಬ್ಲಾಕ್ ಗಳ ನಿರ್ಮಾಣ, ಕನಿಷ್ಠ 1/2 ಎಕರೆಯಿಂದ ಗರಿಷ್ಠ 10 ಎಕರೆವರೆಗೂ ನಿರ್ಮಾಣ ಕಾರ್ಯ ನಡೆದಿದೆ. ಉದ್ಯಮಿಗಳು ತಾವು ನಡೆಸುವ ಕೈಗಾರಿಕೆ ಗಳಿಗೆ ಬೇಕಾದ ವಿಸ್ತ್ರೀರ್ಣದ ಬ್ಲಾಕ್‌ಗಳನ್ನು ಖರೀದಿಸಲು ಇದೇ ಜ. 18 ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿದೆ. ಈಗಾಗಲೇ ಅನೇಕ ಅರ್ಜಿಗಳು ಬಂದಿದ್ದು ,1 ಎಕರೆಗೆ 53 ಲಕ್ಷ ರು. ನಿಗದಿ ಪಡಿಸಲಾಗಿದೆ. ಇದರಲ್ಲಿ ಸಾಮಿಲ್ ಮಾಲೀಕರು ಅರ್ಜಿ ಸಲ್ಲಿಸಿದ್ದು ಅವರಿಗೆ ಪ್ರತ್ಯೇಕ ಬ್ಲಾಕ್ ನೀಡುವ ಬಗ್ಗೆ ಯೋಚನೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಈ ಕೈಗಾರಿಕಾ ವಲಯ ಅತ್ಯಂತ ಆಧುನಿಕ ವಿನ್ಯಾಸದಲ್ಲಿ ರೂಪುಗೊಂಡಿದೆ. ಕೂಡಲೆ ಬಂದ ಅರ್ಜಿಗಳನ್ನು ಪರಿಗಣಿಸಿ ಬ್ಲಾಕ್ ಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಿವಮೊಗ್ಗ -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಿರುವ ಈ ಕೈಗಾರಿಕಾ ಪ್ರದೇಶ ಅತ್ಯಂತ ವೇಗವಾಗಿ ಬೆಳೆಯಲಿದೆ. ಒಂದೆರೆಡು ಗಾರ್ಮೆಂಟ್ ಗಳು ಆರಂಭವಾದಲ್ಲಿ ನಮ್ಮ ತಾಲೂಕಿನ ಸಾವಿರಾರು ಮಹಿಳೆಯರಿಗೆ, ಜೊತೆಯಲ್ಲಿ ನಿರುದ್ಯೋಗಿ ಯುವಕರಿಗೂ ಉದ್ಯೋಗ ಸಿಗಲಿದೆ. ಕಡೂರು ಪಟ್ಟಣದ ಬೆಳವಣಿಗೆಗೂ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಕೈಗಾರಿಕಾ ಪ್ರದೇಶಕ್ಕೆ ಬೇಕಾದ ಸೌಲಭ್ಯ ನೀಡಲು ತಾವು ಸಿದ್ಧ.
10ಕೆಕೆಡಿಯು1.1ಎ
10ಕೆಕೆಡಿಯು1ಎ.