ಕನ್ನಡಪ್ರಭ ವಾರ್ತೆ, ತರೀಕೆರೆ
ಲಕ್ಕವಳ್ಳಿಯ ಗಣಪತಿ ಸಮುದಾಯ ಭವನದಲ್ಲಿ ತರೀಕೆರೆ ತಾಲೂಕು ಕರ್ನಾಟಕ ಜಾನಪದ ಪರಿಷತ್ ನಿಂದ ತರೀಕೆರೆ ತಾಲೂಕು ಮಟ್ಟದ ಜಾನಪದ ಸಮ್ಮೇಳನ ಹಮ್ಮಿಕೊಳ್ಳಲು ಏರ್ಪಡಸಿದ್ದ ಪೂರ್ವಬಾವಿ ಸಭೆಯಲ್ಲಿ ಮಾತನಾಡುತ್ತಿದ್ದರು.
ಜಾನಪದ ಸಂಸ್ಕೃತಿ ಕಲೆ ಸಾಹಿತ್ಯ ಸಂಗೀತ ರಕ್ಷಿಸಲು ತಳಮಟ್ಟದಿಂದ ಗ್ರಾಮ ಪಂಚಾಯಿತಿ, ಹೋಬಳಿ, ತಾಲೂಕು ಮಟ್ಟದಲ್ಲಿ ಇಂತಹ ಜಾನಪದ ಜಾತ್ರೆ ಮತ್ತು ಸಮ್ಮೇಳನವನ್ನು ಯುವಜನತೆ ಒಳಗೊಂಡಂತೆ ಎಲ್ಲರ ಸಲಹೆ, ಸೂಚನೆ, ಪ್ರೋತ್ಸಾಹ ದೊಂದಿಗೆ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.ಮುಖಂಡ ಸೀನೋಜಿ ರಾವ್ ಮಾತನಾಡಿ ಲಕ್ಕವಳ್ಳಿಯಲ್ಲಿ ಇಲ್ಲಿಯವರೆಗೆ ಜಾನಪದ ಸಮ್ಮೇಳನ ನಡೆದಿಲ್ಲ. ಜಾನಪದ ಸಂಸ್ಕೃತಿ, ಕಲೆ, ಸಾಹಿತ್ಯಕ್ಕೆ, ಸಂಬಂಧಿಸಿದಂತೆ ಅರಿವು ಮತ್ತು ಜಾಗೃತಿ ಮೂಡಿಸಲು ಅಗತ್ಯವಾಗಿ ಒಂದು ಅದ್ಧೂರಿ ಜಾನಪದ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ. ತಾಲೂಕಿನಲ್ಲಿ ಹಿರಿಯ ಜಾನಪದ ಕಲಾ ಸಾಧಕರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಮೆರವಣಿಗೆಯೊಂದಿಗೆ ಗೌರವಿಸಿ ಸನ್ಮಾನಿಸ ಲಾಗುವುದು. ಆದ್ದರಿಂದ ಎಲ್ಲ ಜಾನಪದ ಕಲಾಪೋಷಕರು ಸಹಕಾರ ನೀಡಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಕಂಸಾಳೆ, ಭಜನೆ ಕಲಾವಿದರಿಗೆ ಅವರ ಪ್ರತಿಭೆ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಲಾಗುವುದು, ಅದ್ದರಿಂದ ತಾಲೂಕಿನ ಎಲ್ಲಾ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಫೆ. 4 ರಂದು ಲಕ್ಕವಳ್ಳಿಯಲ್ಲಿ ತರೀಕೆರೆ ತಾಲೂಕು ಮಟ್ಟದ ಜಾನಪದ ಸಮ್ಮೇಳನ ನಡೆಸಲು ಪಟ್ಟಣದ ಪ್ರಮುಖರು, ಕರ್ನಾಟಕ ಜಾನಪದ ಪರಿಷತ್ತಿನ ಪದಾಧಿಕಾರಿಗಳು ಸರ್ವಾನುಮತದಿಂದ ನಿರ್ಧಾರ ಕೈಗೊಂಡರು.
ಲಕ್ಕವಳ್ಳಿಯಲ್ಲಿ ತರೀಕೆರೆ ಮಟ್ಟದ ಜಾನಪದ ಸಮ್ಮೇಳನ ಪೂರ್ವಬಾವಿ ಸಭೆಯಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್, ತಾಲೂಕು ಅಧ್ಯಕ್ಷ ಅರ್. ನಾಗೇಶ್ , ಮುಖಂಡರಾದ ಸೀನೋಜಿರಾವ್, ರಮೇಶ್ , ಸಂಧ್ಯಾ ದತ್ತಾತ್ರಿ, ಮತ್ತಿತರರು ಭಾಗವಹಿಸಿದ್ದರು.