ಸಹಕಾರ ರಂಗದಿಂದ ರೈತರು, ಮಹಿಳೆಯರ ಸಬಲೀಕರಣ

KannadaprabhaNewsNetwork |  
Published : Nov 22, 2026, 01:45 AM IST
ಮೂಡುಬಿದಿರೆ ಯಲ್ಲಿ  ಸಸ್ಯಾಹಾರ ಜನ ಜಾಗೃತಿ ಜಾಥಾ  | Kannada Prabha

ಸಾರಾಂಶ

ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ತಿಂಗಳಿಗೆ ಎರಡು ಬಾರಿ ಕೈಗೆ ಹಣ ಬರುತ್ತದೆ, ರೈತರ ಬದುಕು ಹಸನಾಗಿದೆ ಎಂದು ತಿಳಿಸಿದರು.

೭೩ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾಯಕ್ರಮಕ್ಕೆ ಚಾಲನೆ ನೀಡಿ ಕೋಮುಲ್ ನಿರ್ದೇಶಕ ಹನುಮೇಶ್ ಅಭಿಮತ

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ

ಸಹಕಾರಿ ರಂಗದಿಂದ ಮಾತ್ರವೇ ರೈತರು, ಮಹಿಳೆಯರ ಆರ್ಥಿಕ ಸಬಲೀಕರಣ ಸಾಧ್ಯವಾಗಲಿದ್ದು, ಸಮರ್ಪಕ ಸಾಲ ಮರುಪಾವತಿಯ ಮೂಲಕ ಈ ಸಂಸ್ಥೆಗಳನ್ನು ಉಳಿಸಿ ಬೆಳೆಸಬೇಕು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಇದರ ಸೌಲಭ್ಯ ತಲುಪಿಸಬೇಕು ಎಂದು ಕೋಮುಲ್ ನಿರ್ದೇಶಕ ಹನುಮೇಶ್ ಕರೆ ನೀಡಿದರು.

ಶ್ರೀನಿವಾಪುರ ಸರ್ಕಾರಿ ನೌಕರರ ಭವನದಲ್ಲಿ ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಡಿಸಿಸಿ ಬ್ಯಾಂಕ್, ಕೋಚಿಮುಲ್ ಶ್ರೀನಿವಾಸಪುರದ ಉಪಕಚೇರಿ, ಸಹಕಾರ ಇಲಾಖೆ, ಶ್ರೀನಿವಾಪುರ ತಾಲೂಕಿನ ಎಲ್ಲಾ ಎಂಪಿಸಿಎಸ್‌ಗಳು ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ನಡೆದ ೭೩ನೇ ಅಖಿಲ ಭಾರತ ಸಹಕಾರ ಸಪ್ತಾಹ-೨೦೨೬ರ ೫ನೇ ದಿನದ ಅಂಗವಾಗಿ ‘ಸಾರ್ವಜನಿಕ/ಖಾಸಗಿ-ಸಹಕಾರಿ ಪಾಲುದಾರಿಕೆ ಬಲಪಡಿಸುವ ದಿನ’ದ ಕಾಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೋಲಾರ ಜಿಲ್ಲೆಯ ರೈತರು ಇಂದು ಆತ್ಮಹತ್ಯೆಗಳಿಂದ ದೂರವಿದ್ದಾರೆ ಎಂದರೆ ಅದಕ್ಕೆ ಸಹಕಾರಿ ಸಂಸ್ಥೆಗಳೇ ಕಾರಣ ಎಂದ ಅವರು, ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ತಿಂಗಳಿಗೆ ಎರಡು ಬಾರಿ ಕೈಗೆ ಹಣ ಬರುತ್ತದೆ, ರೈತರ ಬದುಕು ಹಸನಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಸಿ.ಮುನಿವೆಂಕಟಪ್ಪ ಮಾತನಾಡಿ, ಸಹಕಾರಿ ಸಂಸ್ಥೆಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಯೂನಿಯನ್ ಕೆಲಸ ಮಾಡುತ್ತಿದೆ, ಸಹಕಾರಿ ರಂಗದ ಪ್ರತಿನಿಧಿಗಳು, ನೌಕರರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಹಕಾರಿ ಸಪ್ತಾಹದ ಅಂಗವಾಗಿ ಈ ಏಳುದಿನವೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಒಂದೊಂದು ದಿನ ಕಾರ್ಯಕ್ರಮ ನಡೆಸುತ್ತಿದ್ದೇವೆ, ಸಪ್ತಾಹದ ಮೂಲಕ ಸಹಕಾರ ತತ್ವಗಳ ಮಹತ್ವವನ್ನು ಸಾರುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ಡಿಸಿಸಿ ಬ್ಯಾಂಕ್ ಬಲಗೊಳಿಸೋಣ:

ಡಿಸಿಸಿ ಬ್ಯಾಂಕ್ ನಿರ್ದೇಶಕಿ ನಾಗರತ್ನಮ್ಮ ಮಾತನಾಡಿ, ಡಿಸಿಸಿ ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆದು ಬ್ಯಾಂಕಿನಲ್ಲಿ ತಮ್ಮ ವಹಿವಾಟು ನಡೆಸಿದಲ್ಲಿ ಮಹಿಳೆಯರಿಗೆ ಅವರ ಆರ್ಥಿಕ ಚಟುವಟಿಕೆಗಳಿಗೆ ತಕ್ಕಂತೆ ಸಾಲ ಸೌಲಭ್ಯವನ್ನು ನೀಡಲಾಗುತ್ತಿತ್ತು, ಇದೀಗ ಅದು ಸ್ಥಗಿತಗೊಂಡಿದ್ದು, ಮಹಿಳೆಯರು ಸಂಕಷ್ಟಕ್ಕೀಡಾಗಿದ್ದಾರೆ ಇದನ್ನು ತಪ್ಪಿಸಲು ನೂತನ ಆಡಳಿತ ಮಂಡಳಿ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು.

ಮಹಿಳೆಯರು, ರೈತರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸುವ ಮೂಲಕ ಡಿಸಿಸಿ ಬ್ಯಾಂಕ್ ಅಭಿವೃದ್ದಿಗೆ ಸಹಕರಿಸಬೇಕು ಮಹಿಳಾ ಸಂಘಗಳಿಗೆ ಸಾಲ ನೀಡುವ ಶಕ್ತಿ ಬೆಳೆಯಲು ಸಾಲವಸೂಲಾತಿ, ಠೇವಣಿ ಸಂಗ್ರಹ ಅತಿ ಮುಖ್ಯ ಎಂದ ಅವರು, ಬ್ಯಾಂಕ್ ಉಳಿಸಲು ಶ್ರಮಿಸುವ ನಮ್ಮ ಬೋರ್ಡ್‌ನೊಂದಿಗೆ ಕೈಜೋಡಿಸಬೇಕು ಎಂದರು.

ಕೋಮುಲ್ ನಿರ್ದೇಶಕ ಕೆ.ಕೆ.ಮಂಜು ಮಾತನಾಡಿ, ಕೋಲಾರ ಹಾಲು ಒಕ್ಕೂಟವೂ ಸಹಕಾರಿ ಸಂಸ್ಥೆಯಾಗಿದ್ದು, ಜಿಲ್ಲೆಯ ಜನರ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದೆ, ಇಂತಹ ಸಂಸ್ಥೆಗಳಿಂದ ಮಾತ್ರವೇ ರೈತರ ಬದುಕು ಹಸನಾಗುತ್ತದೆ ಎಂದರು.

ಸಹಕಾರಿ ಬ್ಯಾಂಕುಗಳಲ್ಲಿ ರೈತರು, ಮಹಿಳೆಯರು ಧೈರ್ಯದಿಂದ,ಸ್ವಾಭಿಮಾನದಂದ ಸಾಲ ಕೇಳಬಹುದು, ಅದು ನಿಮ್ಮ ಸಂಸ್ಥೆ ಆದರೆ ಖಾಸಗಿ ಬ್ಯಾಂಕುಗಳು ನಿಮ್ಮನ್ನು ಕೂರಿಸಿ ಮಾತನಾಡುವ ಸಂಸ್ಕಾರವನ್ನು ಹೊಂದಿರುವುದಿಲ್ಲ ಎಂದು ಎಚ್ಚರಿಸಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಕೋಮುಲ್, ಡಿಸಿಸಿ ಬ್ಯಾಂಕ್ ಜಿಲ್ಲೆಯ ಜೀವನಾಡಿಯಾಗಿದ್ದವು, ಇತ್ತೀಚೆಗೆ ಡಿಸಿಸಿ ಬ್ಯಾಂಕ್ ಸ್ವಲ್ಪ ಹಿನ್ನಡೆ ಅನುಭವಿಸಿದ್ದರೂ ನೂತನ ಆಡಳಿತ ಮಂಡಳಿ ಅದನ್ನು ಸರಿದಾರಿಗೆ ತರುವ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಯೂನಿಯನ್ ನಿದೇಶಕರಾದ ಜಿ.ಸಿ.ಮಂಜುನಾಥರೆಡ್ಡಿ, ಮಾಜಿ ನಿರ್ದೇಶಕ ಕೇತಗಾನಹಳ್ಳಿ ನಾಗರಾಜ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ವೆಂಕಟರೆಡ್ಡಿ, ಟಿಎಪಿಸಿಎಂಸಿ ಅಧ್ಯಕ್ಷ ವೆಂಕಟರೆಡ್ಡಿ, ಕೋಮುಲ್ ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಕೆ.ಎಂ.ಮುನಿರಾಜು, ಸಹಕಾರ ಅಭಿವೃದ್ದಿ ಅಧಿಕಾರಿ ಮುಸ್ತಾಕ್ ಅಹಮದ್, ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಭಾರತಿ ನಿರೂಪಿಸಿ, ಸ್ವಾಗತಿಸಿದರು. ಯೂನಿಯನ್ ಸಿಬ್ಬಂದಿ ರವಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಜಲಿ ಕೊಲೆ ಪ್ರಕರಣ: ಗಿರೀಶ್ ಅಪರಾಧಿ; 25ಕ್ಕೆ ಶಿಕ್ಷೆ ಪ್ರಕಟ
ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಜೀವನ ನಡೆಸಿ