ನರಗುಂದ: ಮಹಿಳೆಯರ ಪರ ಯೋಜನೆ ಜಾರಿ ಮಾಡಿ ರಕ್ಷಣೆಗೆ ಕಂಕಣಬದ್ಧವಾದ ಏಕೈಕ ಪಕ್ಷ ಕಾಂಗ್ರೆಸ್ ಆಗಿದೆ. ಅದು ಅಧಿಕಾರಕ್ಕೆ ಬಂದರೆ ಮಾತ್ರ ಮಹಿಳೆಯರ ಸಬಲೀಕರಣ ಸಾಧ್ಯ ಎಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.
ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಮಾತನಾಡಿ, ಮೋದಿಯವರಿಂದ ಅಭಿವೃದ್ಧಿ ಅಸಾಧ್ಯ. ಕೇವಲ ಸುಳ್ಳು ಹೇಳುತ್ತಾ ಜನರಿಗೆ ದ್ರೋಹ ಬಗೆದಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಸಂಸದರಾದ ಗದ್ದಿಗೌಡರು ಸಂಸತ್ತಲ್ಲಿ ಮಾತನಾಡದ ಸಂಸದರ ಸಾಲಿಗೆ ಸೇರಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ.ಇಂತಹ ಸಂಸದರನ್ನು ಸೋಲಿಸಿ ಜನರ ಧ್ವನಿಯಾಗುವ ಸಂಯುಕ್ತಾರನ್ನು ಬೆಂಬಲಿಸುವಂತೆ ವಿನಂತಿಸಿದರು.
ಸಚಿವ ಶಿವಾನಂದ ಪಾಟೀಲ ಮಾತನಾಡಿ, ಬಾಗಲಕೋಟೆ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸಿದೆ. ರಾಜ್ಯದಲ್ಲಿ 18 ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ ಎಂದರು.ಮಾಜಿ ಶಾಸಕ ಬಿ.ಆರ್. ಯಾವಗಲ್ ಮಾತನಾಡಿ, ಅಭಿವೃದ್ಧಿ ಪರ ಆಡಳಿತಕ್ಕೆ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಪ್ಪಣ್ಣ ನಾಯ್ಕರ, ಎಫ್.ವೈ. ದೊಡಮನಿ, ರಾಜುಗೌಡ ಕೆಂಚನಗೌಡ್ರ, ದ್ಯಾಮಣ್ಣ ಸವದತ್ತಿ, ಪ್ರವೀಣ ಯಾವಗಲ್ , ಉಮಾ ದ್ಯಾವನೂರ, ವಿರೇಶ ಚುಳಕಿ, ವಿಜಯ ಚಲವಾದಿ, ಸಿ.ಬಿ. ಪಾಟೀಲ, ವಿಷ್ಟು ಸಾಠೆ, ಪ್ರಕಾಶ ಹಡಗಲಿ ಹಾಗೂ ಕಾಂಗ್ರೆಸ್ ಮುಖಂಡರಿದ್ದರು.