ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಪಟ್ಟಣದ ಹರದೊಳ್ಳಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ ನಿಮಿತ್ತ ಭಾನುವಾರ ಶ್ರೀರಾಮನಾಟ್ಯ ಸಂಘ ಹಮ್ಮಿಕೊಂಡಿದ್ದ ಸಿಡಿದೆದ್ದ ಶಿವಶಕ್ತಿ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಹಿರಿಯ ರಂಗಕರ್ಮಿ ಡಾ. ಭೀಮನಗೌಡ ಪಾಟೀಲ ಮಾತನಾಡಿ, ಸಿಡಿದೆದ್ದ ಶಿವಶಕ್ತಿ ಎಂಬ ನಾಟಕ ಕಳೆದ 30 ವರ್ಷಗಳ ಹಿಂದೆ ಅಮೋಘ ಪ್ರದರ್ಶನ ಕಂಡಿದೆ. ಹರದೊಳ್ಳಿಯ ರಂಗಭೂಮಿ ಕಲೆಗೆ ತನ್ನದೇ ಆದ ವಿಶೇಷತೆ ಇದೆ. ಅದನ್ನು ತಾವೆಲ್ಲ ಉಳಿಸಿ ಬೆಳೆಸಬೇಕು ಎಂದರು.ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿದರು. ಚಿನ್ಮಯಾನಂದ ಶ್ರೀಗಳು ಹಾಗೂ ರುದ್ರಮಣಿ ಶ್ರೀಗಳು ಸಾಹಿತ್ಯವಹಿಸಿ ಆಶೀರ್ವಚನ ನೀಡಿದರು. ಲಕ್ಷ್ಮಣ ಹಾಲನ್ನವರ, ಆನಂದಪ್ಪ ವಾಲಿಕಾರ, ಆಸಂಗೆಪ್ಪ ನಕ್ಕರಗುಂದಿ, ಆನಂದ ಗೌಡ್ರ, ಶಂಕರ್ ಲಕ್ಕುಂಡಿ, ಈರಣ್ಣ ಕಂದಗಲ, ಶಬ್ಬೀರ ನಾಯಕ, ನಾಗರಾಜ ಮೇಟಿ, ಮಹಾಂತೇಶ ವಾಲಿಕಾರ, ಮುತ್ತು ಗೌಡರ, ಎಚ್ಚರಪ್ಪ ಬಡಿಗೇರ, ನಿಂಗರಾಜ ವಾಲಿಕಾರ ಸೇರಿದಂತೆ ಶ್ರೀ ರಾಮ ನಾಟ್ಯ ಸಂಘದ ಹಿರಿಯ ಮುಖಂಡರು, ಯುವಕರು ಉಪಸ್ಥಿತರಿದ್ದರು.ನಂತರ ಕವಿ ಡಿ.ಆರ್. ಪೂಜಾರ್ ವಿರಚಿತ ಸಿಡಿದೆದ್ದ ಶಿವ ಶಕ್ತಿ ಅರ್ಥಾರ್ಥ ರೈತನ ಬಾಳು ಕಣ್ಣೀರಿನ ಗೋಳು ಎಂಬ ಸುಂದರ ಸಾಮಾಜಿಕ ನಾಟಕ ರಾತ್ರಿಯಿಡಿ ಪ್ರದರ್ಶನ ನಡೆದು ನೋಡುಗರ ಗಮನ ಸೆಳೆಯಿತು.