ಹುಬ್ಬಳ್ಳಿ:
ಇಲ್ಲಿನ ಮೂರುಸಾವಿರ ಮಠದ ಮೂಜಗಂ ಸಭಾಭವನದಲ್ಲಿ ಶನಿವಾರದಿಂದ ಆರಂಭವಾದ ಎರಡು ದಿನಗಳ ಸೊಪ್ಪು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
''''''''ಧನರೇಖೆ ಇದ್ದು ಫಲವೇನು? ಆರೋಗ್ಯ ರೇಖೆ ಇಲ್ಲದ ಮೇಲೆ'''''''' ಎಂಬ ಶರಣರ ವಚನವನ್ನು ಉಲ್ಲೇಖಿಸಿದ ಶ್ರೀಗಳು, ಆರೋಗ್ಯ ತಂದುಕೊಡುವ ಸೊಪ್ಪುಗಳನ್ನು ಬಳಸಲು ಗ್ರಾಹಕರಿಗೆ ತಿಳಿಸಿದರು. ನಮ್ಮ ಆರೋಗ್ಯ ಕಾಪಾಡಲು ಶ್ರಮಿಸುತ್ತಿರುವ ಸಾವಯವ ರೈತರನ್ನು ನಾವೆಲ್ಲ ಪ್ರೋತ್ಸಾಹಿಸಬೇಕು ಎಂದರು.ಸಹಜ ಸಮೃದ್ಧ ಇಂತಹ ನಿರ್ಲಕ್ಷಿತ ಸೊಪ್ಪು ಮತ್ತು ಧಾನ್ಯಗಳನ್ನು ಗ್ರಾಹಕರಿಗೆ ಪರಿಚಯಿಸಲು ಶ್ರಮಿಸುತ್ತಿದೆ. ಇಂತಹ ಮೇಳಗಳು ನಮ್ಮ ನಿಜವಾದ ಅನ್ನದ ಪರಿಚಯ ಮಾಡಿಕೊಡುತ್ತಿವೆ. ಸಾವಯವ ಮೇಳ ಮತ್ತು ರೈತರ ಮಾರುಕಟ್ಟೆ ನಡೆಸಲು ಮೂರು ಸಾವಿರ ಮಠದ ಸಹಕಾರ ನೀಡುವುದಾಗಿ ತಿಳಿಸಿದರು.
ಅಜ್ಜಿಯ ಮಡಿಲು; ಸೊಪ್ಪಿನ ಕಡಲು ಕಾರ್ಯಕ್ರಮದ ಮೂಲಕ ಸಾಗುವಳಿ ಮಾಡದ ಸೊಪ್ಪಿನ ತಳಿಗಳ ಮಹತ್ವದ ಅರಿವು ಮೂಡಿಸುತ್ತಿರುವ ತುಮಕೂರಿನ ಮುರಳೀಧರ ಗುಂಗುರುಮಳೆ ಮಾತನಾಡಿ, ನಮಗೆ ಅರಿವಿಲ್ಲದ ನೂರಾರು ಸೊಪ್ಪುಗಳಿವೆ. ಇವು ಆಹಾರವಾಗಿ, ಔಷಧಿಯಾಗಿ ಬಳಕೆಯಾಗುತ್ತವೆ. ಇಂತಹ ಸೊಪ್ಪುಗಳ ಬಗ್ಗೆ ಅರಿತು, ಅವುಗಳ ಬಳಕೆ ಮಾಡಬೇಕು ಎಂದರು.
ವರೂರಿನ ಎಜಿಎಂ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವಿದ್ಯಾರ್ಥಿಗಳು ಔಷಧೀಯ ಸೊಪ್ಪುಗಳನ್ನು ಪ್ರದರ್ಶಿಸಿ, ಅವುಗಳ ಮಹತ್ವದ ಕುರಿತು ಮಾಹಿತಿ ನೀಡಿದರು. ಮೇಳದಲ್ಲಿ ಗೋಕರ್ಣದ ಕೆಂಪು ಹರಿವೆ, ನಾಗರಹೊಳೆ ಕಾಡಿನ ಬೆರಕೆ ಸೊಪ್ಪು, ಮಲೆನಾಡಿನ ಔಷಧೀಯ ಸೊಪ್ಪುಗಳು, ಉತ್ತರ ಕರ್ನಾಟಕದ ಹಕ್ಕರಕಿ, ಕಿರಕಸಾಲಿ, ಬಸಳೆ ಸೊಪ್ಪುಗಳು ಮಾರಾಟಕ್ಕೆ ಸಿಗುತ್ತಿವೆ. ಜತೆಗೆ ಸೊಪ್ಪಿನ ಬೀಜಗಳು, ಸೊಪ್ಪಿನ ಮೌಲ್ಯವರ್ಧಿತ ಪದಾರ್ಥಗಳು ಮಾರಾಟಕ್ಕಿವೆ.