ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಸ್ಥಳೀಯ ರೆಸಾರ್ಟ್ ಒಂದರಲ್ಲಿ ನಡೆದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವಾರ್ಷಿಕೋತ್ಸವ ಮತ್ತು ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಸ್ಥಾಪಿತವಾಗಿರುವ ಬದನಗುಪ್ಪೆ- ಕೆಲ್ಲಂಬಳ್ಳಿ ಕೈಗಾರಿಕಾ ವಲಯ ನಿರೀಕ್ಷೆಗೂ ಮೀರಿ ಬೆಳವಣಿಗೆಯಾಗಿದೆ. ಆದರೆ ಇಲ್ಲಿ ಹೊರಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುತ್ತಿದ್ದಾರೆ. ಇದರ ಜೊತೆಗೆ ನಮ್ಮ ಜಿಲ್ಲೆಯವರೂ ವಿಶೇಷವಾಗಿ ಮಹಿಳೆಯರಿಗೆ ಕೈಗಾರಿಕೆಗಳನ್ನು ಸ್ಥಾಪಿಸಲು ಸಂಸ್ಥೆ ಉತ್ತೇಜನ ನೀಡಬೇಕು. ಸ್ಥಳೀಯವಾಗಿ ತಯಾರಿಸಿ ಚಾಮರಾಜನಗರ ಬ್ರ್ಯಾಂಡ್ ನಲ್ಲಿ ಮಾರುಕಟ್ಟೆ ಮಾಡಬಹುದು ಎಂದರು.ಚಾಮರಾಜನಗರ ರೈಲ್ವೆ ಮ್ಯಾಪ್ ನಲ್ಲಿ ಕೊನೆಯ ನಿಲ್ದಾಣ. ತಮಿಳುನಾಡಿನ ಮೆಟ್ಟುಪಾಳಯಂವರೆಗೆ ವಿಸ್ತರಿಸಿದರೆ ಒಂದು ಮಿಸ್ಸಿಂಗ್ ಲಿಂಕ್ ಜೋಡಿಸಿದಂತೆ ಆಗುತ್ತದೆ. ಆದರೆ ರೈಲ್ವೆಯವರು ದಿಂಬಂ ಮಾರ್ಗ ಹತ್ತಾರು ಸುರಂಗಗಳನ್ನು ಕೊರೆದು ಅರಣ್ಯ ಹಾನಿಗೊಳಪಡಿಸುವ ಸರ್ವೇ ನಡೆಸಿ ವರದಿ ಕೊಟ್ಟಿದ್ದರು. ಸಾವಿರಾರು ಮರಗಳ ಹನನ, ಕಾಡು ನಾಶ, ವನ್ಯಪ್ರಾಣಿಗಳ ಸುಗಮ ಸಂಚಾರಕ್ಕೆ ಅಡ್ಡಿ ಮುಂತಾದ ಕಾರಣಗಳನ್ನು ನೀಡಿ ಅರಣ್ಯ , ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಈ ರೈಲು ಮಾರ್ಗಕ್ಕೆ ಅನುಮತಿ ನಿರಾಕರಿಸಿತು. ರೈಲು ಮಾರ್ಗ ಬೆಳೆದರೆ ಮಾತ್ರ ಕೈಗಾರಿಕಾ ಬೆಳವಣಿಗೆ ಸಾಧ್ಯ. ಕೊನೆ ಪಕ್ಷ ಈಗ ಮಾಡಲು ಉದ್ದೇಶಿಸಿರುವ ಹೆಜ್ಜಾಲ, ಮಳವಳ್ಳಿ, ಕೊಳ್ಳೇಗಾಲ ಮಾರ್ಗ ಚಾಮರಾಜನಗರ ರೈಲು ಮಾರ್ಗವಾದರೂ ಅನುಷ್ಠಾನಗೊಳ್ಳಬೇಕು ಎಂದರು.
ಬದನಗುಪ್ಪೆ- ಕೆಲ್ಲಂಬಳ್ಳಿ ಕೈಗಾರಿಕಾ ವಲಯ ಸ್ಥಾಪನೆಗೊಂಡಾಗ ನಾನು ಎಫ್ ಕೆಸಿಸಿ ಅಧ್ಯಕ್ಷನಾಗಿದ್ದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೊಯಮತ್ತೂರಿಗೆ ಕರೆದೊಯ್ದು ರೋಡ್ ಶೋ ಮಾಡಿಸಿದ ಫಲ ಇಂದು ಆ ಕೈಗಾರಿಕಾ ವಲಯ ಬೃಹತ್ ಆಗಿ ಬೆಳೆಯಲು ಸಾಧ್ಯವಾಗಿದೆ ಎಂದರು.