ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ಅಗತ್ಯ: ಆರ್‌.ವೆಂಕಟರಮಣಯ್ಯ

KannadaprabhaNewsNetwork | Published : Sep 10, 2024 1:31 AM

ಸಾರಾಂಶ

ನರಸಿಂಹರಾಜಪುರ, ಕ್ರೀಡೆಯಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳೆವಣಿಗೆಗೆ ಸಹಕಾರಿಯಾಗಲಿದೆ ಎಂದು ಬೆಳ್ಳೂರು ಸರ್ಕಾರಿ ಪ್ರೌಢ ಶಾಲೆ ಎಸ್‌ ಡಿಎಂಸಿ ಅಧ್ಯಕ್ಷ ಆರ್‌. ವೆಂಕಟರಮಣಯ್ಯ ತಿಳಿಸಿದರು.

ಬೆಳ್ಳೂರು ಸರ್ಕಾರಿ ಶಾಲೆಯಲ್ಲಿ ವಲಯ ಮಟ್ಟದ ಖೋ ಖೋ ಪಂದ್ಯಾವಳಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕ್ರೀಡೆಯಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳೆವಣಿಗೆಗೆ ಸಹಕಾರಿಯಾಗಲಿದೆ ಎಂದು ಬೆಳ್ಳೂರು ಸರ್ಕಾರಿ ಪ್ರೌಢ ಶಾಲೆ ಎಸ್‌ ಡಿಎಂಸಿ ಅಧ್ಯಕ್ಷ ಆರ್‌. ವೆಂಕಟರಮಣಯ್ಯ ತಿಳಿಸಿದರು.

ಸೋಮವಾರ ಬೆಳ್ಳೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರೌಢ ಶಾಲಾ ವಿಭಾಗದ ಖೋ ಖೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ಅಗತ್ಯ ಎಂದರು.

ಸೀತೂರು ಗ್ರಾಪಂ ಸದಸ್ಯ ಎನ್‌.ಪಿ.ರಮೇಶ್‌ ಮಾತನಾಡಿ, ತೀರ್ಪುಗಾರರು ಯಾವುದೇ ಬೇಧ ಭಾವ ಮಾಡದೆ ಸೂಕ್ತ ತೀರ್ಪು ನೀಡಬೇಕು. ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವುದೇ ಮುಖ್ಯ ಎಂದರು.

ಸೀತೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ.ಎಸ್‌. ಉಮೇಶ್‌ ಮಾತನಾಡಿ, ಹಿಂದೆ ಪ್ರತಿಯೊಬ್ಬರೂ ಶ್ರಮ ವಹಿಸಿ ದೈಹಿಕ ಕೆಲಸ ಮಾಡುತ್ತಿದ್ದರು. ಪ್ರಸ್ತುತ ದೈಹಿಕ ಕೆಲಸ ಕಡಿಮೆಯಾಗಿದ್ದು ಹೆಚ್ಚಾಗಿ ಮೊಬೈಲ್‌, ಟಿ.ವಿ. ನೋಡುತ್ತಾ ಕಾಲ ಕಳೆ ಯುತ್ತಾರೆ. ಮಕ್ಕಳು ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು.

ಗ್ರಾಪಂ ಮಾಜಿ ಸದಸ್ಯ ಎಚ್‌.ಇ.ಮಹೇಶ್‌, ಕೊನೋಡಿ ಪಂಚವಟಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಬಿ.ಎಸ್‌. ಮಂಜುನಾಥ್‌, ಬೆಳ್ಳೂರು ಪ್ರೌಢ ಶಾಲೆ ಎಸ್‌ ಡಿ ಎಂ ಸಿ ಸದಸ್ಯ ಸದಾಶಿವ, ಧ.ಗ್ರಾ.ಯೋಜನೆ ಒಕ್ಕೂಟದ ಅಧ್ಯಕ್ಷ ಶೇಖರ ಶೆಟ್ಟಿ, ಶಾಲಾ ಮುಖ್ಯೋಪಾದ್ಯಾಯಿನಿ ಸುಧಾ, ಅರ್ಚನ, ಅನಂತಪದ್ಮನಾಭ , ದಯಾನಂದ ಇದ್ದರು.

ಧ. ಗ್ರಾ. ಯೋಜನೆ ಸದಸ್ಯರು ಶ್ರಮದಾನದ ಮೂಲಕ ಕ್ರೀಡಾಂಗಣ ಸ್ವಚ್ಛಗೊಳಿಸಿದರು. ಖೋ ಖೋ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಮೊರಾರ್ಜಿ ವಸತಿ ಶಾಲೆ ಮಕ್ಕಳು ಪ್ರಥಮ, ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಮಕ್ಕಳು ದ್ವಿತೀಯ ಸ್ಥಾನ ಪಡೆದರು. ಬಾಲಕಿಯರ ವಿಭಾಗದ ಖೋ ಖೋ ಪಂದ್ಯಾವಳಿಯಲ್ಲಿ ಶೆಟ್ಟಿಕೊಪ್ಪ ಬರ್ಕ ಮನ್ ಶಾಲೆ ಮಕ್ಕಳು ಪ್ರಥಮ ಹಾಗೂ ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆ ಮಕ್ಕಳು ದ್ವಿತೀಯ ಸ್ಥಾನ ಪಡೆದರು.

Share this article