ಕನ್ನಡಪ್ರಭ ವಾರ್ತೆ ಹಿರಿಯೂರು
ಗ್ರಾಮದ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣವಾಗಿದ್ದು ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ತಹಸೀಲ್ದಾರ್ ಅವರು ನಾಲ್ಕು ಬಾರಿ ತೆರವು ಮಾಡಿಕೊಳ್ಳಲು ನೋಟಿಸ್ ನೀಡಿದ್ದು ತಾಲೂಕು ದಂಡಾಧಿಕಾರಿಗಳ ಆದೇಶಕ್ಕೂ ಅಕ್ರಮ ಶೆಡ್ ನಿರ್ಮಾಣದಾರರು ಕ್ಯಾರೆ ಎಂದಿಲ್ಲ. ಸರ್ಕಾರಿ ಭೂಮಿಯನ್ನು ಉಳಿಸಬೇಕಾದ ಸರ್ಕಾರಿ ಅಧಿಕಾರಿಗಳೇ ಅಸಹಾಯಕರಾಗಿ ಕುಳಿತಿರುವುದು ವಿಪರ್ಯಾಸವಾಗಿದೆ. ಅಕ್ರಮ ಶೆಡ್ ನಿರ್ಮಾಣದಾರರ ಬೆನ್ನಿಗೆ ಯಾರು ನಿಂತಿದ್ದಾರೆ ಎಂಬ ಸತ್ಯ ಆದಷ್ಟು ಬೇಗ ಹೊರಬಂದು ತಾಲೂಕಿನ ಜನತೆಗೆ ತಿಳಿಯಬೇಕಿದೆ. ಕಾನೂನು ರೀತಿಯ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಕ್ರಮ ಜರುಗಿಸಿ ಶೆಡ್ ಗಳನ್ನು ತೆರವು ಮಾಡದಿದ್ದರೆ ತಾಲೂಕು ಕಚೇರಿ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಡಿಎಸ್ಎಸ್ ಮುಖಂಡ ಹೆಗ್ಗೆರೆ ಮಂಜುನಾಥ್ ಮಾತನಾಡಿ, ಅಕ್ರಮ ಶೆಡ್ ತೆರವಿಗೆ ಒಂದರ ಹಿಂದೊಂದು ನೋಟೀಸ್ ಜಾರಿ ಮಾಡಿದ ಅಧಿಕಾರಿಗಳು ಅವುಗಳಲ್ಲಿನ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ. 60 ದಿನಕ್ಕೊಂದು ನೋಟೀಸ್ ನೀಡಿ ನೋಟೀಸ್ ನೀಡುವ ನಿಯಮಗಳನ್ನು ಮುರಿದಿದ್ದಾರೆ. ಸರ್ಕಾರಿ ಭೂಮಿ ಹೊಡೆಯುವವರನ್ನು ಈ ರೀತಿ ರಕ್ಷಿಸಿಕೊಂಡು ಬಂದರೆ ಹೇಗೆ? ಒಂದು ನೋಟೀಸ್ ನಲ್ಲಿದ್ದ ಹೆಸರು ಇನ್ನೊಂದು ನೋಟೀಸ್ ನಲ್ಲಿ ಇರುವುದಿಲ್ಲ. ಈ ರೀತಿಯ ತಪ್ಪುಗಳನ್ನು ನಿರಂತರವಾಗಿ ಈ ವಿಚಾರದಲ್ಲಿ ಮಾಡಿರುವ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ಕೂಡಲೇ ಅಮಾನತು ಮಾಡಬೇಕು ಎಂದರು.ಈ ವೇಳೆ ರಾಜ್ಯ ವಿಭಾಗೀಯ ಪ್ರಧಾನ ಸಂಚಾಲಕ ಹೆಗ್ಗೆರೆ ಮಂಜುನಾಥ್, ಚಿತ್ರದುರ್ಗ ಜಿಲ್ಲಾಧ್ಯಕ್ಷ ಕೋದಂಡರಾಮ ಸ್ವಾಮಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭಾಗ್ಯಮ್ಮ,ಜಿಲ್ಲಾ ಪ್ರಧಾನ ಸಂಚಾಲಕ ಕುಮಾರ್, ಕೆ. ಆರ್ ಹಳ್ಳಿ ರಘು, ಕೃಷ್ಣಪ್ಪ, ರಂಗಪ್ಪ ಯಾದವ್, ಕಣುಮಪ್ಪ, ಪ್ರಕಾಶ್, ಎಚ್.ರವಿ, ತಿಪ್ಪೇಸ್ವಾಮಿ, ನರಸಿಂಹಮೂರ್ತಿ, ಕೇಶವಮೂರ್ತಿ, ಮನು ಗೌಡ, ನಿಂಗಮ್ಮ, ಮಂಜಮ್ಮ, ಸಿದ್ದಮ್ಮ, ಸರಳಮ್ಮ, ಹರ್ಷಿದ ನೂರ್ ಜಾನ್, ಪ್ರವೀಣ್, ಕವಿನ್ ಮುಂತಾದವರು ಹಾಜರಿದ್ದರು.