ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲೊಂದಾದ ವಾಸವಿ ವಿದ್ಯಾಸಂಸ್ಥೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಜಾಗವು ವಿವಾದಿತವಾಗಿದೆ. ಸದ್ಯ ಈಜಾಗ ಸರ್ಕಾರಿ ಜಾಗ, ಇದನ್ನ ಅತಿಕ್ರಮಿಸಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಅಣಗಳ್ಳಿ ದಶರಥ್ ಹಿಂದಿನಿಂದಲೂ ಗಂಭೀರ ಆರೋಪ ಮಾಡಿದ್ದರು. ಈ ಪರಿಣಾಮ ಕಂದಾಯ ಇಲಾಖೆ ದಾಖಲೆಯಲ್ಲೂ ಸರ್ವೆ ನಂ.706 ಎ ನಲ್ಲಿನ 80ಸೆಂಟ್ ಜಾಗ ಸರ್ಕಾರಿ ಜಾಗ, ಇದು ಬರಿಲಾ ಗ್ರೌಂಡ್ ಎಂದು ( ಸಾರ್ವಜನಿಕರ ಸ್ಮಶಾನ) ನಮೂದಾಗಿರುವ ಹಿನ್ನೆಲೆ ಗುರುವಾರ ತಹಸೀಲ್ದಾರ್ ಅತಿಕ್ರಮ ತೆರವಿಗೆ ಸೂಚಿಸಿದ ಹಿನ್ನೆಲೆ ತಾಲೂಕು ಸರ್ವೆಯರಾದ ಪುಟ್ಟರಾಜು, ಕಂದಾಯ ನಿರೀಕ್ಷಕ ನಿರಂಜನ್, ನಗರಸಭೆ ಕಂದಾಯಾಧಿಕಾರಿ ರಾಘವೇಂದ್ರ, ತುಷಾರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ವಾಸವಿ ವಿದ್ಯಾಸಂಸ್ಥೆ ಅತಿಕ್ರಮಿಸಿ ಬಳಸಲಾಗುತ್ತಿರುವ 80ಸೆಂಟ್ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿ ತೆರವಿಗೆ ಮುಂದಾದರು, ಈ ವೇಳೆ ಆರ್ಯ ವೈಶ್ಯ ಸಮಾಜದ ಕುಮಾರಕೃಷ್ಣ, ಹರೀಶ್, ದಿವಾಕರ್, ನಾಗೇಂದ್ರ, ಸತೀಶ್ ಸೇರಿದಂತೆ ಹಲವರು ನೋಟಿಸ್ ನೀಡಿದ ಬಳಿಕ ತೆರವುಗೊಳಿಸಿ, ಇದರಲ್ಲಿ ನಮ್ಮ ತಕರಾರಿಲ್ಲ, ಆದರೆ ಈ ಜಾಗಕ್ಕೆ ನಮ್ಮ ಬಳಿ ಸೂಕ್ತ ದಾಖಲೆಗಳಿವೆ. ಈ ಹಿನ್ನೆಲೆಯಲ್ಲಿ ನಮಗೆ ಕಾಲಾವಕಾಶ ನೀಡಿ, ನಾವು ನಿಮ್ಮ ಕೆಲಸಕ್ಕೆ ಅಡ್ಡಿ ಬರಲ್ಲ ಎಂದು ಮನವಿ ಮಾಡಿದರು.ಕೆಲಕಾಲ ವಾಗ್ವಾದ: ಸ್ಥಳಕ್ಕೆ ಅಧಿಕಾರಿಗಳ ತಂಡ ಆಗಮಿಸುತ್ತಿದ್ದಂತೆ ಆರ್ಯವೈಶ್ಯ ಸಂಸ್ಥೆಯ ಹಾಗೂ ವಾಸವಿ ವಿದ್ಯಾಸಂಸ್ಥೆಯ ಪದಾಧಿಕಾರಿಗಳು ನೋಟಿಸ್ ನೀಡಿ ತೆರವುಗೊಳಿಸಿ, ಈ ದಿನ ಈ ಕೆಲಸ ದಯಮಾಡಿ ಬೇಡ ಎಂದು ತಕಾರು ತೆಗೆದ ಹಿನ್ನೆಲೆ ಕೆಲಕಾಲ ವಾಗ್ವಾದ ನಡೆಯಿತು. ಏಕಾಏಕಿ ನೋಟಿಸ್ ನೀಡದೆ ತೆರವು ಪ್ರಕರಣ ಸರಿಯಲ್ಲ ಎಂದು ಹಲವರು ಪ್ರಶ್ನಿಸಿದರು. ಈ ವೇಳೆ ಅಧಿಕಾರಿಗಳು ಮಾತನಾಡಿ ಅತಿಕ್ರಮ ತೆರವು ವಿಚಾರದಲ್ಲಿ ನೋಟಿಸ್ ನೀಡುವ ಪ್ರಶ್ನೆಯೆ ಇಲ್ಲ, ಇದು ಸರ್ಕಾರಿ ಜಾಗ ಹಾಗಾಗಿ ನೋಟಿಸ್ ನೀಡುವುದಿಲ್ಲ ಎಂದು ವಾದ ಮಂಡಿಸಿದರು. ಬಳಿಕ ವಾಸವಿ ಸಂಸ್ಥೆಯವರು ಕೆಲ ಸಮಯ ನೀಡಿ ನಮ್ಮ ಬಳಿ ದಾಖಲಾತಿ ಇದ್ದು ಪರಿಶೀಲಿಸಿ, ಆದಾಗ್ಯೂ ತಾವು ಕ್ರಮಕ್ಕೆ ಮುಂದಾಗುವುದಾದರೆ ನಾವು ಅಡ್ಡಿ ಪಡಿಸಲ್ಲ, ಈ ದಿನ ಸಹಕರಿಸಿ ಎಂದು ಮನವಿ ಸಲ್ಲಿಸಿದ ಹಿನ್ನೆಲೆ ಆಗಮಿಸಿದ ಅಧಿಕಾರಿಗಳು ತಹಸೀಲ್ವಾರ್ ಅವರ ಗಮನಕ್ಕೆ ತಂದು ನಿರ್ಗಮಿಸಿದರು. ಪರಿಶೀಲಿಸಿ ಮುಂದಿನ ಕ್ರಮ, ಅಧಿಕಾರಿಗಳ ಸ್ಪಷ್ಟನೆ:
ನಾವು ಪರಿಶೀಲನೆಗೆ ತೆರಳಿದ ವೇಳೆ ವಾಸವಿ ಸಂಸ್ಥೆಯ ಪದಾಧಿಕಾರಿಗಳು ಈ ಜಾಗಕ್ಕೆ ನಾವು ಇ-ಸ್ವತ್ತು ಹೊಂದಿದ್ದೆವೆ, ದಾಖಲೆಗಳಿವೆ ಎಂದು ಮನವಿ ಪತ್ರದ ಜೊತೆ ಕೆಲ ದಾಖಲೆ ನೀಡಿದ್ದಾರೆ, ಈ ಹಿನ್ನೆಲೆ ತಹಸೀಲ್ದಾರ್ ಗಮನಕ್ಕೆ ತಂದು ಮನವಿ ಸ್ವೀಕರಿಸಿ ವಾಪಸ್ಸಾಗಿದ್ದೇವೆ, ದಾಖಲಾತಿ ಪರಿಶೀಲಿಸಿದ ಬಳಿಕ ಮುಂದಿನ ಕ್ರಮಕೈಗೊಳ್ಳುವುದಾಗಿ ತಾಲೂಕು ಭೂಪನಾಧಿಕಾರಿ ಪುಟ್ಟಸ್ವಾಮಿ ಕನ್ನಡಪ್ರಭಕ್ಕೆ ತಿಳಿಸಿದರು.80ಸೆಂಟ್ ಜಾಗವನ್ನು ತೆರವು ಮಾಡುವುದಾಗಿ ತಹಸೀಲ್ದಾರ್ ಆದೇಶಿದ್ದರು. ಅದರಂತೆ ನಾವು ಸಹ ಸ್ಥಳಕ್ಕೆ ಆಗಮಿಸಿದ್ದೇವೆ, ಅಧಿಕಾರಿಗಳ ಬೆಳವಣಿಗೆ ಕುರಿತು ಆಚೆ ನಿಂತು ವೀಕ್ಷಿಸುತ್ತಿದ್ದೆವು. ಆದರೆ, ತಹಸೀಲ್ದಾರ್ ಆದೇಶವನ್ನು ಆರ್‌ಐ, ತಾಲೂಕು ಸರ್ವೇಯರ್, ನಗರಸಭೆ ಕೆಲ ಅಧಿಕಾರಿಗಳು ಉಲ್ಲಂಘಿಸಿದ್ದಾರೆ. ಅತಿಕ್ರಮ ತೆರವಿಗೆ ಆಗಮಿಸಿದ ಅಧಿಕಾರಿಗಳು ಜೆಸಿಬಿ ತಂದಿರಲಿಲ್ಲ, ಮಾತುಕತೆ ಆಡಿ ತೆರಳಿದ್ದಾರೆ. ಈ ಬೆಳಣಿಗೆ ನಮಗೆ ಅನುಮಾನ ಮೂಡಿಸದೆ. -ನಾಗಣ್ಣ, ಅಂಬೇಡ್ಕರ್ ಸಂಘದ ನಿರ್ಗಮಿತ ಪದಾಧಿಕಾರಿವಾಸವಿ ಸಂಸ್ಥೆಯಿಂದ ಸರ್ಕಾರಿ ಜಾಗ ಅತಿಕ್ರಮ: