ಕನ್ನಡಪ್ರಭ ವಾರ್ತೆ ತಾಳಿಕೋಟೆ
ಧರಣಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಕೀರ್ತಿ ಚಾಲಕ ಇವರು ಕೂಡಲೇ ದಾರಿ ಮಾಡಿ ಕೊಡಲು ಪ್ರಾರಂಭಿಸಲಾಗುವುದು. ಕಾರಣ ಧರಣಿ ಕೈ ಬಿಡಿ ಎಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮತ್ತು ದಾರಿ ಮಾಡಿಕೊಡಲು ಪ್ರಾರಂಭಿಸಿದ ಕಾರಣ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಿಂಪಡೆಯಲಾಯಿತು. ಅಂದು ಮಧ್ಯಾಹ್ನ ೩ ಗಂಟೆಗೆ ಪೊಲೀಸ್ ಬಂದೋಬಸ್ತ್‌ನಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ದಾರಿ ಮಾಡಿ ಕೊಡುವ ಕಾರ್ಯಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ರೈತ ಸಂಘದ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ದ್ಯಾಮನಗೌಡ ಹಾದಿಮನಿ, ಶ್ರೀನಿವಾಸ ಗೊಟಗುಣಕಿ, ಮಲ್ಲನಗೌಡ ದೇವರಡ್ಡಿ, ತಾಲೂಕು ಉಪಾಧ್ಯಕ್ಷ ಶಿವಯೋಗಿ ಗೊಟಗುಣಕಿ, ಮಲ್ಲಣ್ಣ ಸಿಂಗನಳ್ಳಿ, ಮಡಿವಾಳವ್ವ ಮಾರಲಭಾವಿ, ಲಕ್ಷ್ಮೀಬಾಯಿ ಗೊಟಗುಣಕಿ, ಗಂಗಮ್ಮ ಸಿಂಗನಳ್ಳಿ ಮೊದಲಾದವರು ಇದ್ದರು.