ಕನ್ನಡಪ್ರಭ ವಾರ್ತೆ ತುರುವೇಕೆರೆ
ಪಟ್ಟಣದ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕ ಹಾಗೂ ಶಿವಬಸವ ನೌಕರರ ಸೌಹಾರ್ದ ಸಹಕಾರ ಸಂಘ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ವೀರಶೈವ ಲಿಂಗಾಯತ ನೌಕರರ ಸಮಾವೇಶ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಶ್ರೀಮಂತಿಕೆ ಎಂಬುದು ದೇವರಿಂದಲೂ ದೂರ. ಈ ಹಿಂದೆ ಅಗರ್ಭ ಶ್ರೀಮಂತಿಕೆ ಇದ್ದವರು ಈಗ ಬಡವರಾಗಿದ್ದಾರೆ. ದೇವರಿಗೆ ಚಿನ್ನದ ಕಿರೀಟ ನೀಡಿದವರಿಗೆ ಯಾವ ಸ್ಥಿತಿ ಬಂತು ಎಂದು ನೋಡಿದ್ದೇವೆ. ಆದ್ದರಿಂದ ಶ್ರೀಮಂತಿಕೆ ಇದ್ದಾಗ ಬಹಳ ಎಚ್ಚರಿಕೆಯಿಂದ ನಡೆಯುವುದು ಸೂಕ್ತ. ಬಡವರಿಗೆ ಸಮಾಜಕ್ಕೆ ತಮ್ಮ ಕೈಲಾದ ಸಹಾಯ ಮಾಡುವಂತಹ ಗುಣ ಬೆಳಸಿಕೊಳ್ಳಬೇಕು ಎಂದರು.ಲಿಂಗಾಯತ ಧರ್ಮ ಎಲ್ಲಾ ಸಮಾಜದವರ ಜೊತೆ ಬೆಸೆದುಕೊಂಡು ಜೀವನ ಸಾಗಿಸುವ ಮೂಲಕ ಬಸವಣ್ಣನವರ ಆಶಯಗಳನ್ನು ಈಡೇರಿಸುತ್ತಿದೆ. ಕೆಳವರ್ಗದ ಜನರನ್ನು ಆತ್ಮೀಯತೆಯಿಂದ ಕಾಣುವುದು ಲಿಂಗಾಯತ ಸಮುದಾಯವಾಗಿದೆ. ನಾವುಗಳು ಜಾತಿ ಮತ, ಧರ್ಮ ಮಾಡಿಕೊಂಡಿದ್ದೇವೆ. ಜಗತ್ತಿನಲ್ಲಿ ಎಲ್ಲ ಶಿವಮಯ, ಲಿಂಗಮಯ. ಉತ್ತಮ ನಡೆತೆ, ದೇವರಲ್ಲಿ ಭಕ್ತಿ ಭಾವನೆ ಪಾಲಿಸುವನು ಯಾವುದೇ ಜಾತಿಯಾಗಿದ್ದರು ಆತ ಲಿಂಗವಂತನಾಗುತ್ತಾನೆ. ವೀರಶೈವ. ಲಿಂಗಾಯತ ಒಳ ಪಂಗಡಗಳು ಅಳಿದು ಹೋಗುತ್ತಿದೆ. ಎಲ್ಲ ಲಿಂಗಾಯತರು ಒಳಪಂಗಡಗಳಲ್ಲಿ ಹೆಣ್ಣು ಗಂಡು ಕೊಟ್ಟು ತಂದು ಮಾವ ಭಾಮೈದ, ಅಣ್ಣ ತಮ್ಮಂದಿರಾಗಿ ಸಂಬಂಧಗಳು ಬೆಸೆದುಕೊಂಡಿವೆ ಎಂದರು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮೌಂಟ್ ಎವರೆಸ್ಟ್ ಏರಿದ ಸಾಧಕಿ ಅಮ್ಮಸಂದ್ರದ ಚಿನ್ಮಯಿ ಪೋಷಕರು ತಮ್ಮ ಮಕ್ಕಳನ್ನು ಕೇವಲ ವಿದ್ಯಾಭ್ಯಾಸ, ಅಂಕಗಳಿಕೆಗೆ ಒತ್ತಡ ಹೇರಬೇಡಿ. ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಒತ್ತು ನೀಡುವಂತೆ ಪ್ರೋತ್ಸಾಹಿಸಿ. ನಾನು ವಿದ್ಯಾಭ್ಯಾಸ ಮಾಡಿದ ಸಂದರ್ಭದಲ್ಲಿ ಟಾಪರ್ ಆಗಿದ್ದೆ. ವಿದ್ಯೆ ಜೊತೆ ಕ್ರೀಡೆಗೂ ಹೆಚ್ಚು ಒತ್ತು ನೀಡಿದ್ದೆ. ನಾನು ವೃತ್ತಿಯಲ್ಲಿ ವೈದ್ಯ ಆಗಿದ್ದರೂ ಸಹ ಕ್ರೀಡಾಭಿಮಾನ ಬಿಡದೆ ಮೌಂಟ್ ಎವರೆಸ್ಟ್ ಏರಿ ಸಾಧನೆ ಮಾಡಿದೆ. ಹಾಗಾಗಿ ಮಕ್ಕಳು ಸಾಧನೆಯ ಕನಸ್ಸು ಕಾಣಬೇಕು. ಏನನ್ನಾದರೂ ಸಾಧನೆ ಮಾಡಬೇಕು ಎಂದರು.