ಓದು, ಬರಹದೊಂದಿಗೆ ಮನರಂಜನಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ

KannadaprabhaNewsNetwork |  
Published : Jan 11, 2025, 12:46 AM IST
ಎಕ್ಸಲೆಂಟ್ ಸಂಸ್ಥೆಯಲ್ಲಿ ಹಾಸ್ಯ ಸಂಜೆ ಕಾರ್ಯಕ್ರಮ | Kannada Prabha

ಸಾರಾಂಶ

ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ ಎಂಬ ಕವಿವಾಣಿಯಂತೆ ನಾವೆಲ್ಲ ಸದಾ ಉಲ್ಲಾಸದಿಂದರಬೇಕು. ನಾಳೆಯ ಚಿಂತೆಯಲ್ಲಿ ಇಂದಿನ ಸಂತೋಷ ಕಳೆದುಕೊಳ್ಳಬಾರದು ಎಂದು ಎಕ್ಸಲೆಂಟ್ ಸಂಸ್ಥೆಯ ನಿರ್ದೇಶಕಿ ಪುಷ್ಪಾ ಬಸವರಾಜ ಕೌಲಗಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ ಎಂಬ ಕವಿವಾಣಿಯಂತೆ ನಾವೆಲ್ಲ ಸದಾ ಉಲ್ಲಾಸದಿಂದರಬೇಕು. ನಾಳೆಯ ಚಿಂತೆಯಲ್ಲಿ ಇಂದಿನ ಸಂತೋಷ ಕಳೆದುಕೊಳ್ಳಬಾರದು ಎಂದು ಎಕ್ಸಲೆಂಟ್ ಸಂಸ್ಥೆಯ ನಿರ್ದೇಶಕಿ ಪುಷ್ಪಾ ಬಸವರಾಜ ಕೌಲಗಿ ಹೇಳಿದರು.

ನಗರದ ಕೆಎಸ್‌ಆರ್‌ಟಿಸಿ ಕಾಲೋನಿಯಲ್ಲಿರುವ ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಶಾರದಾ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಕ್ಕರೆ ಆರೋಗ್ಯ ವೃದ್ಧಿಸುತ್ತದೆ. ಮಾತ್ರವಲ್ಲ ಮಾನವ ಸಂಬಂಧ ಗಟ್ಟಿಗೊಳ್ಳುತ್ತವೆ. ವರ್ಷ ಕಳೆದು ಹೊಸ ವರುಷ ಬರುವುದು ಪ್ರಕೃತಿಯ ನಿಯಮ. ಹಳೆಯ ಸಂಸ್ಕಾರದ ಬೇರುಗಳ ಮೇಲೆಯೇ ನಮ್ಮ ಬದುಕಿನ ಬಳ್ಳಿಯ ಹೊಸ ಹೂವು ಅರಳುವುದು. ವಿದ್ಯಾರ್ಥಿಗಳು ಓದು, ಬರಹದೊಂದಿಗೆ ಮನರಂಜನಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗುವಿನಲ್ಲಿ ಹಲವಾರು ಪ್ರಕಾರಗಳಿವೆ. ವ್ಯಂಗ್ಯ ಅಪಹಾಸ್ಯ ಅತಿರೇಕದ ನಗುವನ್ನು ಬಿಡಬೇಕು. ಹಸಿದವರಿಗೆ ಅನ್ನ ಹಾಕಿದರೇ ಅವರಲ್ಲಿ ಕೃತಜ್ಞತೆಯ ನಗು ಬರಲು ಸಾಧ್ಯ. ಹಳೆಯ ವರ್ಷದ ಜತೆಗೆ ಕೋಪ, ವೈಷಮ್ಯ, ಸ್ವಾರ್ಥ, ಸಣ್ಣತನ ತೊಲಗಬೇಕು ಎಂದರು.ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಧಾವಂತದ ದಿನಗಳಲ್ಲಿ ನಮ್ಮತನದ ಸ್ವಾಭಿಮಾನ ಮಾನವೀಯತೆ ಮರೆತಿದ್ದೇವೆ. ಧ್ಯಾನ, ದಾನ, ದಯೆ ಕಾಯಕ, ಅಂತಃಕರಣ ನಮ್ಮ ಉಸಿರಾಗಬೇಕು. ಕಷ್ಟದಲ್ಲಿ ಕೈ ಹಿಡಿದು ನೆರವಾದವರಿಗೆ ಪ್ರತಿಯಾಗಿ ನಾವೂ ಸಹಾಯ ಮಾಡಬೇಕು. ಕಳೆದ ವರ್ಷದ ಸಮಸ್ತ ದಿನಗಳು ಉತ್ತಮ ಅನುಭವಗಳೇ ಹೊಸ ವರ್ಷಕ್ಕೆ ಮಾರ್ಗದರ್ಶನವಾಗಲಿ. ಒತ್ತಡ ಜೀವನದಲ್ಲಿ ಆನಂದವಾಗಿರಲು ನಗುವೇ ದಿವ್ಯ ಔಷಧಿಯಾಗಿದೆ. ಎದುರಾಗುವ ಸಮಸ್ಯೆಗಳಿಗೆ ನಗುತ್ತಾ ಉತ್ತರಿಸಬೇಕು. ಸಾಧನೆಯಿಂದ ಎಷ್ಟೇ ಎತ್ತರಕ್ಕೆ ಬೆಳೆದರು ಕೂಡ ಸರ್ವರ ಹೃದಯಕ್ಕೆ ಹತ್ತಿರವಾದಾಗಲೇ ಜೀವನ ಸಾಫಲ್ಯ ಎಂದು ತಿಳಿಸಿದರು.ಯೂಟ್ಯೂಬರ್ ಮಿಮಿಕ್ರಿ ಮಾಳು ಅನೇಕ ಕಲಾವಿದರ ಧ್ವನಿ ಅನುಕರಣೆ ಹಾಗೂ ಕನ್ನಡ ಚಿತ್ರಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಹಾಗೂ ಉಪಪ್ರಾಚಾರ್ಯ ಮಂಜುನಾಥ ಜುನಗೊಂಡ ಹಾಗೂ ಉಪನ್ಯಾಸಕರು, ವಸತಿ ನಿಲಯದ ಮೇಲ್ವಿಚಾರಕರು ಪಾಲ್ಗೊಂಡಿದ್ದರು. ಕುಮಾರಿ ಶೃತಿ ವಾಲಿಕಾರ ಪ್ರಾರ್ಥಿಸಿದಳು. ಉಪನ್ಯಾಸಕರಾದ ವೀರೇಶ ಕಂಬಿ ನಿರ್ವಹಿಸಿದರು. ಶರಣಗೌಡ ಪಾಟೀಲ ಸ್ವಾಗತಿಸಿದರು. ರಮೇಶ ಬಾಗೇವಾಡಿ ನಿರೂಪಿಸಿದರು. ಎಂ.ಎಂ.ಮಲಘಾಣ ವಂದಿಸಿದರು.ನಕ್ಕರೆ ಆರೋಗ್ಯ ವೃದ್ಧಿಸುತ್ತದೆ. ಮಾತ್ರವಲ್ಲ ಮಾನವ ಸಂಬಂಧ ಗಟ್ಟಿಗೊಳ್ಳುತ್ತವೆ. ವರ್ಷ ಕಳೆದು ಹೊಸ ವರುಷ ಬರುವುದು ಪ್ರಕೃತಿಯ ನಿಯಮ. ಹಳೆಯ ಸಂಸ್ಕಾರದ ಬೇರುಗಳ ಮೇಲೆಯೇ ನಮ್ಮ ಬದುಕಿನ ಬಳ್ಳಿಯ ಹೊಸ ಹೂವು ಅರಳುವುದು. ವಿದ್ಯಾರ್ಥಿಗಳು ಓದು ಬರಹದೊಂದಿಗೆ ಮನರಂಜನಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು.

-ಪುಷ್ಪಾ ಬಸವರಾಜ ಕೌಲಗಿ, ಎಕ್ಸಲೆಂಟ್ ಸಂಸ್ಥೆಯ ನಿರ್ದೇಶಕಿ.

ಪರಿಸರ ಸಂರಕ್ಷಣೆ ಕಥೆ, ಕವನ, ಬರೆಯುವ, ರೈತ ಮಹಿಳೆಯರಿಗೆ ಗೌರವಿಸಿ ಸತ್ಕರಿಸುವ ಹಾಗೂ ಈ ನೆಲದ ಸಂಸ್ಕೃತಿ ಬೆಳೆಸುವ ಜತೆಗೆ ಉತ್ತಮ ಪರೀಕ್ಷಾ ಫಲಿತಾಂಶ ಪಡೆಯುವ ಸಂಕಲ್ಪವನ್ನು ವಿದ್ಯಾರ್ಥಿಗಳು ತೊಡಬೇಕು.

-ಅಧ್ಯಕ್ಷ ಬಸವರಾಜ ಕೌಲಗಿ, ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ