ನಿವೃತ್ತಿಯ ನಂತರ ಸಾಂಘಿಕ ಚಟುವಟಿಕೆಗಳಲ್ಲಿ ತೊಡಗಿ: ಡಾ. ರಾಘವೇಂದ್ರ ನಾಯಕ

KannadaprabhaNewsNetwork |  
Published : Nov 11, 2024, 11:46 PM ISTUpdated : Nov 11, 2024, 11:47 PM IST
11 ರೋಣ 1.ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಮಾಸಿಕ ಸಭೆ ಉದ್ದೇಶಿಸಿ ಧಾರವಾಡದ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಮತ್ತು ನ್ಯುರೋ ಸೈನ್ಸ ವೈದ್ಯರಾದ ಡಾ. ರಾಘವೇಂದ್ರ ನಾಯಕ ಮಾತನಾಡಿದರು. | Kannada Prabha

ಸಾರಾಂಶ

ನಿವೃತ್ತಿಯ ನಂತರ ಖಾಲಿ ಕುಳಿತುಕೊಳ್ಳದೆ ಸಕ್ರಿಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ವೈದ್ಯ ಡಾ. ರಾಘವೇಂದ್ರ ನಾಯಕ ಹೇಳಿದರು.

ರೋಣ: ಮನಸ್ಸಿನ ಭಾವನೆಗಳು ಆಗಾಗ ಬದಲಾಗುತ್ತಿದ್ದರೆ ಅದು ಮಾನಸಿಕ ಆರೋಗ್ಯದ ಲಕ್ಷಣವಾಗಿರಬಹುದು. ಮಾನಸಿಕ ಕಾಯಿಲೆ ಕಂಡು ಹಿಡಿಯಲು ಯಾವುದೇ ಪರಿಕರಗಳಿಲ್ಲ. ನಿವೃತ್ತಿಯ ನಂತರ ಸಾಂಘಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಒತ್ತಡಗಳನ್ನು ತಡೆಗಟ್ಟಿ ಆರೋಗ್ಯದಿಂದ ಜೀವಿಸಬಹುದು ಎಂದು ಧಾರವಾಡದ ಇನ್ಸಿಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಮತ್ತು ನ್ಯುರೋ ಸೈನ್ಸ್ ವೈದ್ಯ ಡಾ. ರಾಘವೇಂದ್ರ ನಾಯಕ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಮಾಸಿಕ ಸಭೆ ಉದ್ದೇಶಿಸಿ ಮಾತನಾಡಿದರು.

ಇಳಿಯ ವಯಸ್ಸಿನಲ್ಲಿ ದೇಹ ಸದೃಢವಾಗಿಟ್ಟುಕೊಳ್ಳಬೇಕು. ಪೌಷ್ಟಿಕಾಂಶಯುತ ಆಹಾರ ಸೇವಿಸಬೇಕು. ನಿವೃತ್ತಿಯ ನಂತರ ಖಾಲಿ ಕುಳಿತುಕೊಳ್ಳದೆ ಸಕ್ರಿಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಮಾನಸಿಕ ರೋಗಗಳಿಗೆ ಮಕ್ಕಳು, ವೃದ್ಧರು, ಸಿರಿವಂತ, ಬಡವ ಎಂಬ ಯಾವುದೇ ಭೇದ-ಭಾವವಿರುವುದಿಲ್ಲ. ಎಲ್ಲ ವಯೋಮಾನದ ಎಲ್ಲ ವರ್ಗದ ಜನರಲ್ಲಿಯೂ ಮಾನಸಿಕ ಸಮಸ್ಯೆಗಳು ಇಂದು ಸಾಮಾನ್ಯವಾಗಿ ಕಂಡು ಬರಬಹುದು. ಮಾನಸಿಕ ಆರೋಗ್ಯ ಚಿಕಿತ್ಸಾ ಪ್ರಕ್ರಿಯೆಗಳಲ್ಲಿ 1956ಕ್ಕೂ ಮೊದಲು ಕೇವಲ ಶಾಕ್ ಟ್ರೀಟ್ಮೆಂಟ್ ಮಾತ್ರ ಅಸ್ತಿತ್ವದಲ್ಲಿತ್ತು. ಆದರೆ, ಪ್ರಸ್ತುತ ಸಾಕಷ್ಟು ಔಷಧಿಗಳು ಲಭ್ಯವಿದ್ದು, ಪ್ರತಿ ಜಿಲ್ಲೆ ತಾಲೂಕುಗಳಲ್ಲಿಯೂ ಇಂದು ಸರ್ಕಾರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮನೋವೈದ್ಯರ ಸೇವೆ ಒದಗಿಸುತ್ತಿದೆ. ಅವಶ್ಯವಿದ್ದವರು ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ದಂತ ವೈದ್ಯರಾದ ಡಾ. ಅಂಬಿಕಾ ನಾಯಕ, ಸರ್ಕಾರಿ ನಿವೃತ್ತ ನೌಕರರ ಸಂಘದ ರೋಣ ತಾಲೂಕು ಘಟಕದ ಅಧ್ಯಕ್ಷ ಎ.ಎಸ್. ಖತೀಬ, ಗೌರವಾಧ್ಯಕ್ಷ ಎಲ್.ಎಸ್. ಹಂಚಿನಾಳ, ಉಪಾಧ್ಯಕ್ಷ ಸಿ.ಎಚ್ .ನಾಯಕ್, ಪದಾಧಿಕಾರಿಗಳಾದ ಆರ್.ವೈ. ಮುರಕಿ, ಎಸ್.ಸಿ. ರಾಟಿಮನಿ, ವಿ.ಕೆ. ಪಾಟೀಲ, ಕೆ.ಎಸ್. ಬಾರಕೇರ, ಎಲ್.ಎಸ್. ತಳವಾರ, ಸಿ.ಬಿ. ರಡ್ಡೇರ, ಮಹದೇವಪ್ಪ ಹಾದಿಮನಿ, ರೆಹಮಾನಸಾಬ ಹೊಸಮನಿ ಸೇರಿದಂತೆ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ