ಕೃಷಿಯಿಂದ ದೇಶದ ಗಮನಾರ್ಹ ಬೆಳವಣಿಗೆ: ಟಿ.ಡಿ.ರಾಜೇಗೌಡ

KannadaprabhaNewsNetwork | Published : Nov 11, 2024 11:46 PM
Follow Us

ಸಾರಾಂಶ

ಬಾಳೆಹೊನ್ನೂರು, ಭಾರತ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, ಕೃಷಿಯಲ್ಲಿಯೇ ದೇಶ ಗಮನಾರ್ಹ ಬೆಳವಣಿಗೆ ಸಾಧಿಸಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಹೇರೂರು ಪಿಎಸಿಎಸ್‌ನ ರೈತರ ಮಾಹಿತಿ ಕೇಂದ್ರ ಉದ್ಘಾಟನೆಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಭಾರತ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, ಕೃಷಿಯಲ್ಲಿಯೇ ದೇಶ ಗಮನಾರ್ಹ ಬೆಳವಣಿಗೆ ಸಾಧಿಸಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಸಮೀಪದ ಹೇರೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನೂತನವಾಗಿ ನಿರ್ಮಾಣವಾದ ರೈತರ ಮಾಹಿತಿ ಕೇಂದ್ರ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ದೇಶ ಕೃಷಿಯಲ್ಲಿ ಸಾಧನೆ ಮಾಡಿರುವುದರಿಂದ ಇಲ್ಲಿನ ಕೃಷಿ ಉತ್ಪನ್ನಗಳನ್ನು ಬೇರೆ ಕಡೆಗೆ ರಫ್ತು ಮಾಡುವ ಸಾಮರ್ಥ್ಯ ಹೊಂದಿದೆ. ಸಹಕಾರ ಕ್ಷೇತ್ರವೇ ಇದಕ್ಕೆ ಮೂಲ ಕಾರಣ. ದೇಶ, ರಾಜ್ಯ ರಾಜಕಾರಣ ಮಾಡುವವರಿಗೆ ಅಧಿಕಾರದ ಹಪಹಪಿಕೆಗಿಂತ ಆಡಳಿತ ಯಂತ್ರ ಸಮರ್ಪಕವಾಗಿ ಮುನ್ನಡೆಸುವ ದೂರದೃಷ್ಠಿ ಇರಬೇಕು.

ಬಡ್ಡಿ, ಚಕ್ರಬಡ್ಡಿಗಳಿಗೆ ಕಡಿವಾಣ ಹಾಕುವ ಉದ್ಧೇಶದಿಂದಲೇ ಸಹಕಾರ ಸಂಸ್ಥೆಗಳು ಹುಟ್ಟಿಕೊಂಡಿದ್ದು, ಕಡಿಮೆ ಬಡ್ಡಿ ದರದ ಸಾಲ, ರಸ ಗೊಬ್ಬರ, ದಿನಸಿ, ದಿನ ಬಳಕೆ ವಸ್ತುಗಳು ರೈತರಿಗೆ ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡಿದವು. ಈ ಕ್ಷೇತ್ರದ ಶಾಸಕನಾಗಿ ಪಾದಾರ್ಪಣೆ ಮಾಡಿದ ಬಳಿಕ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಗ್ರಾಮೀಣ ಕ್ರೀಡೆಗಳು ಹಾಗೂ ಕೃಷಿ ಕ್ಷೇತ್ರಕ್ಕೆ ನನ್ನ ಕೈಲಾದ ಕೊಡುಗೆ ನೀಡಿದ ಸಂತೃಪ್ತಿಯಿದ್ದು, ನೂತನವಾಗಿ ನಿರ್ಮಾಣವಾದ ರೈತ ಮಾಹಿತಿ ಕೇಂದ್ರದ ಹೆಚ್ಚುವರಿ ಅಭಿವೃದ್ಧಿಗೆ ಆರಂಭಿಕ ಹಂತದಲ್ಲಿ ₹10 ಲಕ್ಷ ನೀಡಲಾಗುವುದು. ಶಾಸಕನಾಗಿ ಅಧಿಕಾರ ವಹಿಸಿಕೊಂಡ ಒಂದೇ ತಿಂಗಳಲ್ಲಿ ಕೆಲವು ಪ್ರಮುಖ ಅಭಿವೃದ್ಧಿಗೆ ₹2 ಕೋಟಿ ನೀಡಿದ್ದು, ಈ ಹೊಸ ಕಟ್ಟಡದ ಮುಂದುವರಿದ ಹೆಚ್ಚುವರಿ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ನೀಡಲು ಯತ್ನಿಸುವುದಾಗಿ ತಿಳಿಸಿದರು.ಪಿಎಸಿಎಸ್ ಅಧ್ಯಕ್ಷ ಕೆ.ಎಸ್.ರವೀಂದ್ರ ಮಾತನಾಡಿ, ಸಂಘದ ಪೂರ್ವಾಧ್ಯಕ್ಷರ ಶ್ರಮದಿಂದ ಅಭಿವೃದ್ಧಿ ಹೊಂದಿದ್ದು, ಸತತ ಲಾಭಾಂಶದಲ್ಲಿ ಮುನ್ನಡೆಯುತ್ತಿದೆ. ಸಂಘದಲ್ಲಿ ನೂತನ ರೈತ ಮಾಹಿತಿ ಕೇಂದ್ರ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಕೃಷಿ ಕುರಿತು ಮಾಹಿತಿ ನೀಡುವ ವ್ಯವಸ್ಥೆ ಮಾಡ ಲಾಗುವುದು ಎಂದರು.ಇದೇ ಸಂದರ್ಭದಲ್ಲಿ ಸಂಘದ ನಿವೃತ್ತ ಕಾರ್ಯದರ್ಶಿ ಕೆ.ಆರ್.ವಿಷ್ಣುಮೂರ್ತಿ, ಹಿರಿಯ ಸಹಕಾರಿ ಎಚ್.ಡಿ. ಶ್ರೀನಿವಾಸಗೌಡ ರನ್ನು ಸನ್ಮಾನಿಸಲಾಯಿತು. ಹೇರೂರು ಗ್ರಾಪಂ ಅಧ್ಯಕ್ಷ ಎಚ್.ಸಿ.ಅಶ್ವಥ್ ಹುಲ್ಕೋಡು, ಪಿಎಸಿಎಸ್ ಉಪಾಧ್ಯಕ್ಷ ಕೆ.ಬಿ.ಚಂದ್ರೇಗೌಡ, ನಿರ್ದೇಶಕರಾದ ಎನ್.ಎ.ಸಂಜೀವ, ನಾಗೇಶ್ ಅಮೀನ್, ಕೆ.ಅಣ್ಣಪ್ಪಗೌಡ, ಕೆ.ಪಿ.ರಂಗಪ್ಪಗೌಡ, ವಿನೋದ, ಎಂ.ಡಿ.ರಾಮಪ್ಪ, ಕೆ.ಎಸ್.ರಾಮಯ್ಯ, ಸಿಇಓ ಕೆ.ಪಿ.ವಿಶ್ವನಾಥ್, ಪಿಎಸಿಎಸ್ ಸಿಬ್ಬಂದಿ ಸುಕುಮಾರ್, ವೆಂಕಟರಮಣ ಶಾಸ್ತ್ರಿ, ಸಂದೀಪ್, ರಕ್ಷಿತಾ, ಸುದೀಪ್, ಭಾಸ್ಕರ್ ಮತ್ತಿತರರು ಹಾಜರಿದ್ದರು.೧೧ಬಿಹೆಚ್‌ಆರ್ ೪:

ಬಾಳೆಹೊನ್ನೂರು ಸಮೀಪದ ಹೇರೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತರ ಮಾಹಿತಿ ಕೇಂದ್ರ ಉದ್ಘಾಟನೆಯಲ್ಲಿ ಹಿರಿಯ ಸಹಕಾರಿ ಎಚ್.ಡಿ.ಶ್ರೀನಿವಾಸಗೌಡ ಅವರನ್ನು ಸನ್ಮಾನಿಸಲಾಯಿತು. ಶಾಸಕ ಟಿ.ಡಿ.ರಾಜೇಗೌಡ, ಅಧ್ಯಕ್ಷ ಕೆ.ಎಸ್.ರವೀಂದ್ರ, ಸಿಇಓ ವಿಶ್ವನಾಥ್ ಇದ್ದರು.