ಅರ್ಥಪೂರ್ಣ ಕನಕ ಜಯಂತಿ ಆಚರಣೆಗೆ ಮುಂದಾಗಿ: ದೊಡ್ಡನಗೌಡ ಪಾಟೀಲ

KannadaprabhaNewsNetwork |  
Published : Nov 11, 2024, 11:46 PM IST
ಪೋಟೋ10ಕೆಎಸಟಿ1: ಕುಷ್ಟಗಿ ಪಟ್ಟಣದ ಕನಕ ಭವನದಲ್ಲಿ ನಡೆದ ಕನಕ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು.10ಕೆಎಸಟಿ1ಎ: ಕುಷ್ಟಗಿ ಪಟ್ಟಣದ ಕನಕ ಭವನದಲ್ಲಿ ನಡೆದ ಕನಕ ಜಯಂತಿಯ ಪೂರ್ವಭಾವಿ ಸಭೆಯನ್ನು ಶಾಸಕ ದೊಡ್ಡನಗೌಡ ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಭಕ್ತ ಶ್ರೇಷ್ಟ ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ಮುಂದಾಗಬೇಕು.

ಪೂರ್ವಭಾವಿ ಸಭೆಯಲ್ಲಿ ಶಾಸಕ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಭಕ್ತ ಶ್ರೇಷ್ಟ ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ಮುಂದಾಗಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದ ಕನಕ ಭವನದಲ್ಲಿ ಕನಕದಾಸ ಜಯಂತಿಯ ಅಂಗವಾಗಿ ನಡೆದ ಹಾಲುಮತ ಸಮಾಜದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದರು. ನ. 18ರಂದು ನಡೆಯಲಿರುವ ಜಯಂತಿಯನ್ನು ಮಾದರಿಯಾಗುವಂತೆ ಆಚರಣೆ ಮಾಡಬೇಕು. ಕನಕದಾಸರು ಮನುಕುಲಕ್ಕೆ ಶ್ರೇಷ್ಠತೆ ನೀಡಿದ್ದಾರೆ. ಹಾಲು ಮತ ಸಮಾಜದವರು ಅತ್ಯಂತ ಶಾಂತಿಯುತವಾಗಿ, ಭಕ್ತಿ ಪೂರ್ವಕ ಅರ್ಥಪೂರ್ಣವಾಗುವಂತೆ ಯಾರಿಗೂ ತೊಂದರೆ ಕೊಡದೆ ಅತ್ಯಂತ ಅದ್ಧೂರಿಯಾಗಿ ಆಚರಿಸಬೇಕು ಎಂದರು.

ಕುಷ್ಟಗಿಯಲ್ಲಿ ನಿರ್ಮಾಣವಾಗುತ್ತಿರುವ ಕನಕ ಭವನದ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರು ತಮ್ಮ ಅನುದಾನದಲ್ಲಿ ₹1 ಕೋಟಿ ಅನುದಾನ ಹಾಗೂ ಸಂಸದ ರಾಜಶೇಖರ ಹಿಟ್ನಾಳ ₹50 ಲಕ್ಷ ನೀಡಿದ ಅನುದಾನದಲ್ಲಿ ₹25 ಲಕ್ಷ ಅನುದಾನವನ್ನು ಕೊಪ್ಪಳ ಜಿಲ್ಲಾಧಿಕಾರಿ ಖಾತೆಗೆ ಜಮಾ ಮಾಡಿಸಿದ್ದಾರೆ. ನಾನು ಕೂಡ ₹25 ಲಕ್ಷ ಅನುದಾನ ನೀಡಿದ್ದೇನೆ. ಈ ಅನುದಾನದಲ್ಲಿ ಉತ್ತಮ ಕನಕ ಭವನ ನಿರ್ಮಾಣವಾಗಲಿದೆ ಎಂದು ಹೇಳಿದರು.

ಹಾಲುಮತ ಸಮಾಜದ ತಾಲೂಕಾಧ್ಯಕ್ಷ ಮಲ್ಲಣ್ಣ ಪಲ್ಲೇದ ಮಾತನಾಡಿ, ಈ ವರ್ಷ ಕನಕದಾಸರ ಜಯಂತಿಯನ್ನು ಅದ್ಧೂರಿಯ ಆಚರಣೆ ಮಾಡಲಾಗುವುದು. ಕನಕದಾಸರ ಭಾವಚಿತ್ರದ ಮೆರವಣಿಗೆ ಗಜೇಂದ್ರಗಡ ರಸ್ತೆಯ ಕನಕದಾಸರ ವೃತ್ತದಿಂದ ಸಕಲ ವಾದ್ಯಗಳೊಂದಿಗೆ ಮಾರುತಿ ವೃತ್ತ, ಬಸವೇಶ್ವರ ವೃತ್ತ, ವಾಲ್ಮೀಕಿ ಸರ್ಕಲ್, ದುರ್ಗಾ ಕಾಲನಿಯ ಮಾರ್ಗವಾಗಿ ಹಳೆ ಬಜಾರದಿಂದ ತಾಲೂಕು ಕ್ರೀಡಾಂಗಣದವರೆಗೆ ನಡೆಯಲಿದೆ ಎಂದರು.

ಪುರಸಭೆ ಸದಸ್ಯ ಕಲ್ಲೇಶ ತಾಳದ, ಹಿರಿಯ ನ್ಯಾಯವಾದಿ ಫಕೀರಪ್ಪ ಚಳಗೇರಿ ಮಾತನಾಡಿದರು. ಈ ಸಂದರ್ಭ ಹಾಲುಮತ ಸಮಾಜದ ಗುರುಗಳಾದ ಶರಣಯ್ಯ ಗುರುವಿನ, ಶಿವಾನಂದಯ್ಯ ಗುರುವಿನ, ಚಂದಪ್ಪ ಗುಡಿಮನಿ, ಶೈಲಜಾ ಬಾಗಲಿ, ಲಕ್ಷ್ಮವ್ವ ಟಕ್ಕಳಕಿ, ಸತ್ಯಪ್ಪ ರಾಜೂರು, ಮಹಾಲಿಂಗಪ್ಪ ದೋಟಿಹಾಳ, ಹೊಳಿಯಪ್ಪ ಕುರಿ, ಸಂಗಪ್ಪ ಪಂಚಮ, ಮಲ್ಲಿಕಾರ್ಜುನ ಲಕ್ಕಲಕಟ್ಟಿ, ದೇವಪ್ಪ ಕಟ್ಟಿಹೊಲ, ಚಂದ್ರಕಾಂತ ವಡಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಥಣಿಯಲ್ಲಿ ರಸ್ತೆ ಅತಿಕ್ರಮಣ ತೆರವು
ಔದ್ಯೋಗಿಕ ಕ್ಷೇತ್ರದಲ್ಲಿ ಕೌಶಲ್ಯಯುಕ್ತ ವ್ಯಕ್ತಿತ್ವ ಅಗತ್ಯ: ಶ್ರೀನಿವಾಸನ್ ವರದರಾಜನ್‌