ಗೋಕಾಕ ಭಾಗದ ಜನರ ಬಹುದಿನಗಳ ಕನಸಾಗಿದ್ದ ಎಂಜನಿಯರಿಂಗ್ ಕಾಲೇಜು ನಗರದ ಬ್ಯಾಳಿ ಕಾಟಾ ಹತ್ತಿರದ ಎನ್‌ಎಸ್‌ಎಫ್ ಆವರಣದ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗಲಿದೆ.
ಕನ್ನಡಪ್ರಭ ವಾರ್ತೆ ಗೋಕಾಕ
ಈ ಭಾಗದ ಜನರ ಬಹುದಿನಗಳ ಕನಸಾಗಿದ್ದ ಎಂಜನಿಯರಿಂಗ್ ಕಾಲೇಜು ನಗರದ ಬ್ಯಾಳಿ ಕಾಟಾ ಹತ್ತಿರದ ಎನ್‌ಎಸ್‌ಎಫ್ ಆವರಣದ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗಲಿದೆ. ಶಾಸಕ ರಮೇಶ ಜಾರಕಿಹೊಳಿ ಅವರ ಪ್ರಯತ್ನದ ಪ್ರತಿಫಲವಾಗಿ ಈ ಎಂಜನಿಯರಿಂಗ್ ಕಾಲೇಜು ಪ್ರಾರಂಭವಾಗಿದೆ. ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಸರ್ಕಾರಕ್ಕೆ ಪತ್ರ ಬರೆದು ಎಂಜನಿಯರಿಂಗ್ ಕಾಲೇಜು ಗೋಕಾಕ ನಗರದಲ್ಲಿ ಪ್ರಾರಂಭಿಸುವಂತೆ ಕೋರಿದ್ದರು. ಅದರಂತೆ ಸಚಿವ ಸತೀಶ ಜಾರಕಿಹೊಳಿ ಅವರು ಸರ್ಕಾರದ ಮೇಲೆ ಒತ್ತಡ ಹೇರಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಾಲೇಜು ಘಟಕ ಗೋಕಾಕ ನಗರದಲ್ಲಿ ಪ್ರಾರಂಭವಾಗಲಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಾಲೇಜು ಘಟಕ ಗೋಕಾಕನಲ್ಲಿ ಆರ್ಟಿಫಿಸಿಯಲ್ ಇಂಟಲಿಜೇನ್ಸ್, ಸೈಬರ್ ಸೇಕ್ಯುರಿಟಿ, ಇಲೆಕ್ಟ್ರೀಕಲ್ ಎಂಜನಿಯರಿಂಗ್ ವಿಭಾಗಗಳನ್ನು ಹೊಂದಿವೆ. 2025-26ನೇ ಸಾಲಿನಲ್ಲಿ ನುರಿತ ಶಿಕ್ಷಕ ಸಿಬ್ಬಂದಿಯೊಂದಿಗೆ ಪ್ರವೇಶಗಳು ಶೀಘ್ರದಲ್ಲೆ ಪ್ರಾರಂಭವಾಗಲಿವೆ. ಎಂಜನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಗೋಕಾಕ ಹಾಗೂ ಮೂಡಲಗಿ ಭಾಗದ ಜನತೆ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿ ಇನ್ನಿತರ ಕಡೆಗಳಿಗೆ ಹೋಗುತ್ತಿದ್ದರು. ಈಗ ಗೋಕಾಕ ನಗರದಲ್ಲಿಯೇ ಪ್ರಾರಂಭವಾಗಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಜಿಲ್ಲಾ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರ ಶಿಕ್ಷಣ ರಂಗದ ಕಾಳಜಿಯ ಫಲಶೃತಿಯಾಗಿ ಎಂಜನಿಯರಿಂಗ್ ಕಾಲೇಜು ಪ್ರಾರಂಭವಾಗುತ್ತಿರುವ ಹಿನ್ನೆಲೆ ಜನರು ಜಾರಕಿಹೊಳಿ ಸಹೋದರರ ಕಾಳಜಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.