ಪ್ರತಿ ಮತವು ಕ್ಷೇತ್ರದ ಅಭಿವೃದ್ಧಿಗೆ ಮೀಸಲು

KannadaprabhaNewsNetwork |  
Published : Aug 26, 2025, 02:00 AM IST
ಮನಗೂಳೀಓ  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ಮತಕ್ಷೇತ್ರದ ಜನತೆ ನೀಡಿದ ಪ್ರತಿಯೊಂದು ಮತವನ್ನು ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತೇನೆ ಎಂದು ಶಾಸಕ ಅಶೋಕ್ ಮನಗೂಳಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಮತಕ್ಷೇತ್ರದ ಜನತೆ ನೀಡಿದ ಪ್ರತಿಯೊಂದು ಮತವನ್ನು ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತೇನೆ ಎಂದು ಶಾಸಕ ಅಶೋಕ್ ಮನಗೂಳಿ ಭರವಸೆ ನೀಡಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆ ಸೋಮವಾರ ಆಲಮೇಲ ಮಾರ್ಗದ ಮಿನಿ ವಿಧಾನಸೌಧದ ಆವರಣದಲ್ಲಿ ಆಯೋಜಿಸಿದ್ದ ಮಿನಿ ವಿಧಾನಸೌಧದ ಎರಡನೇ ಹಂತದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಈ ಮಿನಿ ವಿಧಾನಸೌಧವನ್ನು ದಿ.ಎಂ.ಸಿ.ಮನಗೂಳಿ ಅವರು ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಿದ್ದಾಗ ಸುಮಾರು ₹ 10 ಕೋಟಿ ಮಂಜೂರಾತಿ ಪಡೆದು ಯೋಜನೆ ಪ್ರಾರಂಭಿಸಿದ್ದರು. ಈಗ ಒಂದು ಹಂತ ಪೂರ್ಣಗೊಂಡಿದೆ. ಎಲ್ಲಾ ಇಲಾಖೆಗಳನ್ನು ಒಂದೇ ಸೂರಿನಡಿ ಸೇರಿಸಲು ಇನ್ನೂ ಒಂದು ಹಂತ ಅವಶ್ಯವಿರುವ ಕಾರಣ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಸುಮಾರು ₹ 5 ಕೋಟಿ ವೆಚ್ಚದಲ್ಲಿ ಎರಡನೇ ಹಂತದ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ ಎಂದರು.ಪ್ರಸ್ತುತ ಎರಡನೇ ಹಂತದ ಕಾಮಗಾರಿ ಮುಗಿದ ಮೇಲೆ ಮತ್ತು ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲು ಸಿಂದಗಿ ಪಟ್ಟಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ. ಇತ್ತೀಚಿಗೆ ರಾಜ್ಯ ಸರ್ಕಾರ ಪ್ರತಿ ಶಾಸಕರಿಗೆ ₹ 50 ಕೋಟಿ ಅನುದಾನ ನೀಡಿದೆ. ಅದರಲ್ಲಿ ಸುಮಾರು ₹ 27 ಕೋಟಿಯನ್ನು ಸಿಂದಗಿ ಪಟ್ಟಣದ ರಸ್ತೆಗಳಿಗೆ ಮತ್ತು ಮೂಲಭೂತ ಸೌಕರ್ಯಕ್ಕೆ ಹಾಗೂ ಪುರಾತನ ದೇವಾಲಯಗಳ ಜೀರ್ಣೋದ್ಧಾರಕ್ಕೆ ಮೀಸಲಿಟ್ಟಿದ್ದಾಗಿ ತಿಳಿಸಿದರು.ಈ ವೇಳೆ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಮಾತನಾಡಿ, ಸಿಂದಗಿ ಮಿನಿ ವಿಧಾನಸೌಧದ ಎರಡನೇ ಹಂತದ ಕಾಮಗಾರಿ ನಡೆಯುತ್ತಿರುವುದು ಸಂತಸ ತಂದಿದೆ. ಈಗಿರುವ ತಹಸಿಲ್ದಾರ್ ಕಚೇರಿ ಮಿನಿ ವಿಧಾನಸೌಧಕ್ಕೆ ವರ್ಗಾವಣೆಯಾದ ನಂತರ ಆ ಕಟ್ಟಡದಲ್ಲಿ ಪುರಸಭೆ ಕಾರ್ಯನಿರ್ವಹಿಸಲು ಈಗಾಗಲೇ ಠರಾವು ಪಾಸ್ ಮಾಡಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪೂಜಾರಿ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮಧ್ಯದಲ್ಲಿ ಅನೇಕ ಅಭಿವೃದ್ಧಿಪರ ಕಾರ್ಯ ಮಾಡುತ್ತಿದೆ. ಗ್ಯಾರಂಟಿಗಳಿಂದ ರಾಜ್ಯ ತತ್ತರಿಸಿ ಹೋಗಿದೆ ಎನ್ನುವ ವಿಪಕ್ಷಗಳ ಮಾತಿಗೆ ಸಿಂದಗಿ ಕ್ಷೇತ್ರದ ಅಭಿವೃದ್ಧಿಯೇ ಸಾಕ್ಷಿಯಾಗಿದೆ. ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ವಿಶ್ವ ದಾಖಲೆಗೆ ಸೇರುತ್ತಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಬಣ್ಣಿಸಿದರು.ಈ ವೇಳೆ ಸಾಯಿಬಣ್ಣ ಪುರದಾಳ ಮಿನಿ ವಿಧಾನಸೌಧ ಕಟ್ಟಡದಲ್ಲಿ ಶಾಸಕರ ಸಂಪರ್ಕ ಕೊಠಡಿ ನಿರ್ಮಾಣಕ್ಕೆ ಆಗ್ರಹಿಸಿದರು.

ಈ ವೇಳೆ ತಹಶೀಲ್ದಾರ್ ಕರೆಪ್ಪ ಬೆಳ್ಳಿ, ಪುರಸಭೆ ಸದಸ್ಯರಾದ ಭಾಷಾಸಾಬ್ ತಾoಬೋಳಿ, ಹಣಮಂತ ಸುಣಗಾರ, ಕೆಡಿಪಿ ಜಿಲ್ಲಾ ಸದಸ್ಯ ನೂರ ಮಹಮ್ಮದ್ ಅತ್ತಾರ್, ಎಪಿಎಂಸಿ ಅಧ್ಯಕ್ಷ ಕಲ್ಲಪ್ಪ ಬಿಸನಾಳ, ತಾಲೂಕ ನೌಕರ ಸಂಘದ ಅಧ್ಯಕ್ಷ ಅಶೋಕ್ ತೆಲ್ಲೂರ, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಶೇಖರ್, ವಕೀಲ ಬಿಜಿ ನೆಲ್ಲಗಿ, ಪುರಸಭಾ ಸದಸ್ಯ ಬಸವರಾಜ ಯಾರನಾಳ, ಮಹೇಶ ಮನಗೂಳಿ, ಮಲ್ಲಿಕಾರ್ಜುನ ಶಂಭೇವಾಡ್, ಸಿದ್ದು ಮಲ್ಲೇದ, ರಜತ್ ತಾಂಬೆ, ಸುನಂದಾ ಯಂಪುರೆ, ಪ್ರತಿಭಾ ಚಳ್ಳಗಿ, ಜಯಶ್ರೀ ಹದನೂರ, ವರ್ಷಾ ಪಾಟೀಲ, ಶಶಿಕಲಾ ಅಂಗಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ