ರಾಯಣ್ಣನ ಜನನ, ಮರಣ ದಿನಗಳು ರಾಷ್ಟ್ರೀಯ ಉತ್ಸವಗಳು

KannadaprabhaNewsNetwork |  
Published : Aug 26, 2025, 02:00 AM IST
ರಾಯಣ್ಣ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಬ್ರಿಟೀಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದವರಲ್ಲಿ ವೀರ ಯೋಧ ಸಂಗೊಳ್ಳಿ ರಾಯಣ್ಣ ನಮಗೆಲ್ಲ ಆದರ್ಶರಾಗಿದ್ದು, ಜಾತಿ-ಪಂಥ ಮೀರಿ ಬೆಳೆದ ಅವರ ದೇಶಪ್ರೇಮ ಯುವಕರಿಗೆ ಮಾದರಿಯಾಗಿದೆ ಎಂದು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಪ್ರಭುಗೌಡ ಲಿಂಗದಳ್ಳಿ (ಚಬನೂರ) ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಬ್ರಿಟೀಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದವರಲ್ಲಿ ವೀರ ಯೋಧ ಸಂಗೊಳ್ಳಿ ರಾಯಣ್ಣ ನಮಗೆಲ್ಲ ಆದರ್ಶರಾಗಿದ್ದು, ಜಾತಿ-ಪಂಥ ಮೀರಿ ಬೆಳೆದ ಅವರ ದೇಶಪ್ರೇಮ ಯುವಕರಿಗೆ ಮಾದರಿಯಾಗಿದೆ ಎಂದು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಪ್ರಭುಗೌಡ ಲಿಂಗದಳ್ಳಿ (ಚಬನೂರ) ಹೇಳಿದರು.ತಾಲೂಕಿನ ಪಡಗಾನೂರ ಗ್ರಾಮದಲ್ಲಿ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಭಕ್ತ ಕನಕದಾಸರ ತಾತ್ವಿಕತೆಯ ಚಿಂತನೆ, ಕಿತ್ತೂರ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ಧೈರ್ಯ ಹಾಗೂ ಇದೇ ಸಮುದಾಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಾಣಕ್ಯತನ ಮಾದರಿಯಾಗಿದೆ. ಮಹನೀಯರ ಆದರ್ಶ ನಮಗೆಲ್ಲ ಸ್ಫೂರ್ತಿಯಾಗಬೇಕು. ಸ್ವಾತಂತ್ರ್ಯ ದಿನ, ಪ್ರಜಾಸತ್ತಾತ್ಮಕ ದಿನ, ಭಾರತೀಯರಿಗೆ ರಾಷ್ಟ್ರೀಯ ಹಬ್ಬ. ಇವೆರಡು ದಿನಗಳು ರಾಯಣ್ಣನವರ ಜನನ ಮರಣದ ದಿನಗಳು ರಾಯಣ್ಣನಿಗೆ ಮಾತ್ರವಲ್ಲ, ಭಾರತೀಯರಿಗೆ ರಾಷ್ಟ್ರೀಯ ಉತ್ಸವದ ದಿನಗಳಾಗಿ ಸ್ಮರಣೀಯವಾಗಿವೆ. ಹಾಲುಮತ ಸಮಾಜ ಯಾರಿಗೂ ಕೇಡು ಬಯಸದ, ಶತ್ರುಗಳಿಗೂ ಸಹ ಹಾಲೆರೆಯುವ ಸಮಾಜವಾಗಿದ್ದು, ರಾಯಣ್ಣ ಸಮಾಜಕ್ಕೆ ಸೀಮಿತಗೊಳಿಸದೆ ವಿಶ್ವ ವ್ಯಾಪ್ತಿ ಪಸರಿಸಬೇಕಾಗಿದೆ. ರಾಯಣ್ಣನವರ ಶೌರ್ಯ, ಸಾಹಸ ಯುವಕರಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.ಜೆಡಿಎಸ್ ಮುಖಂಡರಾದ ಬಿ.ಡಿ.ಪಾಟೀಲ ಮಾತನಾಡಿ, ರಾಯಣ್ಣನ ಆದರ್ಶ ಇಂದಿನ ಯುವಕರಿಗೆ ಸ್ಪೂರ್ತಿದಾಯಕ ಎಂದು ಹೇಳಿದರು. ಸಾನಿಧ್ಯವನ್ನು ಹುಲಿಜಂತಿಯ ಮಾಳಿಂಗರಾಯ ಮಹಾರಾಜರು ವಹಿಸಿದ್ದರು. ಹಿರಿಯ ವಾಗ್ಮಿ ಮೋಹನ್ ಮೇಟಿ ರಾಯಣ್ಣನ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಅಯ್ಯಪ್ಪ ಸ್ವಾಮಿಗಳು ಹಿರೇಮಠ ವಹಿಸಿದ್ದರು. ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಣುಮಂತ್ರಾಯಗೌಡ ಪಾಟೀಲ, ಗ್ರಾಪಂ ಅಧ್ಯಕ್ಷರ ಪ್ರತಿನಿಧಿಯಾದ ಗುರುರಾಜ ಆಕಳವಾಡಿ, ಉಪಾಧ್ಯಕ್ಷರ ಪ್ರತಿನಿಧಿ ಸುಭಾಶ ಹೊಸಟ್ಟಿ, ಕಾನಿಪ ತಾಲೂಕು ಅಧ್ಯಕ್ಷ ಸಂಗಮೇಶ ಉತ್ನಾಳ, ಸದಸ್ಯ ಬೀರು ಹಳ್ಳಿ, ಸಿದ್ದು ಬೆಳ್ಳಿ, ಮುಖಂಡರಾದ ಈಶ್ವರ ಕಬ್ಬಿನ, ಶಂಕರ ಸಾತಿಹಾಳ, ನಿಂಗನಗೌಡ ಪಾಟೀಲ, ಅಯ್ಯಪ್ಪ ಸಾತಿಹಾಳ, ಮಾಯಪ್ಪ ಹೊಸಟ್ಟಿ, ಹಣಮಂತ ಮುರಾಳ, ಬೀರು ಹುಣಶ್ಯಾಳ, ಸಿದ್ದು ಹಳ್ಳಿ, ಪ್ರಕಾಶ ಹೊಸಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಾಳು ಮಾಸ್ತರ ಸ್ವಾಗತಿಸಿ, ನಿರೂಪಿಸಿದರು. ಸುರೇಶ ವಗ್ಗರ ವಂದಿಸಿದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ