ಹುಬ್ಬಳ್ಳಿ: ಎಂಜಿನಿಯರ್‌ಗಳು ಸಮಾಜದ ಶಕ್ತಿಕೇಂದ್ರಳಾಗಿದ್ದಾರೆ ಎಂದು ಚಲನಚಿತ್ರ ನಟ ರಮೇಶ ಅರವಿಂದ ಹೇಳಿದರು.
ಜನರ ಜೀವ, ಆರೋಗ್ಯ, ಆಸ್ತಿ, ಆರ್ಥಿಕ ಹಿತಾಸಕ್ತಿ, ಸಾರ್ವಜನಿಕ ಕಲ್ಯಾಣ ಮತ್ತು ಪರಿಸರವನ್ನು ರಕ್ಷಿಸುವುದು ಸೇರಿದಂತೆ ಸಮಾಜದ ವಿಶಾಲ ಹಿತಾಸಕ್ತಿ ಮನಸ್ಸಿನಲ್ಲಿಟ್ಟುಕೊಂಡು ಎಂಜಿನಿಯರ್‌ಗಳು ಕಾರ್ಯ ಮಾಡುತ್ತಾರೆ. ಹಾಗಾಗಿ, ಎಂಜಿನಿಯರ್‌ಗಳು ಸಮಾಜದ ಶಕ್ತಿ ಕೇಂದ್ರಬಿಂದುಗಳಾಗಿದ್ದಾರೆ ಎಂದರು.
ಮುಖ್ಯ ಅತಿಥಿ ಟರ್ಬೊ ಸ್ಟೀಲ್‌ನ ವ್ಯವಸ್ಥಾಪಕ ನಿರ್ದೇಶಕ ಆರ್. ಪ್ರವೀಣಚಂದ್ರ ಮಾತನಾಡಿ, ಟರ್ಬೋ ಸ್ಟೀಲ್‌ನ ಕ್ಷಮತೆ ಮತ್ತು ರಚನೆಯ ಬಳಕೆ ಹೀಗೆ ಕಟ್ಟಡಗಳ ಬಗ್ಗೆ ಹಲವಾರು ವಿಷಯಗಳನ್ನು ಹಾಗೂ ಸ್ಟೀಲ್‌ನ ಗುಣಮಟ್ಟದ ಕುರಿತು ತಿಳಿಸಿದರು.ಅಧ್ಯಕ್ಷತೆಯನ್ನು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಅಧ್ಯಕ್ಷ ಸುನೀಲ ಬಾಗೆವಾಡಿ ವಹಿಸಿದ್ದರು.
ಕೋಶಾಧ್ಯಕ್ಷ ಕಬೀರ ನದಾಫ್, ಎಸ್‌ಡಿಎಂ ಕಾಲೇಜಿನ ಕಾರ್ಯದರ್ಶಿ ಜೀವಂಧರ ಕುಮಾರ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಪರ್ವತಿ, ಉಪಾಧ್ಯಕ್ಷ ಅರುಣಕುಮಾರ ಶೀಲವಂತ, ವಿಜಯೇಂದ್ರ ಪಾಟೀಲ, ನಿರ್ದೇಶಕ ಪವನಕುಮಾರ ಬೇಟಗೇರಿ ಮತ್ತಿತರರು ಇದ್ದರು.ನಟ ರಮೇಶ ಅರವಿಂದ ಅವರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಕಲಘಟಗಿಯ ದ್ಯಾಮಣ್ಣ ಲಮಾಣಿ ಅವರ ತಂಡದ ಡೊಳ್ಳು ಕುಣಿತದ ಮೂಲಕ ಸ್ವಾಗತಿಸಿದರು.
ಸಂಯೋಜಕ ದಾಮೋದರ ಹೆಗಡೆ ಪ್ರಾರ್ಥಿಸಿದರು. ಎಸ್‌ಡಿಎಂ ಕಾಲೇಜಿನ ಪ್ರಾಚಾರ್ಯ ಡಾ. ರಮೇಶ ಚಕ್ರಸಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸಿದ್ದನಗೌಡ ಪಾಟೀಲ ವಂದಿಸಿದರು. ಕಾರ್ಯಕ್ರಮದ ಸಂಯೋಜನೆಯ ಅಧ್ಯಕ್ಷ ವಿಜಯ ತೋಟಗೇರ ಸ್ವಾಗತಿಸಿದರು. ಜಗದೀಶ ಮಳಗಿ ನಿರೂಪಿಸಿದರು.