ಎಂಜಿನಿಯರ್‌ಗಳು ಹೊಸ ತಂತ್ರಜ್ಞಾನದ ಸೃಷ್ಟಿ ಕರ್ತರಾಗಿ

KannadaprabhaNewsNetwork |  
Published : Nov 06, 2026, 03:00 AM IST
ವಿಟಿಯು | Kannada Prabha

ಸಾರಾಂಶ

ವಿದ್ಯಾರ್ಥಿಗಳು ಲಭ್ಯವಿರುವ ತಂತ್ರಜ್ಞಾನ ಬಳಕೆ ಮಾಡುವ ಬದಲು, ಹೊಸ ತಂತ್ರಜ್ಞಾನದ ಸೃಷ್ಟಿ ಕರ್ತರಾಗಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿದ್ಯಾರ್ಥಿಗಳು ಲಭ್ಯವಿರುವ ತಂತ್ರಜ್ಞಾನ ಬಳಕೆ ಮಾಡುವ ಬದಲು, ಹೊಸ ತಂತ್ರಜ್ಞಾನದ ಸೃಷ್ಟಿ ಕರ್ತರಾಗಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಹೇಳಿದರು.

ಬಿಎನ್‌ಎಂಐಟಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಎನ್‌ಎಂಐಟಿ) ಆಯೋಜಿಸಿದ್ದ ಐಡಿಯಾ ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಅವರು, ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಸಾಧ್ಯವಿಲ್ಲ ಎಂಬ ಮಾತು ಬರಬಾರದು. ಸಾಧ್ಯವಿಲ್ಲ ಎಂಬುದನ್ನು ಸಾಧಿಸಿ ತೋರಿಸಬೇಕು. ಪ್ರಯೋಗಾಲಯಗಳು ಶೋ ಪಿಸ್ ಆಗಬಾರದು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣ ನೀಡುವ ಮೂಲಕ ಅವರನ್ನು ಕೈಗಾರಿಕೆಗಳು ಬಯಸುವ ರೀತಿಯಲ್ಲಿ ಸಿದ್ಧಪಡಿಸುವ ಕೇಂದ್ರಗಳಾಗಬೇಕು. ವಿದ್ಯಾರ್ಥಿಗಳಿಗಾಗಿ ನೀವು ಪ್ರಯೋಗಾಲಯಗಳನ್ನು 24/7 ತೆರೆದಿರಬೇಕು ಎಂದರು.ವಿದ್ಯಾರ್ಥಿಗಳು ಕಾಲೇಜು ಮುಗಿಸಿ ಹೋಗುವ ಮುನ್ನ ಒಂದು ಉತ್ತನ್ನ ಕಂಡು ಹಿಡಿದು ಅದಕ್ಕೆ ಪೇಟೆಂಟ್ ಪಡೆದುಕೊಳ್ಳಬೇಕು. ಒಂದು ಪ್ರಾಜೆಕ್ಟ್ ಮಾಡಬೇಕು. ಇಂದು ಉದ್ಯೋಗವಕಾಶಕ್ಕೆ ಕೊರತೆ ಇಲ್ಲ. ಆದರೆ, ಕೌಶಲ್ಯ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗಳ ಕೊರತೆ ಇದೆ ಎಂದರು.ಬಿಎನ್‌ಎಂಐಟಿ ಅಧ್ಯಕ್ಷ ನಾರಾಯಣ ರಾವ್ ಆರ್.ಮಾನೆ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಶಿಕ್ಷಣದ ಜತೆಗೆ ಪ್ರಾಯೋಗಿಕ ಶಿಕ್ಷಣ ನೀಡಬೇಕು ಎಂಬ ಪರಿಕಲ್ಪನೆಯಿಂದ ನಾವು ಹಲವಾರು ಸೆಂಟರ್ ಆಫ್ ಎಕ್ಸೆಲೆನ್ಸ್ ಆರಂಭಿಸಿದ್ದೇವೆ. ಅದೇ ರೀತಿ ನಾವು ಇದೀಗ ಐಡಿಯಾ ಲ್ಯಾಬ್ ಅನ್ನು ನಾವು ತೆರೆದ್ದೇವೆ. ಇದು ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ಇಲ್ಲಿ ಪ್ರೋಟೋ ಟೈಪ್‌ಗಳ ರೀತಿ ಮಾತ್ರವಲ್ಲ, ಮಾರುಕಟ್ಟೆಗೆ ಅನುಕೂಲವಾಗುವ ರೀತಿಯಲ್ಲಿ ಉತ್ಪಾದಿಸಬಹುದು. ಹೀಗಾಗಿ ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.ಈ ಐಡಿಯಾ ಲ್ಯಾಬ್ ನಿರ್ಮಾಣಕ್ಕೆ ಎಐಸಿಟಿಇ ಅಂದಾಜು ₹1 ಕೋಟಿ ನೀಡಿದೆ. ಕಾಲೇಜು ಕೂಡ ಮತ್ತೆ ₹1 ಕೋಟಿ ನೀಡಿ ಇದನ್ನು ನಿರ್ಮಾಣ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಬಿಎನ್‌ಎಂಐಟಿ ನಿರ್ದೇಶಕ ಪ್ರೊ.ಟಿ.ಜೆ.ರಾಮಮೂರ್ತಿ, ಹೆಚ್ಚುವರಿ ನಿರ್ದೇಶಕರು ಹಾಗೂ ಪ್ರಾಂಶುಪಾಲರಾದ ಡಾ.ಎಸ್.ವೈ.ಕುಲಕರ್ಣಿ, ಡೀನ್ ಪ್ರೊ.ಈಶ್ವರ್ ಎನ್.ಮಾನೆ, ಉಪನಿರ್ದೇಶಕ ಡಾ.ಜಿ.ಎನ್.ಕೃಷ್ಣಮೂರ್ತಿ ಉಪಸ್ಥಿತರಿದ್ದರು.ವಿಟಿಯು ವಿದ್ಯಾರ್ಥಿಗಳಿಗಾಗಿ ಪ್ರತಿ 6 ತಿಂಗಳಿಗೆ ಒಮ್ಮೆ ಪಠ್ಯಕ್ರಮ ಬದಲು ಮಾಡುತ್ತಿದೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ. 10ಕ್ಕೂ ಹೆಚ್ಚಿನ ಸೆಂಟರ್ ಆಫ್ ಎಕ್ಸೆಲೆನ್ಸ್‌ಗಳನ್ನು ತೆರೆದಿದೆ. ಕೇವಲ 5 ನಿಮಿಷದಲ್ಲಿ ಫಲಿತಾಂಶವನ್ನು ಪ್ರಕಟಿಸುತ್ತಿದೆ. ನಿಮ್ಮಲ್ಲಿ ಪ್ರತಿಭೆ ಇದ್ದರೇ ಮಾತ್ರ ಬೆಲೆ ಎಂಬುವುದನ್ನು ನೀವು ಅರಿತುಕೊಳ್ಳಬೇಕು.

-ಪ್ರೊ.ಎಸ್.ವಿದ್ಯಾಶಂಕರ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕುಲಪತಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದುಗಳು ಜಾಗೃತಿವಾದರೆ ಅದೇ ದೊಡ್ಡ ಶಕ್ತಿ
ರಾಮಮಂದಿರ ಪೇಜಾವರ ಶ್ರೀಗಳ ಕನಸಾಗಿತ್ತು