ಮಂಗಳೂರು: ಎಂಜಿನಿಯರ್‌ಗಳು ಈ ಸಮಾಜಕ್ಕೆ, ದೇಶಕ್ಕೆ ಕೊಟ್ಟ ಕೊಡುಗೆಯನ್ನು ಮರೆಯುವಂತಿಲ್ಲ. ಅಭಿವೃದ್ಧಿ, ನಗರದ ಸೌಂದರ್ಯತೆಗೆ ಎಂಜಿನಿಯರ್‌ಗಳ ಕೊಡುಗೆ ಅನನ್ಯವಾದುದು ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಶಾಸಕ ಡಿ.ವೇದವ್ಯಾಸ ಕಾಮತ್ ಸನ್ಮಾನ ಸ್ವೀಕರಿಸಿ ಮಾತನಾಡಿ, ನಿಮ್ಮೆ ಬೇಡಿಕೆ ಈಡೇರಿಸುವ ಮೂಲಕ ನಾವು ನಮ್ಮ ಕರ್ತವ್ಯ ಮಾಡಿದ್ದೇವೆ. ಮಾಡಿದ ಕೆಲಸವನ್ನು ಜನರಿಗೆ ತಿಳಿಸಿ ಗೌರವಿಸಿದ ಕಾರ್ಯಕ್ರಮ ಉತ್ತಮವಾದುದು, ಅಭಿನಂದನೀಯ ಎಂದರು.ವೃತ್ತಿಪರ ಡಿಪ್ಲೊಮಾ ಸಿವಿಲ್ ಎಂಜಿನಿಯರ್ಸ್‌ಗಳ ಅರ್ಹತೆ ಮತ್ತು ಸಾಮರ್ಥ್ಯದಲ್ಲಿ ಆದ ಅನ್ಯಾಯದ ವಿರುದ್ಧ ಹೋರಾಟದಲ್ಲಿ ಕೈಜೋಡಿಸಿ, ಈ ಹಿಂದಿನ ಸ್ಥಾನಮಾನ ಪುನರ್‌ಸ್ಥಾಪಿಸಿ ನ್ಯಾಯ ಒದಗಿಸಿಕೊಡುವಲ್ಲಿ ಸಹಕರಿಸಿದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಸಹಕರಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು, ಸಹಕರಿಸಿದ ಪ್ರಮುಖರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.ಎಂಸಿಸಿ ರಿಜಿಸ್ಟರ್ಡ್ ಡಿಪ್ಲೊಮಾ ಸಿವಿಲ್ ಎಂಜಿನಿಯರ್ಸ್ ಸಂಚಾಲಕ ಜಿ. ಯೋಗೀಶ್ ಪೈ ಅಧ್ಯಕ್ಷತೆ ವಹಿಸಿದ್ದರು. ಮೂಡ ಆಯುಕ್ತ ಮಹಮ್ಮದ್ ನಝೀರ್, ಎಸಿಸಿಇಐ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಕಲ್ಬಾವಿ, ಮನಪಾ ನಿಕಟಪೂರ್ವ ಮಹಾಪೌರ ಮನೋಜ್ ಕುಮಾರ್, ಮನಪಾ ನಿಕಟಪೂರ್ವ ಪ್ರತಿಪಕ್ಷ ನಾಯಕ ಅನಿಲ್ ಕುಮಾರ್, ಎಸಿಸಿಇಐ ಮಂಗಳೂರು ಅಧ್ಯಕ್ಷ ಎನ್.ಅರುಣ್, ಕರ್ನಾಟಕ ರಾಜ್ಯ ಡಿಪ್ಲೊಮಾ ಸಿವಿಲ್ ಎಂಜಿನಿಯರ್ಸ್ ಒಕ್ಕೂಟದ ಸಂಚಾಲಕ ಪ್ರಶಾಂತ್ ಲೋಕಾಪುರ್ ಮತ್ತಿತರರು ಇದ್ದರು. ಎಂಸಿಸಿ ರಿಜಿಸ್ಟರ್ಡ್ ಡಿಪ್ಲೊಮಾ ಸಿವಿಲ್ ಎಂಜಿನಿಯರ್ಸ್ ಸಂಚಾಲಕ ಜಿ. ಯೋಗೀಶ್ ಪೈ ಸ್ವಾಗತಿಸಿದರು. ಅವಿನಾಶ್ ಕಾಮತ್ ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ರವೀಂದ್ರ ಪ್ರಭು ಮತ್ತು ಮಾಲಿನಿ ಕೇಶವ ಪ್ರಸಾದ್ ಅವರಿಂದ ಸುಗಮ ಸಂಗೀತ ಮತ್ತು ಗಝಲ್ ಕಾರ್ಯಕ್ರಮ ನಡೆಯಿತು.