ಕಾವೇರಿ ನೀರಾವರಿ ನಿಗಮದಿಂದ ಎಂಜಿನಿಯರ್ಸ್ ಡೇ ಆಚರಣೆ

KannadaprabhaNewsNetwork |  
Published : Sep 16, 2026, 02:00 AM IST
15ಕೆಎಂಎನ್ ಡಿ37 | Kannada Prabha

ಸಾರಾಂಶ

ಸರ್.ಎಂ.ವಿಶ್ವೇಶ್ವರಯ್ಯ ದೂರ ದೃಷ್ಟಿಯುಳ್ಳವರು. ಕಡು ಬಡದತನದಿಂದ ವಿದ್ಯಾಭ್ಯಾಸ ಮುಗಿಸಿ ನಂತರ ದೇಶದ ವಿವಿಧೆಡೆ ಕೆಲಸ ನಿರ್ವಹಿಸಿ ಮೆಚ್ಚುಗೆ ಪಡೆದರು. ಅವರು ಎಂದೂ ಸ್ವಾರ್ಥಕ್ಕೆ ಕೆಲಸ ಮಾಡಿದವರಲ್ಲ, ದೇಶದ ಅಭಿವೃದ್ಧಿ ಸಲುವಾಗಿ ದೇಶದ ವಿವಿಧೆಡೆ ಅನೇಕ ಜನಪರ ಕೆಲಸ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ವಿಶ್ವ ವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆ ಮುಖ್ಯದ್ವಾರದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಸರ್.ಎಂ.ವಿಶ್ವೇಶ್ವರಯ್ಯ ಜಯಂತಿ ಅಂಗವಾಗಿ ಎಂಜಿನಿಯರ್ಸ್ ಡೇ ಆಚರಿಸಲಾಯಿತು.

ಸರ್.ಎಂ.ವಿ ಪ್ರತಿಮೆಗೆ ಪೂಜೆ ಸಲ್ಲಿಸಿ ಪಷ್ಪಾರ್ಚನೆ ಮಾಡಿದ ನಂತರ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರೆ ಶ್ವೇತಾ ಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯ ನಿರ್ಮಿಸಿದ ಅನೇಕ ಯೋಜನೆಗಳು ನಮಗೆ ಮಾದರಿಯಾಗಿವೆ. ಅವರ ತಂತ್ರಜ್ಞಾನದ ಈ ಅಣೆಕಟ್ಟೆಯಲ್ಲಿ ನಾವು ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿರುವುದು ನಮಗೆ ಹೆಮ್ಮೆ ಅನಿಸಿದೆ. ಇಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಗೂ ಇದು ಪ್ರೇರಣೆಯಾಗಿದೆ ಎಂದರು.

ನಂತರ ನಿಗಮದ ಸಹಾಯಕ ಅಭಿಯಂತರ ವೇಣುಗೋಪಾಲ್ ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯ ದೂರ ದೃಷ್ಟಿಯುಳ್ಳವರು. ಕಡು ಬಡದತನದಿಂದ ವಿದ್ಯಾಭ್ಯಾಸ ಮುಗಿಸಿ ನಂತರ ದೇಶದ ವಿವಿಧೆಡೆ ಕೆಲಸ ನಿರ್ವಹಿಸಿ ಮೆಚ್ಚುಗೆ ಪಡೆದರು. ಅವರು ಎಂದೂ ಸ್ವಾರ್ಥಕ್ಕೆ ಕೆಲಸ ಮಾಡಿದವರಲ್ಲ, ದೇಶದ ಅಭಿವೃದ್ಧಿ ಸಲುವಾಗಿ ದೇಶದ ವಿವಿಧೆಡೆ ಅನೇಕ ಜನಪರ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಸಿವಿಲ್ ಎಂಜಿನಿಯರ್ ಆಗಿದ್ದರೂ ಕೂಡ ಆರ್ಥಿಕ ತಜ್ಞರಂತೆ ಕೆಲಸ ನಿರ್ವಹಿಸಿದ್ದರು. ಅದರ ಪೂರ್ವ ದೃಷ್ಟಿಯ ಫಲವಾಗಿ ಇಂದು ವಿಶ್ವ ವಿಖ್ಯಾತ ಕೆ.ಆರ್.ಸಾಗರ ಅಣೆಕಟ್ಟೆ ಸೇರಿದಂತೆ ಹಲವು ಅಣೆಕಟ್ಟೆಗಳು, ಬ್ಯಾಂಕ್‌ಗಳು, ಅನೇಕ ಕಾರ್ಖನೆಗಳು ಸೇರಿದಂತೆ ಹಲವು ಯೋಜನೆಗಳು ನಿರ್ಮಾಣವಾಗಿದೆ. ದೇಶದ ಆರ್ಥಿಕತೆ ಬೆಳೆಯಲು ಅವರು ಶ್ರಮಿಸುತ್ತಿದ್ದರು. ಅವರ ತಂತ್ರಜ್ಙಾನದ ಫಲವಾಗಿ ಅವರಿಗೆ ಭಾರತರತ್ನ ಪ್ರಶಸ್ತಿ ಸಿಕ್ಕಿದೆ. ಅವರು ಬಳಸಿದ ತಂತ್ರಜ್ಞಾನಗಳು ನಮ್ಮೆಲ್ಲ ಎಂಜಿನಿಯರ್‌ಗಳ ಪ್ರೇರಣೆ ಮತ್ತು ಮಾದರಿಯಾಗಿದ್ದಾರೆ ಎಂದರು.

ನಿಗಮದ ತಾಂತ್ರಿಕ ಸಹಾಯಕರಾದ ಸುಮನಾ ಸೇರಿದಂತೆ ಹಲವು ಎಂಜಿನಿಯರ್ ಹಾಗೂ ಸಿಬ್ಬಂದಿ ಸರ್ ಎಂ.ವಿಶ್ವೇಶ್ವರಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ನಿಗಮದ ಸಹಾಯಕ ಅಭಿಯಂತರಾದ ವೇಣುಗೊಪಾಲ, ಅಕೀಬ್ ಜಾವಿದ್, ಶಿವಕುಮಾರ್, ಮಾನಸ, ಸಚಿನ್, ಪ್ರಥಮ ಲೆಕ್ಕ ಸಹಾಯಕ ನಾಗೇಶ್, ಎಫ್.ಡಿ.ಎ ಪ್ರಮೋದ್, ಎಸ್.ಡಿ.ಎ ಶಿವಕುಮಾರ್, ಪ್ರಮೋದ್, ಸಿಬ್ಬಂದಿ ಕೆಂಪರಾಜು, ಮ್ಯಾಥ್ಯೂ ಸೇರಿದಂತೆ ಕಾವೇರಿ ನೀರಾವರಿ ನಿಗಮದ ಸಿಬ್ಬಂದಿ, ಇತರರು ಇದ್ದರು.

ಸಿ.ಎಸ್.ಸುರೇಂದ್ರಗೆ ಪಿಎಚ್.ಡಿಕೆ.ಎಂ.ದೊಡ್ಡಿ:ಭಾರತೀನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ಸಿ.ಎಸ್.ಸುರೇಂದ್ರ ಅವರು

ಡಾ.ಮಲ್ಲಿನಾಥ ಕುಂಬಾರ್ ಅವರ ಮಾರ್ಗದರ್ಶನದಲ್ಲಿ ಮೈಸೂರು ಪ್ರದೇಶದ ಪ್ರಥಮ ದರ್ಜೆ ಕಾಲೇಜುಗಳ ವಿಜ್ಞಾನ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ವಿದ್ಯುನ್ಮಾನ ಮಾಹಿತಿ ಸಂಪನ್ಮೂಲಗಳ ಬಳಕೆ: ಒಂದು ಅಧ್ಯಯನ ಎಂಬ ವಿಷಯದ ಕುರಿತು ಮಂಡಿಸಿದ ಮಹಾ ಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿದ್ದಾರೆ. ಸಿ.ಎಸ್. ಸುರೇಂದ್ರ ಅವರು ಮುಂಬರುವ ವಾರ್ಷಿಕ ಘಟಿಕೋತ್ಸವದಲ್ಲಿ ಮೈಸೂರು ವಿವಿ ಪಿಎಚ್.ಡಿ ಪದವಿಯನ್ನು ಅಧಿಕೃತವಾಗಿ ಸ್ವೀಕರಿಸಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆಯಿಂದ ಒಂದು ತಿಂಗಳ ಕಾಲ ಸೇವಾ ಸಂಕಲ್ಪ ಅಭಿಯಾನ: ಪ್ರಹ್ಲಾದ್ ಜೋಶಿ
ಜನಸ್ನೇಹಿ ವೈದ್ಯರ ಆರೊಗ್ಯ ಕೈಪಿಡಿ, 2 ಕವನ ಸಂಕಲನ