ಇಂಗ್ಲಿಷ್‌ ಶಿಕ್ಷಕರಿಗೆ ಸಬಲೀಕರಣ ಕಾರ್ಯಕ್ರಮ ಇಂಗ್ಲಿಷ್‌ ಫೆಸ್ಟ್‌ ಉದ್ಘಾಟನೆ

KannadaprabhaNewsNetwork |  
Published : Feb 13, 2025, 12:49 AM IST
23 | Kannada Prabha

ಸಾರಾಂಶ

ಬ್ಲಾಕ್ ಹಂತದಲ್ಲಿ ರೀಡಿಂಗ್ ರೈಟಿಂಗ ಸ್ಪೀಕಿಂಗ್ ನಲ್ಲಿ ವಿಜೇತರಾದಂತ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಫಲಕ

ಕನ್ನಡಪ್ರಭ ವಾರ್ತೆ ಮೈಸೂರುನಗರದ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಆಂಗ್ಲ ಭಾಷಾ ಬೋಧನೆ ಮಾಡುವ ಶಿಕ್ಷಕರಿಗೆ ಇಂಗ್ಲಿಷ್ ಸಬಲೀಕರಣ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಇಂಗ್ಲಿಷ್ ಫೆಸ್ಟ್ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಉದ್ಘಾಟಿಸಿದರು.ಕಾರ್ಯಕ್ರಮಗಳಲ್ಲಿ ಉತ್ತಮ ಆಂಗ್ಲ ಭಾಷೆ ಬೋಧಿಸುವ ಶಿಕ್ಷಕರು ಹಾಗೂ ಇಂಗ್ಲಿಷ್ ಲಾಬ್ ಗಳನ್ನ ನಿರ್ವಹಿಸಿರುವ ಶಿಕ್ಷಕರು ಉತ್ತಮವಾಗಿ ಶಾಲೆಯನ್ನು ನಿರ್ವಹಣೆ ಮಾಡಿರುವ ಶಿಕ್ಷಕರಿಗೆ ಅಭಿನಂದಿಸಲಾಯಿತು.ಮೈಸೂರು ವಿಭಾಗದ ಸಹ ನಿರ್ದೇಶಕ ಡಾ. ಪಾಂಡುರಂಗ, ಉಪ ನಿರ್ದೇಶಕ ಜವರೇಗೌಡ, ಮೈಸೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ, ಮೈಸೂರು ಗ್ರಾಮಾಂತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮೇಗೌಡ, ಶಿಕ್ಷಣಾಧಿಕಾರಿ ಅನಂತರಾಜ್, ಡಿವೈಪಿಸಿ ಶೋಭಾ, ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ರಾಜು ಹಾಗೂ ಮೈಸೂರು ಉತ್ತರ ದಕ್ಷಿಣ ಗ್ರಾಮಾಂತರ ವಲಯಗಳಿಂದ 650 ಜನ ಆಂಗ್ಲ ಭಾಷಾ ಬೋಧಿಸುವ ಶಿಕ್ಷಕರಿಗೆ ಆಂಗ್ಲ ಭಾಷಾ ಟಿಎಲ್.ಎಂ ಎಕ್ಸಿಬಿಷನ್ ಅನ್ನ ಮಾಡಲಾಗಿತ್ತು. ಸುಮಾರು 150ಕ್ಕೂ ಹೆಚ್ಚು ಇಂಗ್ಲಿಷ್ ಟಿಎಲ್.ಎಂಗಳನ್ನು ಪ್ರದರ್ಶಿಸಲಾಗಿತ್ತು.ದಕ್ಷಿಣ ವಲಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 5ನೇ ತರಗತಿಯಿಂದ 9ನೇ ತರಗತಿಗೆ ವ್ಯಾಸಂಗ ಮಾಡುತ್ತಿರುವ 7,853 ವಿದ್ಯಾರ್ಥಿಗಳಲ್ಲಿ ತರಗತಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಕನಿಷ್ಠ ಕಲಿಯಲೇಬೇಕಾದ ಆಂಗ್ಲ ಭಾಷಾ ರೀಡಿಂಗ್ ಅಂಡ್ ರೈಟಿಂಗ್ ಕೌಶಲ್ಯಗಳನ್ನು ಬೆಳೆಸುವ ಮತ್ತು ಉತ್ತಮಪಡಿಸುವ ಸಲುವಾಗಿ 100 ದಿನಗಳ ಕಾರ್ಯಕ್ರಮವನ್ನು ಶಾಲಾ ಹಂತದಲ್ಲಿ ಏರ್ಪಡಿಸಿತ್ತು.ಬ್ಲಾಕ್ ಹಂತದಲ್ಲಿ ರೀಡಿಂಗ್ ರೈಟಿಂಗ ಸ್ಪೀಕಿಂಗ್ ನಲ್ಲಿ ವಿಜೇತರಾದಂತ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಫಲಕಗಳನ್ನು ನೀಡಲಾಯಿತು. 16 ವಿದ್ಯಾರ್ಥಿಗಳು ವಿಜೇತರಾಗಿದ್ದರು.150 ಜನ ಆಂಗ್ಲ ಬಾಷಾ ಬೋಧಿಸುವ ಶಿಕ್ಷಕರು ಉತ್ತಮವಾದ ಆಂಗ್ಲ ಭಾಷಾ ಬೋಧನೆಯ ಟಿಎಲ್ಎಂಗಳನ್ನು ಪ್ರದರ್ಶಿಸಿದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ