ಇಂಗ್ಲಿಷ್‌ ಭಾಷೆ ಜಗತ್ತಿನ ಸಂವಹನ ಮಾಧ್ಯಮ: ಪ್ರೊ. ಬಂಡಿವಡ್ಡರ

KannadaprabhaNewsNetwork |  
Published : Apr 29, 2026, 03:45 AM IST
27ಎಚ್‌ಎನ್‌ಎಲ್‌ ಸುದ್ದಿಯ ಪೋಟೋ ,. | Kannada Prabha

ಸಾರಾಂಶ

ಇಂಗ್ಲಿಷ್ ಭಾಷೆ ಜಗತ್ತಿಗೆ ಸಂವಹನದ ಮುಖ್ಯ ಮಾಧ್ಯಮವಾಗಿ, ಸ್ಪರ್ಧಾತ್ಮಕ ಲೋಕದ ಜೀವಾಳವೂ ಆಗಿದೆ ಎಂದು ಹಂಸಭಾವಿಯ ಎಮ್.ಎ.ಎಸ್.ಸಿ. ಕಾಲೇಜಿನ ಪ್ರಾಚಾರ್ಯ ಪ್ರೊ. ಎಮ್. ಜಿ. ಬಂಡಿವಡ್ಡರ ಹೇಳಿದರು.

ಹಾನಗಲ್ಲ: ಇಂಗ್ಲಿಷ್ ಭಾಷೆ ಜಗತ್ತಿಗೆ ಸಂವಹನದ ಮುಖ್ಯ ಮಾಧ್ಯಮವಾಗಿ, ಸ್ಪರ್ಧಾತ್ಮಕ ಲೋಕದ ಜೀವಾಳವೂ ಆಗಿದೆ ಎಂದು ಹಂಸಭಾವಿಯ ಎಮ್.ಎ.ಎಸ್.ಸಿ. ಕಾಲೇಜಿನ ಪ್ರಾಚಾರ್ಯ ಪ್ರೊ. ಎಮ್. ಜಿ. ಬಂಡಿವಡ್ಡರ ಹೇಳಿದರು. ಸೋಮವಾರ ಪಟ್ಟಣದ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಇಂಗ್ಲಿಷ್ ಭಾಷಾ ವಿಭಾಗವು ಆಯೋಜಿಸಿದ ಇಂಗ್ಲಿಷ್ ಭಾಷಾ ದಿನಾಚರಣೆ ಹಾಗೂ ಪ್ರಸಿದ್ಧ ನಾಟಕಕಾರ ವಿಲ್ಹಿಯಮ್ ಷೇಕ್ಸ ಪಿಯರ್ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ತಂತ್ರಜ್ಞಾನದ ಕಾಲದಲ್ಲಿ ಎಲ್ಲಾ ರಂಗದಲ್ಲೂ ಇಂಗ್ಲಿಷ್ ಭಾಷೆ ತನ್ನ ವಿಶೇಷತೆಯಿಂದ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದೆ ಹಾಗೂ ಯುವ ಪೀಳಿಗೆಯು ಯಾವುದೇ ಕೀಳರಿಮೆ ಇಟ್ಟುಕೊಳ್ಳದೇ ಇಂಗ್ಲಿಷ್ ಭಾಷೆಯನ್ನು ಕಲಿತು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು. ಪ್ರಸಿದ್ಧ ಕವಿ, ನಾಟಕಕಾರ ಷೇಕ್ಸಪಿಯರ್ ತನ್ನ ಅಗಾಧ ಪ್ರತಿಭೆಯಿಂದ ಪ್ರಬುದ್ಧ ಸಾಹಿತ್ಯ ರಚನೆಯ ಮೂಲಕ ಇಂಗ್ಲಿಷ್ ಭಾಷೆಯ ಜನಪ್ರಿಯತೆ ಹಾಗೂ ಘನತೆ ಹೆಚ್ಚಿಸಿರುವುದಲ್ಲದೇ ಮನುಷ್ಯ ಸ್ವಭಾವಗಳಿಗೆ ಜೀವ ತುಂಬುವಂತಹ ನೂರಾರು ಪಾತ್ರಗಳನ್ನು ಸೃಷ್ಟಿಸಿ ಸಾಹಿತ್ಯಲೋಕದ ಧ್ರುವತಾರೆಯಾಗಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಎಂ. ಎಚ್. ಹೊಳಿಯಣ್ಣನವರ, ಇಂಗ್ಲಿಷ್ ಭಾಷೆಗೆ ದೀರ್ಘ ಇತಿಹಾಸವಿಲ್ಲವಾದರೂ ಅದಕ್ಕೆ ತನ್ನದೇ ಆದ ಆಕರ್ಷಣೀಯ ಶಕ್ತಿ ಇರುವುದರಿಂದಲೇ ಅದು ಉಳಿದ ಭಾಷೆಗಳಿಗಿಂತ ಹೆಚ್ಚು ಪ್ರಚಲಿತದಲ್ಲಿದೆ. ವಿದ್ಯಾರ್ಥಿಗಳು ಸಾಹಿತ್ಯವನ್ನು ಹೆಚ್ಚು ಓದಿಕೊಳ್ಳುವ ಮೂಲಕ ಪ್ರಬುದ್ಧ ಹಾಗೂ ಸುಸ್ಥಿರ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಕಾಲೇಜಿನ ಇಂಗ್ಲಿಷ್ ಭಾಷಾ ವಿಭಾಗದ ಮುಖ್ಯಸ್ಥರಾದ ಅಶೋಕ ಪಾಗಾದ ಆಶಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಆರ್ಫಾ ಬಿಹಾರಿ, ಸ್ನೇಹಾ ಮಾಳದಕರ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ರೋಶನಿ ಪ್ರಾರ್ಥಿಸಿದರು, ಸಂಜನಾ ಅತಿಥಿಗಳನ್ನು ಪರಿಚಯಿಸಿದರು, ಅಂಜು ಜೀವಾಜಿ, ಭಾಗ್ಯಶ್ರೀ ಪವಾರ ಸ್ವಾಗತಿಸಿದರು. ದೀಪಾ ಮೆಣಸಕ್ಕನವರ ವಂದಿಸಿದರು, ಸೌಜನ್ಯ ಸವಣೂರ, ಪ್ರಿಯಾ ಹಾವಣಗಿ ಕಾರ್ಯಕ್ರಮ ನಿರೂಪಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾವೇರಿ ನೀರು ವಾಸ್ತವಾಂಶ ಸಂಂಗ್ರಹಿಸಿ ಸುಪ್ರೀಂ ಕೋರ್ಟ್‌ಗೆ ರಿಟ್‌: ಎಚ್‌.ಕೆ.ರಾಮು
ವಿಕಸಿತ ಭಾರತ ಭವಿಷ್ಯ ರೂಪಿಸುವ ದೃಢ ಸಂಕಲ್ಪ: ನಿರ್ಮಲಾ ಸೀತಾರಾಮನ್