ಕನಪ್ಡಪ್ರಭ ವಾರ್ತೆ ಕೊರಟಗೆರೆ
ತಾಲೂಕಿನ ಅರಸಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು .ಕೆ.ವಿ ಅವರ ನಿರ್ದೇಶನದಂತೆ ಮಂಗಳವರ ಇಂಗ್ಲಿಷ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಅನುಸೂಯ ದೇವಿ ವಹಿಸಿಕೊಂಡಿದ್ದರು. ಕಾರ್ಯಕ್ರಮವನ್ನು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ಕೆ.ವಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಶಿಕ್ಷಕರ ವೃತ್ತಿ ದಕ್ಷತೆಯನ್ನು ಹೆಚ್ಚಿಸಿಕೊಳ್ಳಲು ಹೆಚ್ಚು ಹೆಚ್ಚು ಪುಸ್ತಕಗಳನ್ನು ಅಧ್ಯಯನ ಮಾಡಬೇಕೆಂದು ತಿಳಿಸಿಕೊಟ್ಟರು. ಇದಕ್ಕೆ ನಿದರ್ಶನವಾಗಿ ಖ್ಯಾತ ಸಾಹಿತಿ ಕೃಷ್ಣಶಾಸ್ತ್ರಿ ಅವರ ಪುಸ್ತಕದ ಒಂದೆರಡು ಪುಟಗಳನ್ನು ಪ್ರಸ್ತುತಪಡಿಸಿ ಮಾದರಿ ಶಿಕ್ಷಕರ ಗುಣಲಕ್ಷಣಗಳನ್ನು ಸಿದ್ದಪ್ಪ ಮೇಷ್ಟ್ರು ಅವರ ಉದಾಹರಣೆಯನ್ನು ನೀಡಿದರು. 10ನೇ ತರಗತಿ ಫಲಿತಾಂಶವನ್ನು ಉತ್ತಮಪಡಿಸಲು ಶಿಕ್ಷಕರು ಯಾವ ರೀತಿ ಪ್ರಯತ್ನವನ್ನು ಮಾಡಬೇಕೆಂದು ಶಿಕ್ಷಕರೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಇಂಗ್ಲೀಷ್ ವಿಷಯದ ಸಂಪನ್ಮೂಲ ಶಿಕ್ಷಕ ದೊಡ್ಡಮಲ್ಲಯ್ಯ ಪ್ರೌಢಶಾಲಾ ಮಕ್ಕಳಿಗೆ ಸರಳವಾಗಿ ಇಂಗ್ಲಿಷ್ ವ್ಯಾಕರಣವನ್ನು ಕಲಿಸುವ ಬಗ್ಗೆ ತಮ್ಮ ಅನುಭವಗಳನ್ನು ವಿವರವಾಗಿ ಹಂಚಿಕೊಂಡರು.ದೈಹಿಕ ಶಿಕ್ಷಣ ಶಿಕ್ಷಕರಿಗೆ ರಾಜ್ಯ ಮಟ್ಟದ ಚೆಸ್ ಸಂಪನ್ಮೂಲ ವ್ಯಕ್ತಿಗಳಾದ ಪ್ರಾಣೇಶ್ ಯಾದವರು ಚೆಸ್ ಆಟ ಆಡುವುದು ಹಾಗೂ ಅದರ ನಿಯಮಗಳನ್ನು ತಿಳಿಸಿಕೊಟ್ಟರು.
ಕಾರ್ಯಗಾರದಲ್ಲಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಹನುಮಂತರಾಯಪ್ಪನವರ, ಇಂಗ್ಲಿಷ್ ಪೋರಂನ ಅಧ್ಯಕ್ಷ ಚಿಕ್ಕಪ್ಪಯ್ಯ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ವಜಿರ್ ಖಾನ್, ಕಾರ್ಯದರ್ಶಿ ಸತೀಶ್, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಶಿವಕುಮಾರ್, ಸಹ ಕಾರ್ಯದರ್ಶಿ ನರಸಿಂಹರಾಜು ಜೆಎನ್, ಶಾಲಾ ಶಿಕ್ಷಕರಾದ ಸರೋಜಾ, ಮಂಜುಳಾ, ಮಾರುತಿ, ಗೋಪಾಲಕೃಷ್ಟ, ಆನಂದ್ ಕುಮಾರ್, ಗೋವಿಂದರಾಜು, ಜಲಜಾಕ್ಷಿ ಸೇರಿದಂತೆ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.