ಸೇವಾ ಮನೋಭಾವದಿಂದ ಸಂಘದ ಗೌರವ ಹೆಚ್ಚಿಸಿ

KannadaprabhaNewsNetwork |  
Published : Jul 31, 2026, 02:00 AM IST
ಸೇವಾ ಮನೋಭಾವದಿಂದ ಸಂಘದ ಗೌರವ ಹೆಚ್ಚಿಸಿ ನೂತನ ಅಧ್ಯಕ್ಷ ಎ. ಶಿವಕುಮಾರ್ | Kannada Prabha

ಸಾರಾಂಶ

ಈ ಹಿಂದೆ ಸಂಘವನ್ನು ಮುನ್ನಡೆಸಿದ ಹಿರಿಯ ವಕೀಲರು ನ್ಯಾಯಾಂಗ ಸೇವೆಯ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘಕ್ಕೆ ವಿಶಿಷ್ಟ ಸ್ಥಾನಮಾನ ತಂದುಕೊಟ್ಟಿದ್ದಾರೆ. ಅಂತಹ ಸಂಘದ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿರುವ ಎಲ್ಲ ಹಿರಿಯರು ಹಾಗೂ ಸಹೋದ್ಯೋಗಿ ವಕೀಲರ ವಿಶ್ವಾಸಕ್ಕೆ ಸದಾ ಚಿರಋಣಿಯಾಗಿದ್ದು, ಸಂಘದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಯಾವುದೇ ಸಂಘಟನೆ ಅಥವಾ ಸಂಸ್ಥೆಯ ಜವಾಬ್ದಾರಿಯುತ ಹುದ್ದೆ ಅಧಿಕಾರ ಪ್ರದರ್ಶನಕ್ಕಲ್ಲ, ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ ಸಮಾಜದ ವಿಶ್ವಾಸ ಗಳಿಸುವ ಅವಕಾಶವಾಗಿದೆ ಎಂದು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎ. ಶಿವಕುಮಾರ್‌ ಹೇಳಿದರು.ನಗರದ ವಕೀಲರ ಸಂಘ ಭವನದಲ್ಲಿ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಗರದ ವಕೀಲರ ಸಂಘವು ದೀರ್ಘ ಇತಿಹಾಸ, ಗೌರವಯುತ ಪರಂಪರೆ ಹಾಗೂ ಜನಪರ ಧೋರಣೆಯನ್ನು ಹೊಂದಿರುವ ಸಂಘವಾಗಿದೆ. ಈ ಹಿಂದೆ ಸಂಘವನ್ನು ಮುನ್ನಡೆಸಿದ ಹಿರಿಯ ವಕೀಲರು ನ್ಯಾಯಾಂಗ ಸೇವೆಯ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘಕ್ಕೆ ವಿಶಿಷ್ಟ ಸ್ಥಾನಮಾನ ತಂದುಕೊಟ್ಟಿದ್ದಾರೆ. ಅಂತಹ ಸಂಘದ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿರುವ ಎಲ್ಲ ಹಿರಿಯರು ಹಾಗೂ ಸಹೋದ್ಯೋಗಿ ವಕೀಲರ ವಿಶ್ವಾಸಕ್ಕೆ ಸದಾ ಚಿರಋಣಿಯಾಗಿದ್ದು, ಸಂಘದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದು ಹೇಳಿದರು.ಹಿರಿಯ ವಕೀಲ ಹಾಗೂ ಸಂಘದ ಆಡಳಿತಾಧಿಕಾರಿ ಹಿರಿಯಣ್ಣ ಮಾತನಾಡಿ, ಈ ಬಾರಿಯ ಚುನಾವಣೆ ಸಂಘದ ಇತಿಹಾಸದಲ್ಲಿ ಮಹತ್ವದ ಘಟ್ಟವಾಗಿದೆ. ಹಲವು ವರ್ಷಗಳಿಂದ ಅವಿರೋಧ ಆಯ್ಕೆ ಪರಂಪರೆ ಮುಂದುವರಿದಿದ್ದರೂ, ಮೊದಲ ಬಾರಿಗೆ ಪ್ರಜಾಪ್ರಭುತ್ವದ ಮಾದರಿಯಲ್ಲಿ ಚುನಾವಣೆ ನಡೆದು ಪದಾಧಿಕಾರಿಗಳು ಆಯ್ಕೆಯಾಗಿರುವುದು ಸಂಘದ ಬೆಳವಣಿಗೆಯ ಸಂಕೇತವಾಗಿದೆ. ಹೊಸ ಪದಾಧಿಕಾರಿಗಳ ಮೇಲೆ ಸದಸ್ಯರ ನಿರೀಕ್ಷೆ ಹೆಚ್ಚಿದ್ದು, ವಕೀಲರ ಭವನದ ಲೋಕಾರ್ಪಣೆ, ನ್ಯಾಯಾಲಯ ಆವರಣದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸದಸ್ಯರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.ಹಿರಿಯ ವಕೀಲ ರವಿಶಂಕರ್‌ ಮಾತನಾಡಿ, ವಕೀಲರ ಸಂಘವು ಕೇವಲ ಆಡಳಿತಾತ್ಮಕ ಚಟುವಟಿಕೆಗಳಿಗೆ ಸೀಮಿತವಾಗದೆ, ಕಾನೂನು ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಬೆಳವಣಿಗೆಗಳ ಬಗ್ಗೆ ಸದಸ್ಯರಿಗೆ ನಿರಂತರ ಮಾಹಿತಿ ನೀಡುವ ವೇದಿಕೆಯಾಗಬೇಕು. ವಿಶೇಷವಾಗಿ ಯುವ ವಕೀಲರ ವೃತ್ತಿಪರ ಕೌಶಲ್ಯ ವೃದ್ಧಿಗೆ ಪ್ರತಿ ತಿಂಗಳು ಕಾನೂನು ತಜ್ಞರಿಂದ ಉಪನ್ಯಾಸ, ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರ ಸಾಮರ್ಥ್ಯವನ್ನು ಹೆಚ್ಚಿಸಬೇಕೆಂದು ಅಭಿಪ್ರಾಯಪಟ್ಟರು.ನೂತನ ಕಾರ್ಯದರ್ಶಿ ರಘು ಮಾತನಾಡಿ, ಸಂಘದ ಸದಸ್ಯರು ತೋರಿರುವ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಲಾಗುವುದು. ಹಿರಿಯ ವಕೀಲರ ಮಾರ್ಗದರ್ಶನ ಹಾಗೂ ಎಲ್ಲ ಸದಸ್ಯರ ಸಹಕಾರದೊಂದಿಗೆ ಸಂಘದ ಅಭಿವೃದ್ಧಿ, ಸದಸ್ಯರ ಹಿತಾಸಕ್ತಿ ಮತ್ತು ನ್ಯಾಯಾಂಗ ಸೇವೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಬದ್ಧತೆಯಿಂದ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.ಸಭೆಯಲ್ಲಿ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಿಕೊಟ್ಟ ಚುನಾವಣಾಧಿಕಾರಿಗಳಾದ ವಕೀಲರಾದ ಶ್ರೀಕಾಂತ್ ಹಾಗೂ ಶಿವರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸಿದ್ದಮಲ್ಲಪ್ಪ, ಆಡಳಿತಾಧಿಕಾರಿ ಮಹದೇವಪ್ಪ, ಹಿರಿಯ ವಕೀಲರಾದ ಸುಬ್ರಮಣ್ಯಸ್ವಾಮಿ, ಸರ್ವೇಶ್, ಕೇಶವಮೂರ್ತಿ, ನಟರಾಜ್, ಪ್ರಸನ್ನಕುಮಾರ್, ವಿಜಯ್ ಕುಮಾರ್ ಸೇರಿದಂತೆ ಅನೇಕ ವಕೀಲರು ಉಪಸ್ಥಿತರಿದ್ದರು. ಬಳಿಕ ನೂತನ ಪದಾಧಿಕಾರಿಗಳನ್ನು ಸಹೋದ್ಯೋಗಿ ವಕೀಲರು ಅಭಿನಂದಿಸಿ ಶುಭ ಹಾರೈಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಳೆದು ಹೋದ ಮೊಬೈಲ್ ಪತ್ತೆಹಚ್ಚುವಲ್ಲಿ ಜಿಲ್ಲಾ ಪೊಲೀಸರ ಸಾಧನೆ
ರೈತರ ಹೊಲದಲ್ಲಿ ಧರಣಿ ನಡೆಸಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್