ರೈಲ್ವೆ ಸಂಪರ್ಕ ಹೆಚ್ಚಳದಿಂದ ಅಭಿವೃದ್ಧಿಗೆ ಪೂರಕ: ಶಾಸಕ ದಿನಕರ ಶೆಟ್ಟಿ

KannadaprabhaNewsNetwork |  
Published : Nov 16, 2026, 02:15 AM IST
ನೂತನ ರೇಲ್ವೆಗೆ ಸ್ವಾಗತಿಸುತ್ತಿರುವುದು   | Kannada Prabha

ಸಾರಾಂಶ

ಪ್ರಸ್ತುತ ಆರಂಭವಾದ ನೂತನ ರೈಲ್ವೆಯಿಂದ ಪ್ರವಾಸೋದ್ಯಮ ಅಭಿವೃದ್ದಿ ಹಾಗೂ ಕರಾವಳಿಯ ಜನರಿಗೆ ಅನುಕೂಲತೆಯಾಗಲಿದೆ.

ಗೋಕರ್ಣ: ರೈಲ್ವೆ ಸಂಪರ್ಕ ಸಾರಿಗೆ ಹೆಚ್ಚಾದರೆ ಆಯಾ ಜಿಲ್ಲೆ ರಾಜ್ಯಗಳ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಭಾನುವಾರ ಮಾದನಗೇರಿಯ ಗೋಕರ್ಣ ರೋಡ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ನೂತನ ಬೆಂಗಳೂರು- ಮಡಗಾಂವ್ ವಂದೇ ಭಾರತ್ ರೈಲಿಗೆ ಅದ್ಧೂರಿಯಾಗಿ ಸ್ವಾಗತಿಸಿ ಮಾತನಾಡಿದ ಅವರು, ಪ್ರಸ್ತುತ ಆರಂಭವಾದ ನೂತನ ರೈಲ್ವೆಯಿಂದ ಪ್ರವಾಸೋದ್ಯಮ ಅಭಿವೃದ್ದಿ ಹಾಗೂ ಕರಾವಳಿಯ ಜನರಿಗೆ ಅನುಕೂಲತೆಯಾಗಲಿದೆ ಎಂದರು.

ಈ ಭಾಗಗಕ್ಕೆ ಹೆಚ್ಚಿನ ರೈಲ್ವೆ ಸೇವೆಗಾಗಿ ನಾನು ಕೇಂದ್ರಕ್ಕೆ ಮನವಿ ನೀಡುತ್ತಾ ಬಂದಿದ್ದು, ಇದಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ರೈಲ್ವೆ ಹೋರಾಟ ಸಮಿತಿಯ ರಾಜೀವ ಗಾಂವ್ಕರ ಅವರು ಜತೆಯಾಗಿದ್ದು, ನಮ್ಮ ಮನವಿಗೆ ಸ್ಪಂದಿಸಿದ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್, ರಾಜ್ಯ ಮಂತ್ರಿ ಸೋಮಣ್ಣ ಅವರು ನೂತನ ರೈಲ್ವೆ ಸಂಚಾರ ವ್ಯವಸ್ಥೆ ಕಲ್ಪಿಸಿದ್ದು, ಸಚಿವರಿಗೆ ಹಾಗೂ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ನಮ್ಮ ಜಿಲ್ಲೆಯ ಪ್ರವಾಸೋದ್ಯಮ, ವ್ಯಾಪಾರ ವಹಿವಾಟಿಗೆ ರೈಲ್ವೆ ಸಂಪರ್ಕ ಸೇವೆ ಮತ್ತಷ್ಟು ವೇಗ ಪಡೆಯಲಿದೆ ಎಂದರು.ಈ ವೇಳೆ ಉತ್ತರ ಕನ್ನಡ ರೈಲ್ವೆ ಸೇವಾ ಹೋರಾಟ ಸಮಿತಿ ಉಪಾಧ್ಯಕ್ಷ ವೆಂಟು ಮಾಸ್ತರ ಶಿಳ್ಯ, ಕಾರ್ಯದರ್ಶಿ ರಾಜೀವ ಗಾಂವಕರ, ಸದಸ್ಯರಾದ ವಸಂತ ನಾಯಕ ಭಾವಿಕೇರಿ, ಚಂದ್ರಹಾಸ ನಾಯಕ ಗೋಕರ್ಣ, ಮಹಾಲಸಾ ಸಿದ್ದಿವಿನಾಯಕ ಮಂದಿರದ ಟ್ರಸ್ಟಿ ಸುನಿಲ್ ಪೈ, ಉಮೇಶ ಗಾಂವಕರ ಹಿರೇಗುತ್ತಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮೋಹನ ನಾಯಕ ದೇವರಭಾವಿ, ಬಿಜೆಪಿ ಪ್ರಮುಖರಾದ ಜಗದೀಶ ಅಂಬಿಗ, ಮಹೇಶ ಶೆಟ್ಟಿ, ಸಂದೀಪ ಅಗಸಾಲಿ, ಗಣೇಶ ಪಂಡಿತ್ ,ರಾಮು ಕೆಂಚನ್ ಮಹೇಶ ನಾಯಕ ಸ್ಥಳೀಯರಾದ ಬೊಮ್ಮಯ್ಯ ನಾಯಕ, ಉದ್ದಂಡ ಗಾಂವಕರ ಹಿರೇಗುತ್ತಿ, ಆದರ್ಶ ಗಾಂವಕರ ಇತರರು ಇದ್ದರು.ರೈಲ್ವೆ ಹೋರಾಟದಲ್ಲಿ ಮಂಚೂಣಿಯಲ್ಲಿದ್ದ ಇಲ್ಲಿನ ದಿ. ನಾರಾಯಣ ಭಟ್ ಅವರ ಸೇವೆ ಸ್ಮರಿಸಿ ಅವರ ಪುತ್ರ ದಿವಾಕರ ಭಟ್‌ ಹಾಗೂ ಶಾಸಕ ದಿನಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕದಳೀಪ್ರಿಯ ದೇವರಿಗೆ ಕದಳೀಮೇಳ ಆಮಂತ್ರಣ ಸಮರ್ಪಣೆ
ರಂಗ ಚಟುವಟಿಕೆಗಳ ಮೂಲಕ ಉತ್ತಮ ಸಮಾಜ ನಿರ್ಮಾಣ: ಜೀವನ್‌ರಾಮ್ ಸುಳ್ಯ