ಕನ್ನಡಪ್ರಭ ವಾರ್ತೆ ನವಲಿ
ಮನರೇಗಾ ಯೋಜನೆಯಡಿ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳ ಸದುಪಯೋಗ ಪಡೆಯಲು ಗ್ರಾಮಸ್ಥರಿಗೆ ಚಿಕ್ಕಡಂಕನಕಲ್ ಪಿಡಿಓ ಈರಪ್ಪ ಗಟ್ಟೆಪ್ಪನವರ ಹೇಳಿದರು.ಕನಕಗಿರಿ ತಾಲೂಕಿನ ಚಿಕ್ಕಡಂಕನಕಲ್ ಗ್ರಾಪಂಯಲ್ಲಿ 2025-26ನೇ ಸಾಲಿನ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಕ್ರಿಯಾ ಯೋಜನೆ ತಯಾರಿಸಲು ಗುರುವಾರ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮದ ಜನರು ನರೇಗಾ ಯೋಜನೆಯ ಮೂಲಕ ಹಲವಾರು ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳನ್ನು ಅನುಷ್ಠಾನ ಮಾಡಿಕೊಳ್ಳಬಹುದು. ಗ್ರಾಪಂ ಚುನಾಯಿತ ಜನಪ್ರತಿನಿಧಿಗಳು ಜನರ ಆಶೋತ್ತರಗಳಿಗೆ ಸ್ಪಂದಿಸಿ ಗ್ರಾಮದ ಗ್ರಾಮೀಣಾಭಿವೃದ್ಧಿ ಕನಸನ್ನ ನನಸಾಗಿಸಬೇಕು ಎಂದರು.ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಕವಿತಾ ನಾಯಕ ಮಾತನಾಡಿ, ಈ ಬಾರಿ ಆನ್ ಲೈನ್ ನಲ್ಲಿ ಕ್ರಿಯಾಯೋಜನೆ ಅಪ್ಲೋಡ್ ಮಾಡಬೇಕಿದೆ. ಜೊತೆಗೆ ಕ್ಯೂಆರ್ ಕೋಡ್ ಬಳಸಿ ಸಲ್ಲಿಸಿದ ಬೇಡಿಕೆಗಳ ಕಾಮಗಾರಿಗಳನ್ನು ಪರಿಶೀಲನೆ ಮಾಡಿ ಅನುಷ್ಟಾನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
ಇದೇ ವೇಳೆ ಸಾಮಾಜಿಕ ಅರಣ್ಯ ಇಲಾಖೆಯಡಿ ಸಿಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.ನಂತರ ತಾಲೂಕು ಐಇಸಿ ಸಂಯೋಜಕ ಶಿವಕುಮಾರ್ ಕೆ. ಮಾತನಾಡಿ, ನರೇಗಾ ಕಾಯಕ ಬಂಧುಗಳು ಕೂಲಿಕಾರರಿಗೆ 100 ದಿನಗಳ ಕೆಲಸ ಕೊಡಿಸುವಲ್ಲಿ ಶ್ರಮಿಸಬೇಕು ಎಂದರು.
ಬಳಿಕ ಗ್ರಾಪಂ ಉಪಾಧ್ಯಕ್ಷ ರಾಮಚಂದ್ರಗೌಡ ಮಾತನಾಡಿದರು.ಇದೇ ವೇಳೆ ಗ್ರಾಮದ 5 ಗ್ರಾಮಗಳಿಂದ ಬಂದಂತಹ ಅರ್ಜಿಗಳನ್ನು ಓದಿ ಹೇಳಲಾಯಿತು.
ಈ ವೇಳೆ ಗ್ರಾಮ ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ನೀಲಮ್ಮ ಬಸವರಾಜ್, ಸದಸ್ಯರಾದ ಹುಸೇನಸಾಬ್, ವಿರುಪಾಕ್ಷಪ್ಪ, ನಾಗನಗೌಡ, ಕೃಷ್ಣಮೂರ್ತಿ, ನಿರುಪಾದೆಪ್ಪ ಹಾಗೂ ಸರ್ವ ಸದಸ್ಯರು, ತಾಂತ್ರಿಕ ಸಹಾಯಕ ಕೊಟ್ರೇಶ್ ಜವಳಿ, ಅರಣ್ಯ ಇಲಾಖೆ ಅಧಿಕಾರಿ ಮಹಾಂತೇಶ್ ಸೇರಿದಂತೆ ಗ್ರಾಮಸ್ಥರಾದ ರಾಮಣ್ಣ ಆದಾಪುರ, ಸೋಮಣ್ಣ ಪ್ಯಾಟಿ ಮತ್ತು ಗ್ರಾಪಂ ಸಿಬ್ಬಂದಿ, ಸಾರ್ವಜನಿಕರು, ಕಾಯಕ ಬಂಧುಗಳು ಇದ್ದರು.