ನೇಮಕಾತಿಯಲ್ಲಿ ಸಮಾನ ನ್ಯಾಯ ನೀಡಿ

KannadaprabhaNewsNetwork |  
Published : Nov 03, 2026, 03:15 AM IST
ಮನವಿ | Kannada Prabha

ಸಾರಾಂಶ

ಕನ್ನಡಪ್ರಭ ವಾತೆ ಮುದ್ದೇಬಿಹಾಳ ರಾಜ್ಯದಲ್ಲಿ ಕರಾಟೆ ಮತ್ತು ಯೋಗ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಸಮಾನ ನ್ಯಾಯ ಒದಗಿಸುವುದರ ಜೊತೆಗೆ, ಎರಡೂ ವಿಭಾಗಗಳ ಸ್ವರೂಪ ಹಾಗೂ ಅರ್ಹತೆಗಳನ್ನು ಆಧರಿಸಿ ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ರಾಜ್ಯ ಕರಾಟೆ ಶಿಕ್ಷಕರ ಸಂಘದ ಪದಾಧಿಕಾರಿಗಳು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾತೆ ಮುದ್ದೇಬಿಹಾಳರಾಜ್ಯದಲ್ಲಿ ಕರಾಟೆ ಮತ್ತು ಯೋಗ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಸಮಾನ ನ್ಯಾಯ ಒದಗಿಸುವುದರ ಜೊತೆಗೆ, ಎರಡೂ ವಿಭಾಗಗಳ ಸ್ವರೂಪ ಹಾಗೂ ಅರ್ಹತೆಗಳನ್ನು ಆಧರಿಸಿ ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ರಾಜ್ಯ ಕರಾಟೆ ಶಿಕ್ಷಕರ ಸಂಘದ ಪದಾಧಿಕಾರಿಗಳು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರಿಗೆ ಮನವಿ ಸಲ್ಲಿಸಿದರು.

ಬಳ್ಳಾರಿಯಲ್ಲಿ ನಡೆಯಲಿರುವ ನಾರಿ ಶಕ್ತಿ ರಾಜ್ಯಮಟ್ಟದ ಕರಾಟೆ ಸ್ಪರ್ಧೆಗೆ ಆಹ್ವಾನಿಸಲು ಬೆಂಗಳೂರಿಗೆ ರಾಜ್ಯ ಕರಾಟೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕಟ್ಟಿ ಸ್ವಾಮಿ ಬಳ್ಳಾರಿ ಹಾಗೂ ರಾಜ್ಯ ವಕ್ತಾರ ಶಿವಕುಮಾರ್ ಶಾರದಳ್ಳಿ ನೇತೃತ್ವದ ನಿಯೋಗ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ ಮಾಡಿ ಮನವಿ ನೀಡಿದರು. ರಾಜ್ಯದಲ್ಲಿ ಸರ್ಕಾರದಿಂದ ರಾಜ್ಯದ 400 ಪಿಎಮ್ ಶ್ರೀ ಯೋಜನೆ ಅಡಿಯಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಹೆಣ್ಣುಮಕ್ಕಳಿಗೆ ಕರಾಟೆ ಮತ್ತು ಯೋಗ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಕರಾಟೆ ಶಿಕ್ಷಕರಿಗೆ ಆಗುತ್ತಿರುವ ತಾರತಮ್ಯದ ಕುರಿತು ಪದಾಧಿಕಾರಿಗಳು ಗಮನ ಸೆಳೆದರು.ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಡಾ.ನಾಗಲಕ್ಷ್ಮಿ ಚೌಧರಿ, ಈ ಬಗ್ಗೆ ತಕ್ಷಣ ಸಂಬಂಧಪಟ್ಟವರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು. ಮಹಿಳೆಯರ ಆತ್ಮರಕ್ಷಣೆ, ಸ್ವಾವಲಂಬನೆ ಮತ್ತು ಆತ್ಮವಿಶ್ವಾಸ ವೃದ್ಧಿಸುವಲ್ಲಿ ಕರಾಟೆ ತರಬೇತಿ ಮಹತ್ವದ ಪಾತ್ರ ವಹಿಸುತ್ತದೆ. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಕರಾಟೆ ಕಲಿಸುವುದು ಇಂದಿನ ಅಗತ್ಯವಾಗಿದೆ. ಕರಾಟೆ ಶಿಕ್ಷಕರಿಗೆ ನ್ಯಾಯಯುತ ಅವಕಾಶ ದೊರೆಯಬೇಕು ಎಂದರು.ಈ ವೇಲೆ ರಾಜ್ ಕರಾಟೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕಟ್ಟೇಸ್ವಾಮಿ ಬಳ್ಳಾರಿ, ರಾಜ್ಯ ವಕ್ತಾರ ಶಿವಕುಮಾರ್ ಶಾರದಳ್ಳಿ, ಮುತ್ತು ಟಕ್ಕಳಕಿ, ಕರಾಟೆ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಗುರುನಾಥ್, ರಜತ್ ನಾಗರಾಜ್, ಸಂಜನಾ ಕುಮಾರಿ, ಪ್ರೇಮ ಉಪಸ್ಥಿತರಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋಮಾತೆಗೆ ರಾಷ್ಟ್ರಮಾತೆ ಗೌರವ ನೀಡಲು ಆಗ್ರಹ
ಅರ್ಜಿಗಳನ್ನು 21 ದಿನಗಳೊಳಗೆ ವಿಲೇವಾರಿ ಮಾಡಿ