ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ನ್ಯೂಕ್ಲಿಯರ್ ಎನರ್ಜಿ ಹಾಗೂ ಇತರೆ ರೇಡಿಯೋ ಆಕ್ಟಿವ್ ಮೆಟೀರಿಯಲ್/ ವಿಕಿರಣ ಶೀಲ ವಸ್ತುಗಳ ನಿರ್ವಹಣೆ ಹಾಗೂ ತನಿಖೆ ಕುರಿತು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳಿಗೆ ಆಯೋಜಿಸಿದ್ದ 2 ದಿನಗಳ ತರಬೇತಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ದಕ್ಷಿಣ ಭಾರತ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಕಾರ್ಯಾಗಾರ ನೆಡೆಯುತ್ತಿದ್ದು, ಇದು ಪೊಲೀಸ್ ಅಧಿಕಾರಿಗಳಿಗೆ ಹೊಸ ವಿಷಯವಾಗಿದೆ. ನ್ಯೂಕ್ಲಿಯರ್ ಎನರ್ಜಿ ಹಾಗೂ ಇತರೆ ರೇಡಿಯೋ ಆಕ್ಟಿವ್ ಮೆಟೀರಿಯಲ್/ ವಿಕಿರಣ ಶೀಲ ವಸ್ತುಗಳು ದೇಶದ ಅಭಿವೃದ್ಧಿಗೆ ಪೂರಕವಾಗಿದ್ದು, ಇವುಗಳನ್ನು ಕೈಗಾರಿಕಾ ಕ್ಷೇತ್ರದಲ್ಲಿ, ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆ ಹಾಗೂ ಪರಿಸರ ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟಂತೆ ಕೂಡ ಬಳಸಲಾಗುತ್ತದೆ ಎಂದರು.ಹಾಗೆಯೇ ಈ ವಸ್ತುಗಳನ್ನು ವಿನಾಶಕಾರಿ ಉದ್ದೇಶಕ್ಕೆ ಬಳಸದಂತೆ ಸಂಬಂಧಪಟ್ಟ ಸಂಸ್ಥೆಗಳು ಹಾಗೂ ಪೊಲೀಸ್ ಅಧಿಕಾರಿಗಳು ನಿಗಾ ವಹಿಸಬೇಕಾಗುತ್ತದೆ. ನ್ಯೂಕ್ಲಿಯರ್ ಎನರ್ಜಿ ಹಾಗೂ ಇತರೆ ರೇಡಿಯೋ ಆಕ್ಟಿವ್ ಮೆಟೀರಿಯಲ್ ಸೂಕ್ಷ್ಮ ವಸ್ತುಗಳಾಗಿದ್ದು, ಬಹಳ ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕಾಗುತ್ತದೆ. ಇದರ ನಿರ್ವಹಣೆಯಲ್ಲಿ ವೈಫಲ್ಯವಾದರೆ ಬಹು ದೊಡ್ಡ ಮಟ್ಟದ ಪರಿಸರ ಹಾನಿಯಾಗಿ, ಮಾನವ ಆರೋಗ್ಯಕ್ಕೆ ಹಾನಿ ಉಂಟುಮಾಡುವುದೂ ಅಲ್ಲದೇ, ಮುಂದಿನ ಪೀಳಿಗೆಯ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.
ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ ಹಿರಿಯ ವಿಜ್ಞಾನಿ ಹಾಗೂ ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ಭಾರತದ ಪ್ರತಿನಿಧಿಯಾಗಿದ್ದ ಡಾ. ಶೇಷಾದ್ರಿ ಮುರುಳಿ, ಅಮಿಟಿ ವಿವಿ ಯುವ ವಿಜ್ಞಾನಿ ಡಾ. ಅಭಿಷೇಕ್ ಯಾದವ್ ಹಾಗೂ ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ ವಿಜ್ಞಾನಿ ಡಾ. ರಾಮನ ರವಿಶಂಕರ್ ಅವರು ಕಾರ್ಯಾಗಾರ ನಡೆಸಿಕೊಟ್ಟರು.
ಸಿಎಂ ಜಿಲ್ಲೆಯಲ್ಲಿ ಡ್ರಗ್ಸ್ ಘಟಕ ಪತ್ತೆ ತಲೆ ತಗ್ಗಿಸುವ ವಿಚಾರ: ಕಿರಣ್ ಜೈರಾಮ್ ಗೌಡ
ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದ್ದರೆ ಈ ಡ್ರಗ್ಸ್ ಮಾಫಿಯಾವನ್ನು ಮತ್ತು ನಶೆಯ ಮತ್ತಿನಲ್ಲಿ ಹಾಡು ಹಗಲಲ್ಲೇ ಮಚ್ಚು ಲಾಂಗು ಹಿಡಿದು ಹಲ್ಲೆ ನಡೆಸುವ ಪುಂಡರನ್ನು ಮಟ್ಟ ಹಾಕಬಹುದಿತ್ತು. ನಮ್ಮ ರಾಜ್ಯದಲ್ಲಿ ಡ್ರಗ್ಸ್ ಫ್ಯಾಕ್ಟರಿಯನ್ನು ನಮ್ಮ ಪೊಲೀಸ್ ಇಲಾಖೆ ಪತ್ತೆ ಹಚ್ಚಲು ವಿಫಲವಾಗಿದ್ದು ಯಾಕೆ ಎನ್ನುವ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರಿಸಬೇಕಿದೆ. ಕಾಂಗ್ರೆಸ್ ಸಚಿವರ ಆಪ್ತರ ಬೆಂಬಲದಿಂದಲೇ ಈ ಡ್ರಗ್ಸ್ ದಂದೆ ಲೀಲಾಜಾಲವಾಗಿ ನಡೆಯುತ್ತಿದೆ ಎಂಬ ಅನುಮಾನ ಕಾಡುತ್ತಿದೆ ಎಂದು ಅವರು ದೂರಿದ್ದಾರೆ.