ರಟ್ಟಿಹಳ್ಳಿ: ರಾಜ್ಯದಲ್ಲಿ ಮುಸ್ಲಿಂರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ನೀವು ಇನ್ನು 2 ವರ್ಷ ಎಷ್ಟೇ ಅಟಾಟೋಪಗಳನ್ನು ಮಾಡಿದರೂ, ಮುಂದೆ ನಮ್ಮ ಸರಕಾರ ಬರುತ್ತೆ, ಆ ಸಂದರ್ಭದಲ್ಲಿ ಮತೀಯ ಶಕ್ತಿಗಳ ಮನೆಗೆ ಹೊಕ್ಕು ತಕ್ಕ ಪಾಠ ಕಲಿಸಿ ಕಾನೂನಿನ ಮೂಲಕ ಕಠಿಣ ಕ್ರಮವಾಗುವಂತೆ ನೋಡಿಕೊಳ್ಳಲಾಗುವುದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಹಿಂದಿನ ಆಡಳಿತ ನಡೆಸಿದ ಸರಕಾರವನ್ನು ಕಿತ್ತು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮತೀಯ ಶಕ್ತಿಗಳು ಮೂಲೆಗುಂಪಾಗಿವೆ. ಅದೇ ರೀತಿ ರಾಜ್ಯದಲ್ಲೂ ಹಿಂದೂಗಳು ಜಾತಿ ಮತ ಭೇದ ಬಿಟ್ಟು ಒಟ್ಟಾಗಿ ಬಾಳಿ ಎಂದರು.
ಇತ್ತೀಚೆಗೆ ಹಾವೇರಿ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆ ಹಾಗೂ ಹತ್ಯೆಗಳ ಬಗ್ಗೆ ವಿಧಾನಭೆಯಲ್ಲಿ ಚರ್ಚೆ ನಡೆಸಿ ಆರೋಪಿಗಳಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಹಾಗೂ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಸರಕಾರಕ್ಕೆ ಒತ್ತಡ ಹಾಕಲಾಗುವುದು ಎಂದರು.ಪೊಲೀಸ್ ಕಾರ್ಯಕ್ಕೆ ಶ್ಲಾಘನೆ: ಶಿವಾಜಿರಾವ್ ಹತ್ಯೆಯಾದ 2-3 ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಿದ್ದು, ಪೊಲೀಸ್ ಇಲಾಖೆಯ ಕಾರ್ಯವೈಕರಿ ಅತ್ಯಂತ ಶ್ಲಾಘನೀಯ. ಆದರೆ ರಾಜ್ಯವನ್ನು ಆಡಳಿತ ನಡೆಸುವ ಸರಕಾರ ಕ್ಯಾಬಿನೆಟ್‍ನಲ್ಲಿ ಕೇಸ್‍ಗಳನ್ನು ವಾಪಸ್ ಪಡೆದು ಇಲಾಖೆಯ ನೈತಿಕತೆಯನ್ನು ಕುಗ್ಗಿಸುವಂತೆ ಮಾಡುವುದು ಅತ್ಯಂತ ಕೆಟ್ಟ ಬೆಳವವಣಿಗೆ ಎಂದು ಯತ್ನಾಳ್ ಆರೋಪಿಸಿದರು.