ಮಾರ್ಕೆಟ್‌ಗೆ ಬರುವ ಗೂಡ್ಸ್‌ ವಾಹನಕ್ಕೆ ಟೋಲ್‌ಗೇಟ್‌ ಶುಲ್ಕ

KannadaprabhaNewsNetwork |  
Published : Sep 04, 2026, 02:15 AM IST
ಚಿತ್ರ ಸುದ್ದಿ: ಹೋರಾಟ ಶಹಾಬಾದ್ ತಾಲ್ಲೂಕಿನ ವಾಡಿ ಕ್ರಾಸ್ ಬಳಿ ಬಿಜೆಪಿ ಹಾಗೂ ರೈತ ಮೋರ್ಚಾದ ವತಿಯಿಂದ ಬರಗಾಲ ಘೋಷಣೆಗೆ ಆಗ್ರಹಿಸಿ ಹಮ್ಮಿಕೊಂಡ ರಸ್ತಾರೋಕೋ ಚಳುವಳಿಯಲ್ಲಿ ಶಾಸಕ ಬಸವರಾಜ ಮತ್ತಿಮುಡು ಮಾತನಾಡಿದರು. | Kannada Prabha

ಸಾರಾಂಶ

ಕೆ.ಆರ್.ಮಾರುಕಟ್ಟೆಗೆ ಪ್ರವೇಶಿಸುವ ತರಕಾರಿ, ಹೂವು, ಹಣ್ಣು ಮತ್ತಿತರ ಸರಕು ಸಾಗಣೆ ವಾಹನಗಳ ಶುಲ್ಕ ಸಂಗ್ರಹ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರಲು ಪ್ರವೇಶ ಸ್ಥಳದಲ್ಲಿ ಟೋಲ್ ಗೇಟ್ ಮೂಲಕ ಶುಲ್ಕ ಸಂಗ್ರಹ ವ್ಯವಸ್ಥೆಯನ್ನು ಪರಿಚಯಿಸಲು ಕೇಂದ್ರ ನಗರ ಪಾಲಿಕೆ ಮುಂದಾಗಿದೆ.

-ಪಾರದರ್ಶಕತೆ, ಆದಾಯ ಸೋರಿಕೆ ತಡೆಗೆ ಈ ವ್ಯವಸ್ಥೆ । ಕೆ.ಆರ್‌.ಮಾರ್ಕೆಟ್‌ 4 ಪ್ರವೇಶ ದ್ವಾರಗಳ ಬಳಿ ಟೋಲ್‌ಗೇಟ್ ಅಳವಡಿಕೆಗೆ ಪಾಲಿಕೆ ನಿರ್ಧಾರ

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆ.ಆರ್.ಮಾರುಕಟ್ಟೆಗೆ ಪ್ರವೇಶಿಸುವ ತರಕಾರಿ, ಹೂವು, ಹಣ್ಣು ಮತ್ತಿತರ ಸರಕು ಸಾಗಣೆ ವಾಹನಗಳ ಶುಲ್ಕ ಸಂಗ್ರಹ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರಲು ಪ್ರವೇಶ ಸ್ಥಳದಲ್ಲಿ ಟೋಲ್ ಗೇಟ್ ಮೂಲಕ ಶುಲ್ಕ ಸಂಗ್ರಹ ವ್ಯವಸ್ಥೆಯನ್ನು ಪರಿಚಯಿಸಲು ಕೇಂದ್ರ ನಗರ ಪಾಲಿಕೆ ಮುಂದಾಗಿದೆ.

ಮಾರುಕಟ್ಟೆಗೆ ಹಣ್ಣು, ತರಕಾರಿ, ಹೂವು, ಮೊಟ್ಟೆ, ಮಾಂಸ ತರುವ ವಾಹನಗಳಿಗೆ ಮೊದಲಿಂದಲು ಶುಲ್ಕ ವಿಧಿಸಲಾಗುತ್ತಿದೆ. ಹಾಲಿ ದಿನಕ್ಕೆ ಒಟ್ಟು ನಾಲ್ಕು ಸಾವಿರ ರು. ಮಾತ್ರ ಶುಲ್ಕ ಸಂಗ್ರಹವಾಗುತ್ತಿದೆ. ಆದಾಯ ಸೋರಿಕೆ ತೀವ್ರವಾಗಿತ್ತು. ಶುಲ್ಕ ಸಂಗ್ರಹ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರಲಿಲ್ಲ. ಹೀಗಾಗಿ, ಪಾರದರ್ಶಕತೆ ಮತ್ತು ಆದಾಯ ಸೋರಿಕೆಯನ್ನು ತಡೆಗಟ್ಟಲು ವ್ಯವಸ್ಥಿತ ಟೋಲ್ ಗೇಟ್ ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತದೆ. ಇದರಿಂದ ದೈನಂದಿನ ಆದಾಯ 10 ಸಾವಿರ ರು. ದಾಟುವ ನಿರೀಕ್ಷೆ ಇದೆ ಎಂದು ಪಾಲಿಕೆ ಆಯುಕ್ತ ಜಿ.ಜಗದೀಶ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ನೂತನ ವ್ಯವಸ್ಥೆಯಡಿ ಮಾರುಕಟ್ಟೆಯ ನಾಲ್ಕು ಪ್ರವೇಶ ದ್ವಾರಗಳ ಬಳಿ ಟೋಲ್ ಗೇಟ್ ಅಳವಡಿಸಲಾಗುತ್ತದೆ. ಒಳ ಪ್ರವೇಶಿಸುವ ವ್ಯಾಪಾರಿಗಳು, ಮಧ್ಯವರ್ತಿಗಳ ವಾಹನಗಳಲ್ಲಿನ ಲೋಡ್ ಆಧಾರದ ಮೇಲೆ ಶುಲ್ಕ ವಿಧಿಸಲಾಗುತ್ತದೆ. ಟ್ರಕ್‌, 6 ಚಕ್ರ ಅಥವಾ ಅದಕ್ಕಿಂತ ದೊಡ್ಡ ವಾಹನಗಳಿಗೆ 350 ರು. 4 ಚಕ್ರ ವಾಹನಗಳಿಗೆ 100 ರು. ಹಾಗೂ ತ್ರಿಚಕ್ರ ವಾಹನಗಳಿಗೆ 75 ರು. ವಿಧಿಸಲಾಗುತ್ತದೆ. ಪ್ರತಿ ಚೀಲ, ಬಾಕ್ಸ್ ಸರಕಿಗೆ 5 ರು. ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಜಗದೀಶ್ ತಿಳಿಸಿದರು.

ಬಾಕ್ಸ್...

ರೈತರಿಗೆ ಯಾವುದೇ ಶುಲ್ಕ ಇಲ್ಲ

ಮಾರುಕಟ್ಟೆಗೆ ಸರಕು ತರುವ ವ್ಯಾಪಾರಿಗಳು, ಏಜೆಂಟರು, ಮಧ್ಯವರ್ತಿಗಳಿಂದ ಮಾತ್ರ ಶುಲ್ಕ ವಸೂಲಿ ಮಾಡಲಾಗುತ್ತದೆ. ಆದರೆ, ಆರ್‌ಟಿಸಿ ದಾಖಲೆಯನ್ನು ಹಾಜರುಪಡಿಸುವ ರೈತರಿಂದ ಯಾವುದೇ ಶುಲ್ಕ ವಸೂಲಿ ಮಾಡುವುದಿಲ್ಲ. ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಿ, ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ವ್ಯವಸ್ಥಿತ ಟೋಲ್ ಶುಲ್ಕ ಸಂಗ್ರಹ ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದರು.

---ವಾಹನಗಳ ಪ್ರವೇಶ ಶುಲ್ಕ (ಒಂದು ಬಾರಿಯ ಪ್ರವೇಶಕ್ಕೆ)

-ಟ್ರಕ್ / 6 ಚಕ್ರ ಹಾಗೂ ಅದಕ್ಕಿಂತ ದೊಡ್ಡ ವಾಹನ- ₹350

-4 ಚಕ್ರಗಳ ಗೂಡ್ಸ್ ವಾಹನಗಳು - ₹100

-3 ಚಕ್ರಗಳ ಸರಕು ವಾಹನಗಳು- ₹75ಸರಕು ಶುಲ್ಕ

- ಹಣ್ಣು, ಹೂವು, ತರಕಾರಿ, ಸೊಪ್ಪು ಮತ್ತಿತರ ಪ್ರತಿ ಚೀಲಕ್ಕೆ - ₹5

- ಮೊಟ್ಟೆ 1 ಬಾಕ್ಸ್ (10 ಟ್ರೇಗಳವರೆಗೆ) - ₹10

- ಮೀನು ಸೇರಿ ಸಮುದ್ರದ ಆಹಾರ ಉತ್ಪನ್ನ, ಮಾಂಸ 1 ಬಾಕ್ಸ್ ಅಥವಾ 1 ಟ್ರೇ - ₹10

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆಯಿಂದ ವ್ಯಕ್ತಿತ್ವ ವಿಕಸನ ಸಾಧ್ಯ: ಶಾಸಕ ಬೇಳೂರು
ಸದಸ್ಯರು ಸಂಘದ ಮೂಲಕವೇ ವ್ಯಾಪಾರ ನಡೆಸಿ: ರಾಜಶೇಖರ್