ಉದ್ಯಮ ಕ್ಷೇತ್ರದಲ್ಲಿ ಬೇಕಿದೆ ಸಾಹಸ ಪ್ರವೃತ್ತಿ: ಶರಣಬಸವ ಶ್ರೀ

KannadaprabhaNewsNetwork | Published : Jan 20, 2025 1:30 AM

ಸಾರಾಂಶ

ಅತ್ಯಂತ ಕಡಿಮೆ ದರದಲ್ಲಿ ಗುಣಮಟ್ಟದ ವಸ್ತು ನೀಡಲು ದಲಾಲ್ ಸಹೋದರರು ರಬಕವಿ ಮದನಮಟ್ಟಿ ರಸ್ತೆಯ ಮಳಿಗೆಯಲ್ಲಿ ಚಾಲನೆ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನೇರ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹೋಲಸೇಲ್ ದರ ಆಕರಣೆಯಲ್ಲಿ ಮನೆ ನಿರ್ಮಾಣದ ಸಿರ‍್ಯಾಮಿಕ್ ಅಳವಡಿಕೆಗೆ ನೆರವಾಗಲು ದಲಾಲ್‌ ಸಹೋದರರು ಮುಂದಾಗಿರುವುದು ಸ್ತುತ್ಯಾರ್ಹ ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ನುಡಿದರು.

ಭಾನುವಾರ ರಬಕವಿ ನಗರದ ಮದನಮಟ್ಟಿ ರಸ್ತೆಯ ದಲಾಲ ಸಿರ‍್ಯಾಮಿಕ್ ಮಳಿಗೆ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಅತ್ಯಂತ ಕಡಿಮೆ ದರದಲ್ಲಿ ಗುಣಮಟ್ಟದ ವಸ್ತು ನೀಡಲು ದಲಾಲ್ ಸಹೋದರರು ರಬಕವಿ ಮದನಮಟ್ಟಿ ರಸ್ತೆಯ ಮಳಿಗೆಯಲ್ಲಿ ಚಾಲನೆ ನೀಡಿರುವುದು ಗ್ರಾಮೀಣ ಪ್ರದೇಶಗಳತ್ತಲೂ ಗುಣಮಟ್ಟದ ವಸ್ತುಗಳ ಲಭ್ಯತೆಯ ಕಾರಣಕ್ಕೆ ಗ್ರಾಹಕರು ಬರುವಂತಾಗಿ ಸುತ್ತಲಿನ ಪ್ರದೇಶಗಳಲ್ಲಿ ವಾಣಿಜ್ಯಾತ್ಮಕ ಪರಿಸರ ನಿರ್ಮಾಣಗೊಳ್ಳುತ್ತದೆ. ಉದ್ಯಮ ಕ್ಷೇತ್ರದಲ್ಲಿ ಸಾಹಸ ಪ್ರವೃತ್ತಿ ಹೆಚ್ಚಾದಲ್ಲಿ ಗ್ರಾಹಕ ಸ್ನೇಹಿ ವ್ಯವಹಾರ ವ್ಯವಸ್ಥೆ ರೂಪುಗೊಳ್ಳುತ್ತದೆಂದರು.

ಗುಣಮಟ್ಟದ ಟೈಲ್ಸ್ ಮತ್ತು ಸಿರ‍್ಯಾಮಿಕ್‌ಗಳ ಖರೀದಿಗೆ ನಮ್ಮ ಪ್ರದೇಶದ ಜನತೆ ಹುಬ್ಬಳ್ಳಿಗೆ ತೆರಳುವ ಅನಿವಾರ್ಯತೆಯಿತ್ತು. ವೈವಿಧ್ಯಮಯ ಸರಕುಗಳು ಮತ್ತು ರಿಯಾಯತಿ ದರದ ಪರಿಕರಗಳು ದೊರೆಯುಂತಾಗಲು ಉದ್ಯಮಿ ಸಹೋದರರಾದ ಬಸವರಾಜ, ಪ್ರಕಾಶ ಮತ್ತು ಶ್ರೀಶೈಲ ಶ್ರಮಿಸಿ ಭವ್ಯ ಮಳಿಗೆ ಲೋಕಾರ್ಪಣೆಗೊಳಿಸಿದ್ದಾರೆ. ಇವರ ಶ್ರಮಕ್ಕೆ ಜಯ ದೊರೆತು, ಮುಂದಿನ ದಿನಗಳಲ್ಲಿ ಔದ್ಯೋಗಿಕವಾಗಿ ರಬಕವಿ ನಗರ ಪ್ರಗತಿ ಹೊಂದಲೆಂದರು.

ಸಮಾರಂಭದಲ್ಲಿ ಡಾ.ಮಹಾವೀರ ದಾನಿಗೊಂಡ, ಡಾ.ಪುಷ್ಪದಂತ ದಾನಿಗೊಂಡ, ಡಾ.ವಿಜಯ ಹಂಚಿನಾಳ, ಡಾ.ಅನೂಪ ಹಂಚಿನಾಳ, ಸೋಮಶೇಖರ ಕೊಟ್ರಶೆಟ್ಟಿ, ಗಣಪತರಾವ ಹಜಾರೆ, ಡಾ. ವಿನೋದ ಮೇತ್ರಿ, ಡಾ. ಜಿ.ಎಚ್.ಚಿತ್ತರಗಿ, ಅಮಿತ್ ನಾಶಿ, ವಿಜಯ ನಾಶಿ, ಬಾಬಾಗೌಡ ಪಾಟೀಲ, ರಾಮಣ್ಣ ಹುಲಕುಂದ, ಮಹಾದೇವ ಕೋಟ್ಯಾಳ, ಗಜಾನನ ವಜ್ರಮಟ್ಟಿ, ಪ್ರಶಾಂತ ಪಾಲಬಾಂವಿ, ಸಂಜಯ ತೆಗ್ಗಿ, ಬಸವರಾಜ ಕೊಣ್ಣೂರ, ಶಿವಾನಂದ ದಾಶ್ಯಾಳ, ಗಜಾನನ ತೆಗ್ಗಿ, ಪ್ರಭಾಕರ ಡಪಳಾಪುರ ಸೇರಿದಂತೆ ಅನೇಕ ಗಣ್ಯರಿದ್ದರು.

Share this article