15,16ರಂದು ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ, ಸ್ಟಾರ್ಟ್‌ಅಪ್‌ ಬೂಟ್‌ ಕ್ಯಾಂಪ್‌

KannadaprabhaNewsNetwork |  
Published : Dec 10, 2025, 02:00 AM IST
ಕಾರ್ಯಕ್ರಮದ ಕುರಿತು ಮಾಹಿತಿ ನೀಡುತ್ತಿರುವುದು. | Kannada Prabha

ಸಾರಾಂಶ

ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ ಮತ್ತು ಸ್ಟಾರ್ಟ್‌ಅಪ್‌ ಬೂಟ್‌ ಕ್ಯಾಂಪ್‌ ಡಿ.15, 16ರಂದು ನಗರದ ಪಡೀಲ್‌ನಲ್ಲಿರುವ ನಿಟ್ಟೆ ಇನ್ಸ್‌ಟಿಟ್ಯೂಟ್‌ ಆಫ್‌ ಪ್ರೊಫೆಶನಲ್‌ ಎಜ್ಯುಕೇಶನ್‌ (ಎನ್‌ಐಪಿಇ) ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಮಂಗಳೂರು: ನಿಟ್ಟೆಇನ್‌ಸ್ಟಿಟ್ಯೂಟ್‌ ಆಫ್‌ ಪ್ರೊಫೆಶನಲ್‌ ಎಜ್ಯುಕೇಶನ್‌ ಮಂಗಳೂರು, ಎಐಸಿ ನಿಟ್ಟೆ ಇನ್‌ಕ್ಯುಬೇಶನ್‌ ಸೆಂಟರ್‌, ಸುದ್ದಿ ಮಾಹಿತಿ ಟ್ರಸ್ಟ್‌ ಮತ್ತು ರೋಟರಿ ಕ್ಲಬ್‌ ಮಂಗಳೂರು ಸೆಂಟ್ರಲ್‌ ಜಂಟಿ ಸಹಭಾಗಿತ್ವದಲ್ಲಿ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ ಮತ್ತು ಸ್ಟಾರ್ಟ್‌ಅಪ್‌ ಬೂಟ್‌ ಕ್ಯಾಂಪ್‌ ಡಿ.15, 16ರಂದು ನಗರದ ಪಡೀಲ್‌ನಲ್ಲಿರುವ ನಿಟ್ಟೆ ಇನ್ಸ್‌ಟಿಟ್ಯೂಟ್‌ ಆಫ್‌ ಪ್ರೊಫೆಶನಲ್‌ ಎಜ್ಯುಕೇಶನ್‌ (ಎನ್‌ಐಪಿಇ) ಕ್ಯಾಂಪಸ್‌ನಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾರ್ಯಕ್ರಮದ ನಿರ್ದೇಶಕ ಸಿಎ ಎಸ್‌.ಎಸ್‌. ನಾಯಕ್‌, ಡಿ.15ರಂದು ಬೆಳಗ್ಗೆ 10ಕ್ಕೆ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಎಂ.ಎಸ್‌. ಮೂಡಿತ್ತಾಯ ಕಾರ್ಯಾಗಾರ ಉದ್ಘಾಟಿಸುವರು. ಮಂಗಳೂರಿನ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ ಆಫ್‌ ಇಂಡಿಯಾ ನಿರ್ದೇಶಕ ರವೀಂದ್ರ ಆರೂರು, ಇಸಿಆರ್‌ ಗ್ರೂಪ್‌ ಆಫ್‌ ಇನ್ಸ್‌ಟಿಟ್ಯೂಶನ್‌ ಚೇರ್ಮನ್‌ ಮಧು ಟಿ. ಭಾಸ್ಕರನ್‌, ಪುತ್ತೂರು ಸುದ್ದಿ ಗ್ರೂಪ್‌ ಎಂಡಿ ಡಾ.ಯು.ಪಿ. ಶಿವಾನಂದ ಅತಿಥಿಯಾಗಿ ಭಾಗವಹಿಸುವರು ಎಂದು ಹೇಳಿದರು.ಡಿ.16ರಂದು ಮಧ್ಯಾಹ್ನ 3ಕ್ಕೆ ಸಮಾರೋಪ ಸಮಾರಂಭದಲ್ಲಿ ಕೆಸಿಸಿಐ ಅಧ್ಯಕ್ಷ ಪಿ.ಬಿ. ಅಹ್ಮದ್‌ ಮುದಾಸಿರ್‌, ನಿಟ್ಟೆ ವಿವಿ ಉಪಾಧ್ಯಕ್ಷ ಡಾ. ಗೋಪಾಲ್‌ ಮುಗೆರಾಯ, ಐಒಬಿ ಹಿರಿಯ ಪ್ರಾದೇಶಿಕ ಮ್ಯಾನೇಜರ್‌ ನಿರಂಜನ್‌ ಕುಮಾರ್‌, ಸ್ವಸ್ತಿಕ ನ್ಯಾಶನಲ್‌ ಬುಸಿನೆಸ್‌ ಸ್ಕೂಲ್‌ ಚೇರ್ಮನ್‌ ರಾಘವೇಂದ್ರ ಹೊಳ್ಳ ಅತಿಥಿಯಾಗಿ ಭಾಗವಹಿಸುವರು ಎಂದರು.

ಹೊಸ ಉದ್ಯಮಿಗಳಿಗೆ ಮಾರ್ಗಸೂಚಿ ರಚನೆ ಮತ್ತು ಅಭಿವೃದ್ಧಿ ಬಗ್ಗೆ ಎಸ್‌.ಎಸ್‌. ನಾಯಕ್‌, ಸ್ಟಾರ್ಟ್‌ ಅಪ್‌ಗಳಿಗೆ ಇನ್‌ಕ್ಯುಬೇಶನ್‌ ಸೌಲಭ್ಯ ಬಗ್ಗೆ ಡಾ.ಎ.ಪಿ. ಆಚಾರ್‌, ಸ್ಟಾರ್ಟ್‌ ಅಪ್‌ಗಳಿಗೆ ಹಣಕಾಸು ಆಯ್ಕೆಗಳು ಕುರಿತು ಸಿಎ ಪ್ರತೀಕ್ಷಾ ಪೈ, ಎಂಎಸ್‌ಎಂಇಗಳಿಗೆ ಹಣಕಾಸು ಆಯ್ಕೆಗಳು, ಯೋಜನೆಗಳು ಮತ್ತು ಸಬ್ಸಿಡಿಗಳ ಕುರಿತು ಸಿಎ ಸಂಕೇತ್‌ ಎಸ್‌. ನಾಯಕ್‌, ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ದಿಮೆಗಳಿಗೆ ಬೆಂಬಲ ಕುರಿತು ಸತೀಶ್‌ ಮಾಬೆನ್‌, ಮೀನು ಉತ್ಪನ್ನಗಳಲ್ಲಿ ಮೌಲ್ಯವರ್ಧನೆಗಾಗಿ ಘಟಕಗಳ ಸ್ಥಾಪನೆ ಬಗ್ಗೆ ಡಾ.ಬಿ. ಮಂಜ ನಾೖಕ್‌, ಬ್ರ್ಯಾಂಡಿಂಗ್‌ ಮತ್ತು ಮಾರ್ಕೆಟಿಂಗ್‌ ಬಗ್ಗೆ ಆ್ಯಂಡ್ರಿಯಾ ಗೋನ್ಸಾಲ್ವಿಸ್‌, ಸಿಬಿಲ್‌ ಸ್ಕೋರ್‌ ಬಗ್ಗೆ ವಸಂತ ಶೆಟ್ಟಿ ಉಪನ್ಯಾಸ ನೀಡಲಿದ್ದಾರೆ ಎಂದು ವಿವರಿಸಿದರು.

ಉದ್ಯಮಿಗಳು, ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಆಸಕ್ತರು ನೋಂದಣಿ ಮಾಡಿಕೊಳ್ಳಬಹುದು ಎಂದರು.ಎನ್‌ಐಪಿಇ ಪ್ರಾಂಶುಪಾಲ ಡಾ. ಜ್ಞಾನೇಶ್ವರ ಪೈ ಮಾರೂರು, ಪ್ರಾಧ್ಯಾಪಕರಾದ ಡಾ. ಪ್ರದೀಪ ಕೆ.ಎಸ್‌., ರಶ್ಮಿ ಹೆಗ್ಡೆ, ರೋಟರಿ ಕ್ಲಬ್‌ ಮಂಗಳೂರು ಸೆಂಟ್ರಲ್‌ ಅಧ್ಯಕ್ಷ ಭಾಸ್ಕರ್‌ ರೈ ಕಟ್ಟ, ಕಾರ್ಯದರ್ಶಿ ವಿಕಾಸ್‌ ಮಾಬೆನ್‌, ಪಿಎಂಎಫ್‌ಎಂಇ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸತೀಶ್‌ ಮಾಬೆನ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಇಲಾಖೆಯ ಖಾಲಿ ಹುದ್ದೆ ತುಂಬಲು ಹಣಮಂತ ನಿರಾಣಿ ಆಗ್ರಹ
ಅಂಬಿಕಾ ಸಂಸ್ಥೆ ವಿದ್ಯಾರ್ಥಿಗಳಿಂದ ಶೃಂಗೇರಿ ಭೇಟಿ: ಶಾರದಾಮಾತೆ, ಗುರುದರ್ಶನ