ಪರಿಸರದಿಂದ ಬದುಕಿನ ಭದ್ರತೆ ಖಚಿತ

KannadaprabhaNewsNetwork |  
Published : Jun 10, 2026, 02:15 AM IST
9ಕೆಪಿಎಲ್3:ಕೊಪ್ಪಳ ನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿಸಹಕಾರ ಭಾರತಿ  ತಾಲೂಕು ಘಟಕದ ವತಿಯಿಂದ  ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ಪರಿಸರ ಸಂರಕ್ಷಣೆಯಿಂದ ಮುಂದಿನ ದಿನಮಾನಗಳಲ್ಲಿ ಉತ್ತಮ ವಾತಾವರಣ ಸಿಗುತ್ತದೆ. ಹಾಗೇ ಬದುಕಿನಲ್ಲಿ ವಿಮಾಗಳಿಂದ ಜೀವನಕ್ಕೆ ಭದ್ರತೆ ಸಿಗುತ್ತದೆ

ಕೊಪ್ಪಳ: ವಿಮೆಯಿಂದ ಆರ್ಥಿಕ ಭದ್ರತೆ ಲಭಿಸಿದರೆ, ಪರಿಸರದಿಂದ ಬದುಕಿನ ಭದ್ರತೆ ಸಿಗುತ್ತದೆ ಎಂದು ಸಹಕಾರ ಭಾರತಿ ಜಿಲ್ಲಾಧ್ಯಕ್ಷ ರಮೇಶ ಮಲ್ಲಪ್ಪ ಕವಲೂರು ಹೇಳಿದರು.

ನಗರದ ಗಂಗಾ ಯಮುನಾ ಸೌಹಾರ್ದ ಸಹಕಾರಿಯ ಸಭಾಂಗಣದಲ್ಲಿ ಸಹಕಾರ ಭಾರತಿ ತಾಲೂಕು ಘಟಕದಿಂದ ತಾಲೂಕಿನ ಎಲ್ಲ ಸೌಹಾರ್ದ ಸಹಕಾರಿ ಮತ್ತು ಸಹಕಾರಿ ಸಂಘಗಳ ಪ್ರತಿನಿಧಿಗಳಿಗಾಗಿ ಜರುಗಿದ ಒಂದು ದಿನದ ವಿಮಾ ಕಾರ್ಯಾಗಾರ ಹಾಗೂ ನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆಯಿಂದ ಮುಂದಿನ ದಿನಮಾನಗಳಲ್ಲಿ ಉತ್ತಮ ವಾತಾವರಣ ಸಿಗುತ್ತದೆ. ಹಾಗೇ ಬದುಕಿನಲ್ಲಿ ವಿಮಾಗಳಿಂದ ಜೀವನಕ್ಕೆ ಭದ್ರತೆ ಸಿಗುತ್ತದೆ ಎಂದರು.

ಶರಣಪ್ಪ ಹ್ಯಾಟಿ ಕಾರ್ಯಕ್ರಮ ಸಹಕಾರ ಗೀತೆಯೊಂದಿಗೆ ಆರಂಭಿಸಿದರು. ಭಾರತ ಮಾತೆ ಹಾಗೂ ಸಹಕಾರ ಚಳವಳಿಯ ಪ್ರೇರಣಾ ಪುರುಷ ಲಕ್ಷ್ಮಣರಾವ್ ಇನಾಮದಾರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಹಕಾರ ಭಾರತಿ ತಾಲೂಕಾಧ್ಯಕ್ಷ ಶರಣಪ್ಪ ವಡೆಗೇರಿ ಮಾತನಾಡಿದರು. ಎಸ್.ಎ.ಎಸ್ ಇನ್ಸೂರೇನ್ಸ್ ಟೆಕ್ ಪ್ರೈವೇಟ್ ಲಿ.ಸಂಸ್ಥೆಯ ಅಧಿಕಾರಿ ಗಾಯತ್ರಿ ಕುಲಕರ್ಣಿ ಹಾಗೂ ಅರುಣಾಚಲ ಶಾಸ್ತ್ರಿ ವಿಮೆಗೆ ಸಂಬಂಧಿಸಿದ ವಿವಿಧ ಯೋಜನೆ, ಸುರಕ್ಷತಾಕ್ರಮಗಳು ಹಾಗೂ ಸಹಕಾರಿ ಸಂಸ್ಥೆಗಳಿಗೆ ಲಭ್ಯವಿರುವ ವಿಮಾ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಆನಂದ ತೊದಲ, ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪದ್ಮಜಾ, ಗಂಗಾ ಯಮುನಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಗವಿಸಿದ್ಧಯ್ಯ ಲಿಂಗಬಸಯ್ಯನಮಠ, ಮಿಥುನ ಮುದುಗಲ್, ಶಶಿಕುಮಾರ ಗಡ್ಡಿ, ಚಂದ್ರಶೇಖರ ಜವಳಿ, ನಾಗರಾಜ ಜವಳಿ, ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಶಿಕ್ಷಕ ಎಸ್.ವಿ.ಹಿರೇಮಠ ಹಾಗೂ ಸಹಕಾರ ಭಾರತಿ ತಾಲೂಕು ಘಟಕದ ಎಲ್ಲ ಪದಾಧಿಕಾರಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೂ.15ರೊಳಗೆ ಸಣ್ಣ ನೀರಾವರಿ ಗಣತಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ
ಅಧಿಕಾರಿಗಳ ವಿರುದ್ಧ ದೂರುಗಳ ಸುರಿಮಳೆ