ಸಿದ್ದಾಪುರ: ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯ. ಪರಿಸರಕ್ಕೆ ಹಾನಿಯನ್ನು ಉಂಟು ಮಾಡಬೇಡಿ. ನಿರುಪಯುಕ್ತ ವಸ್ತುಗಳನ್ನು ಯಾರಿಗೂ ತೊಂದರೆಯಾಗದ ಸ್ಥಳದಲ್ಲಿ ಚೆಲ್ಲಿ, ಮರುಬಳಕೆಗೆ ಬಂದರೆ ಉಪಯೋಗಿಸಿ, ಪ್ಲಾಸ್ಟಿಕ್ ಮುಕ್ತ ವಾತಾವರಣವನ್ನು ಕಾಯ್ದುಕೊಳ್ಳಿ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಮನೋಜ ಮಾಣಿಕ ಹುಬ್ಬಳ್ಳಿ ತಿಳಿಸಿದರು.ಲಯನ್ಸ್ ಜಿಲ್ಲೆ ೩೧೭ ಬಿ ವತಿಯಿಂದ ಸಿದ್ದಾಪುರ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಬಾಲಭವನದಲ್ಲಿ ಹಸಿರು ಬೆಳೆಯಿರಿ, ಪ್ಲಾಸ್ಟಿಕ್ ನಿರ್ಮೂಲನೆಗೊಳಿಸಿ. ಇ- ತ್ಯಾಜ್ಯ ಸಂಗ್ರಹಿಸಿ ಎಂಬ ಪರಿಸರ ಜ್ಯೋತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಡಾ. ಎಂ.ಪಿ. ಶೆಟ್ಟಿ ಸ್ಮರಣೀಯ ಭವನಕ್ಕೆ ಅಡಿಗಲ್ಲನ್ನು ಇಟ್ಟರು. ಈ ಸಂದರ್ಭದಲ್ಲಿ ನೂತನ ಸದಸ್ಯರನ್ನಾಗಿ ಸೇರ್ಪಡೆಗೊಂಡ ಕೆ.ಆರ್. ವಿನಾಯಕ ಕೋಲಸಿರ್ಸಿ, ಎಂ.ವಿ. ನಾಯ್ಕ, ಗಣೇಶ ಪೈ, ನವೀನ ಪೈ ಅವರಿಗೆ ಲಯನ್ಸ್ ಸದಸ್ಯತ್ವ ವಿಧಿ ಬೋಧಿಸಿದರು.ಮಾಜಿ ಮಲ್ಟಿಪಲ್ ಜಿಲ್ಲಾ ಚೇರ‍್ಮನ್ ಅಗ್ನೆಲೊ ಅಲ್ಕೋಸಿಸ್ ಬಟ್ಟೆಯ ಕೈಚೀಲವನ್ನು ಬಿಡುಗಡೆಗೊಳಿಸಿ ಪ್ಲಾಸ್ಟಿಕ್ ಮುಕ್ತಗೊಳಿಸಲು ಕರೆ ನೀಡಿದರು.
ಇಂದು ಉಸ್ತುವಾರಿ ಸಚಿವರಿಂದ ಧ್ವಜಾರೋಹಣ
ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ಗುರುವಾರ ರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಸಚಿವರು ಗುರುವಾರ ಬೆಳಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣ ಮಾಡಲಿದ್ದಾರೆ. 8.10ಕ್ಕೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಹಾಗೂ ಮೆರವಣಿಗೆಗೆ ಚಾಲನೆ ನೀಡುವರು. 9 ಗಂಟೆಗೆ ಪೊಲೀಸ್ ಪರೇಡ್ ಮೈದಾನದಲ್ಲಿ, ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಲಿದ್ದಾರೆ.