ಕಾಂಚಿನಗರ ಸರ್ಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಪ್ರಕೃತಿಯಲ್ಲಿ ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ. ಇತ್ತೀಚಿನ ದಿನಗಳಲ್ಲಿ ಪರಿಸರ ನಾಶದ ಪರಿಣಾಮ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಪರಿಸರ ಮಾಲಿನ್ಯದಿಂದ ಮುಕ್ತಗೊಳಿಸಬೇಕು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಡಾ.ಬಿ.ಆರ್.ಗಂಗಾಧರಪ್ಪ ಹೇಳಿದರು.
ಪಟ್ಟಣದ ಕಾಂಚಿನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ಪರಿಸರ ಕುರಿತ ಮಕ್ಕಳಿಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಣ್ಣು, ಮರಳು ಗಣಿಗಾರಿಕೆ,ಅಭಿವೃದ್ಧಿ ಇತ್ಯಾದಿ ಚಟುವಟಿಕೆಗಳಿಂದ ಪ್ರಕೃತಿ ಮೇಲೆ ಪರಿಣಾಮ ಬೀರಿ ನೆರೆ, ಪ್ರವಾಹ, ಭೂಕುಸಿತ, ಗುಡ್ಡ ಕುಸಿತದಂತಹ ಘಟನೆಗಳನ್ನು ಸಂಭವಿಸುತ್ತಿವೆ.ಇತ್ತೀಚೆಗೆ ಕೊಡಗು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಂಭವಿಸಿದ ಭೂಕುಸಿತ, ನೆರೆ ಪ್ರಕೃತಿ ವಿಕೋಪಗಳು ಎಲ್ಲರ ಕಣ್ಮುಂದೆ ಇದೆ. ಅಭಿವೃದ್ಧಿಯೂ ಬೇಕು, ಪರಿಸರವೂ ಉಳಿಯಬೇಕು.ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶ ಸರಿಯಲ್ಲ. ಸ್ವಾಭಾವಿಕ ಅರಣ್ಯ ರಕ್ಷಿಸಬೇಕು. ಪ್ರಕೃತಿ ನಮಗೆ ಏನೆಲ್ಲ ನೀಡಿದೆ. ಪ್ರಕೃತಿ ಮುನಿದರೆ ಮನುಕುಲದ ನಾಶ ಖಂಡಿತಾ ಸಾದ್ಯ.
ಶಾಲಾ ಮುಖ್ಯಶಿಕ್ಷಕ ರಾಜೀವ ವೈ.ಆರ್,ಶಿಕ್ಷಕ ಸಿ ವೈ ಯೋಗಮೂರ್ತಿ,ಹೊನ್ನೆಗೌಡ ಮತ್ತಿತರರು ಉಪಸ್ಥಿತರಿದ್ದರು.
ಶೃಂಗೇರಿ ಪಟ್ಟಣದ ಕಾಂಚೀನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಡಾ.ಬಿ.ಆರ್.ಗಂಗಾಧರಪ್ಪ ಸಸಿ ನೆಡುವ ಮೂಲಕ ಚಾಲನೆ ನೀಡಿದರು.