ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ಕೆ.ಜೆ.ಕಾಂತರಾಜ್

KannadaprabhaNewsNetwork |  
Published : Jun 07, 2025, 01:06 AM IST
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಃ ಉಪ ವಿಭಾಗಾಧಿಕಾರಿ .ಕೆ.ಜೆ.ಕಾಂತರಾಜ್  | Kannada Prabha

ಸಾರಾಂಶ

ತರೀಕೆರೆ, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಹೇಳಿದ್ದಾರೆ.

ಗಿಡ ನೆಡುವ ಕಾರ್ಯಕ್ರಮದ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಹೇಳಿದ್ದಾರೆ.ತಾಲೂಕು ವಕೀಲರ ಬಳಗ, ಧರ್ಮಸ್ಥಳ ಗ್ರಾಮೀಣಾಬಿವೃದ್ಧಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಸಮೀಪದ ಅಮೃತಾಪುರ ಗ್ರಾಮದ ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.

ಪರಿಸರವನ್ನು ಸ್ವಚ್ಚವಾಗಿಡಬೇಕು, ಗಿಡಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆ ಉತ್ತಮ ವಾತಾವರಣದಿಂದ ಉತ್ತಮ ಗಾಳಿ ಸೇವನೆ ಮಾಡಬಹುದು. ಮುಂದಿನ ನಮ್ಮ ಪೀಳಿಗೆಗೆ ಸಹಾಯಕವಾಗುವಂತೆ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ತಿಳಿಸಿದರು.

ಹಿರಿಯ ವಕೀಲ ಕೆ.ಎಲ್.ಲಿಂಗರಾಜ್ ಮಾತನಾಡಿ ಇಂದು ನೀರು ಭೂಮಿ, ಗಾಳಿ ಎಲ್ಲ ಕಲುಷಿತವಾಗಿದೆ, ಇದನ್ನು ತಪ್ಪಿಸ ಬೇಕು. ಎಲ್ಲರೂ ಒಂದೊಂದು ಗಿಡ ನೆಟ್ಟು ಪೋಷಿಸಬೇಕು. ನದಿಯ ನೀರನ್ನು ಕಲುಷಿತಗೊಳಿಸಬಾರದು ಎಂದು ತಿಳಿಸಿದರು.

ವಕೀಲರ ಬಳಗದ ಅಧ್ಯಕ್ಷ, ಕನ್ನಡಸಿರಿ ಪ್ರಶಸ್ತಿ ಪುರಸ್ಕೃತ ಎಸ್.ಸುರೇಶ್ ಚಂದ್ರ ಮಾತನಾಡಿ ಧರ್ಮಸ್ಥಳ ಗ್ರಾಮಾಬಿವೃದ್ಧಿ ಸಂಸ್ಥೆ ಉತ್ತಮ ಕಾರ್ಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಬಳಗ ಅವರನ್ನು ಸಂಪರ್ಕಿಸಿ ಈ ಕಾರ್ಯಕ್ರಮ ಮಾಡುತ್ತಿರುವುದು, ಅದರಲ್ಲೂ ಬಿಲ್ಬತ್ರೆ ಗಿಡವನ್ನು ವಿತರಣೆ ಮಾಡುತ್ತಿರುವುದು ವಿನೂತನ ಕಾರ್ಯಕ್ರಮ ಶ್ಲಾಘನೀಯ. ಎಲ್ಲ ಮಹಿಳೆಯರು ಗಿಡಗಳನ್ನು ನೆಟ್ಟು ಸಾಲುಮರದ ತಿಮ್ಮಕ್ಕನಂತಾಗಿ ಎಂದು ಹೇಳಿದರು.ವಕೀಲರ ಬಳಗದ ಕಾರ್ಯಾಧ್ಯಕ್ಷ ಎಸ್.ರಜನೀಶ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಯೋಜನಾಧಿಕಾರಿ ಕುಸುಮಾದರ್, ಕಾನೂನು ಸಲಹೆಗಾರ ಎಂ.ಕೆ.ತೇಜಮೂರ್ತಿ, ತಿಮ್ಮಯ್ಯ ಇದ್ದರು.

5ಕೆಟಿಆರ್.ಕೆ.2ಃ

ತರೀಕೆರೆ ಸಮೀಪದ ಅಮೃತಾಪುರದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯನ್ನು ಉಪ ವಿಭಾಗಾಧಿಕಾರಿ ಡಾ.ಕೆ.ಜಿ. ಕಾಂತರಾಜ್ ಉದ್ಘಾಟಿಸಿದರು. ವಕೀಲರ ಬಳಗದ ಅಧ್ಯಕ್ಷ ಎಸ್.ಸುರೇಶ್ ಚಂದ್ರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಧಿಕಾರಿ ಕುಸುಮಾಧರ್ ಮತ್ತಿತರರು ಭಾಗವಹಿಸಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ