ವಿಶೇಷ ವರದಿ
ವನ್ಯಜೀವಿ ಸಪ್ತಾಹದ ಅಂಗವಾಗಿ ಪ್ರತೀವರ್ಷ ವಿರಾಜಪೇಟೆಯ ಪಕ್ಷಿ ತಜ್ಞ ಡಾ.ಎಸ್. ವಿ. ನರಸಿಂಹನ್ ಪಕ್ಷಿಗಳ ಚಿತ್ರಗಳನ್ನು ದೇಶ, ವಿದೇಶಗಳಿಗೆ ರವಾನಿಸುತ್ತಾರೆ. ಡಾ. ನರಸಿಂಹನ್ ಅವರು ಇದುವರೆಗೆ ರವಾನಿಸಿರುವ ವೈವಿಧ್ಯಮಯ ಚಿತ್ರಗಳ ಸಂಖ್ಯೆ 16640!. ಈ ವರ್ಷ ಕಳುಹಿಸಿರುವ ಪಕ್ಷಿ ಸಂದೇಶದ ಚಿತ್ರಗಳ ಸಂಖ್ಯೆ 1,208.
ಅಕ್ಟೋಬರ್ ಮೊದಲ ವಾರದಲ್ಲಿ ಜರುಗುವ ವನ್ಯಜೀವಿ ಸಪ್ತಾಹ ಅಂಗವಾಗಿ ವಿರಾಜಪೇಟೆಯ ಪಕ್ಷಿ ತಜ್ಞ ಡಾ.ಎಸ್. ವಿ. ನರಸಿಂಹನ್ ಅವರು ಪಕ್ಷಿಗಳ ಚಿತ್ರಗಳನ್ನು ದೇಶ, ವಿದೇಶಗಳಿಗೆ ಕಳುಹಿಸುತ್ತಾರೆ. ಇವರ ಈ ಪರಿಸರ ಕಾರ್ಯಕ್ರಮ ಕಳೆದ 41 ವರ್ಷಗಳಿಂದ ನಡೆಯುತ್ತಿದೆ.ಡಾ.ನರಸಿಂಹನ್ ಪರಿಸರ ಕಾರ್ಯಕ್ರಮಕ್ಕೆ ಲಿಮ್ಕಾ ಬುಕ್ ಆಫ್ ವಲ್ಡ್ ರೆಕಾರ್ಡ್, ಅತ್ಯಧಿಕ ಸಂಖ್ಯೆಯಲ್ಲಿ ವನ್ಯಜೀವಿಗಳ ಚಿತ್ರಗಳ ಕಾಡ್೯ ರಚಿಸುವ ಕಲಾವಿದ ಎಂಬ ಪ್ರತಿಷ್ಠಿತ ದಾಖಲೆ ಪತ್ರ ನೀಡಿದೆ.
ಏಷ್ಯಾ ಖಂಡದಲ್ಲಿ ಬಾಲದ ದೇವನಕ್ಕಿ ಕಾಣಸಿಗುತ್ತದೆ. ಸರೋವರಗಳಲ್ಲಿ ವಾಸ ಮಾಡುತ್ತದೆ. ನೋಡಲು ತುಂಬಾ ಆಕರ್ಷಕವಾಗಿದ್ದು ಸಲಭದಲ್ಲಿ ಗುರುತಿಸಬಹುದು. ಈ ವರ್ಷ ಸಂದೇಶದ ಪಕ್ಷಿಯಾಗಿ ಬಾಲದ ದೇವನಕ್ಕಿ ಆಯ್ಕೆಮಾಡಿದ್ದಾರೆ.
ಪರಿಸರ ಕುರಿತು ತಿಳುವಳಿಕೆ ಮೂಡಿದಾಗ ಪಯತ್ನಕ್ಕೆ ತೃಪ್ತಿ ಲಭಿಸುತ್ತದೆ. ಈ ಹಿನ್ನೆಲೆ ಪ್ರತಿ ವರ್ಷವೂ ಸಂದೇಶದ ಕಾರ್ಡ್‌ಗಳನ್ನು ರವಾನಿಸುತ್ತಿದ್ದೇನೆ ಎಂದು ಪಕ್ಷಿ ತಜ್ಞ ಡಾ.ಎಸ್. ವಿ. ನರಸಿಂಹನ್ ತಿಳಿಸಿದರು.