ಕನ್ನಡಪ್ರಭ ವಾರ್ತೆ ಭಾಲ್ಕಿ
ಭಾಲ್ಕಿಯಲ್ಲಿಂದು ವೀರಶೈವ, ಲಿಂಗಾಯತ ಮುಖಂಡರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ನಿಜಲಿಂಗಪ್ಪವರು ಕಾಂಗ್ರೆಸ್‌ನಿಂದಲೇ ರಾಜ್ಯದ ಪ್ರಥಮ ಮುಖ್ಯಮಂತ್ರಿಯಾದರು. ವೀರೇಂದ್ರ ಪಾಟೀಲರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಬಿ.ಡಿ. ಜತ್ತಿ ಅವರು ಉಪರಾಷ್ಟ್ರಪತಿ ಆಗಿದ್ದರು. ಆದಾಗೂ ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸರ್ವರಿಗೂ ಲೇಸನ್ನು ಬಯಸುವುದು ನಮ್ಮ ಸಮಾಜದ ಮೂಲ ತತ್ವ, ವರ್ಗ ರಹಿತ, ಶ್ರೇಣಿ ರಹಿತ, ಅಸಮಾನತೆಯಿಲ್ಲದ ಸಮ ಸಮಾಜದ ನಿರ್ಮಾಣ ಬಸವಾದಿ ಪ್ರಮಥರ ಕನಸಾಗಿತ್ತು. ಕಾಂಗ್ರೆಸ್ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯದೊಂದಿಗೆ ಹಾಗೂ 5 ಗ್ಯಾರಂಟಿಗಳ ಮೂಲಕ ಇದನ್ನು ಸಾಕಾರಗೊಳಿಸುತ್ತಿದೆ ಎಂದರು.ಬೀದರ್, ಭಾಲ್ಕಿಯ ಸುಪುತ್ರನಿಗೆ ದೆಹಲಿಗೆ ಹೋಗುವ ಅವಕಾಶ ನೀಡಿ:
ವಿಧಾನಸಭಾ ಚುನಾವಣೆಯಲ್ಲಿ ನೀವೆಲ್ಲರೂ ನನಗೆ ಬೆಂಬಲ ನೀಡಿದ್ದೀರಿ. ಲೋಕಸಭಾ ಚುನಾವಣೆಯಲ್ಲೂ ಸಾಗರ್ ಖಂಡ್ರೆಗೆ ಆಶೀರ್ವಾದ ಮಾಡಿ. ಸಾಗರ್ ಗೆದ್ದು ಸಂಸದರಾದರೆ ವಾರದ 7 ದಿನ, ದಿನದ 24 ಗಂಟೆ ಜನತೆಗೆ ಸೇವೆಗೆ ಬದ್ಧರಾಗಿರುತ್ತಾರೆ. ಹಾಲಿ ಸಂಸತ್ ಸದಸ್ಯರಂತೆ ಕಾಣೆಯಾಗುವುದಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಭಾಗಿಯಾಗಿದ್ದ ಸಮಾಜದವರು ಸಾಗರ್ ಖಂಡ್ರೆಗೆ ಜೈಕಾರ ಮಾಡುವ ಮೂಲಕ ತಮ್ಮ ಬೆಂಬಲ ಸೂಚಿಸಿದರು.