- ಹಿರೇಮಠದ ಶಿವಾನುಭವ ಗೋಷ್ಠಿಯಲ್ಲಿ ನಿವೃತ್ತ ಪಿಡಿಒ ಗೌ.ಹಾಲೇಶ್ ಅಭಿಮತ
ಕನ್ನಡಪ್ರಭ ವಾರ್ತೆ ಚನ್ನಗಿರಿ
12ನೇ ಶತಮಾನದ ಕಾಲದಲ್ಲಿ ಅವ್ಯವಸ್ಥಿತ ಸಮಾಜವಿದ್ದರೂ ಸುವ್ಯವಸ್ಥಿತ ಜೀವನ ಇತ್ತು. ಪ್ರಸ್ತುತ ದಿನಗಳಲ್ಲಿ ಇದು ತಿರುಗ ಮುರುಗಾವಾಗಿದೆ. ಸಮಾನತೆ ಎನ್ನುವುದೇ ಕಾಣದಾಗಿದೆ ಎಂದು ನಿವೃತ್ತ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಗೌ.ಹಾಲೇಶ್ ಹೇಳಿದರು.ಸೋಮವಾರ ಸಂಜೆ ಪಟ್ಟಣದ ಕಲ್ಲುಸಾಗರ ಬೀದಿಯ ಶ್ರೀ ಬಸವೇಶ್ವರ ದೇವಾಲಯದ ಹಿಂಭಾಗದಲ್ಲಿರುವ ಹಿರೇಮಠದಲ್ಲಿ 177ನೇ ಶಿವಾನುಭವ ಗೋಷ್ಠಿ ಸಮಾರಂಭದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ಮಂಡಿಸಿದ ಅವರು, ಜಗಜ್ಯೋತಿ ಬಸವಣ್ಣನವರ ಆಚಾರ-ವಿಚಾರಗಳಂತೆ ನಾವೆಲ್ಲರೂ ನಡೆದುಕೊಳ್ಳಬೇಕಾಗಿದೆ ಎಂದರು.
ಶರಣ ಸಾಹಿತ್ಯ ಪರಿಷತ್ ಗೌರವ ಅಧ್ಯಕ್ಷ ಗುಳ್ಳೆಹಳ್ಳಿ ಎಚ್.ಎಸ್.ಮಲ್ಲಿಕಾರ್ಜುನಪ್ಪ ಮಾತನಾಡಿ, 12ನೇ ಶತಮಾನದಲ್ಲಿ ಪ್ರತಿಯೊಬ್ಬರು ಕಾಯಕ ಮಾಡಬೇಕು, ದುಡಿದು ತಿನ್ನಬೇಕು ಎಂಬ ಸಿದ್ಧಾಂತವನ್ನು ಶರಣರು ಪಾಲನೆ ಮಾಡಿಕೊಂಡು ಬಂದವರಾಗಿದ್ದರು. ಬಸವಣ್ಣನವರ ಆಚಾರ-ವಿಚಾರಗಳು ಮತ್ತು ಬಸವಾದಿ ಶರಣರು ಬರೆದಂತಹ ವಚನಗಳ ಸಾರಗಳನ್ನು ವಿವರವಾಗಿ ತಿಳಿಸಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ಮಲ್ಲೇಶಪ್ಪ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ತಾಲೂಕು ವಿಶ್ವಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸಿ.ಆರ್. ನಾಗೇಂದ್ರಪ್ಪ, ಪತ್ರ ಬರಹಗಾರ ಯು.ಬಸವರಾಜಪ್ಪ, ಜ್ಯೋತಿ, ಕರಿಸಿದ್ದಪ್ಪ ಮಾಸ್ತರ್, ದೀಪಾ, ಎನ್.ಎಸ್.ರಾಜಪ್ಪ, ಟಿ.ವಿ.ಶಿವಲಿಂಗಪ್ಪ ಉಪಸ್ಥಿತರಿದ್ದರು.
-27ಕೆಸಿಎನ್‌ಜಿ2: ಸಮಾರಂಭವನ್ನು ಗೌ.ಹಾಲೇಶ್, ಹಿರೇಮಠದ ಶ್ರೀ ಉದ್ಘಾಟಿಸಿದರು.