)
-ಹರಿಹರದಲ್ಲಿ ಜಿಲ್ಲಾ ಸಚಿವ ಮಾತು, ಶಾಸಕರಿಂದಲೂ ಅಷ್ಟೇ ತೀಕ್ಷ್ಣ ತಿರುಗೇಟು
ಕನ್ನಡಪ್ರಭ ವಾರ್ತೆ ಹರಿಹರ, ದಾವಣಗೆರೆ
ಭದ್ರಾ ನೀರಿನ ವಿಚಾರಕ್ಕೆ ರೈತರು ಕೇಳಿದ ಹಿನ್ನೆಲೆಯಲ್ಲಿ ಸಿಡಿಮಿಡಿಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಎಎಸ್ಸೆಸ್ ಮಲ್ಲಿಕಾರ್ಜುನ ಆಡಿದ ಪದಗಳು ಈಗ ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಆಕ್ರೋಶ ಹೊರಹಾಕುವ ಮೂಲಕ ಇಬ್ಬರ ಮಧ್ಯೆ ಬೂದಿ ಮುಂಚಿದ ಕೆಂಡದಂತಿದ್ದ ಪರಿಸ್ಥಿತಿ ಮಂಗಳವಾರ ಸ್ಪೋಟಗೊಂಡಿದೆ.ಹರಿಹರದಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಲೋಕಾರ್ಪಣೆ ಸಮಾರಂಭಕ್ಕೆ ತೆರಳಿದ್ದ ಸಚಿವ ಎಸ್ಸೆಸ್ಸ್ ಮಲ್ಲಿಕಾರ್ಜುನ ಅವರಿಗೆ ಹರಿಹರದ ಕೆಲ ರೈತರು ನೀರು ಬಿಡುವಂತೆ ಮನವಿ ಸಲ್ಲಿಸಲು ಆಗಮಿಸಿ, ನೀರು ಬಿಡುವಂತೆ ಕೇಳಿದ್ದಾರೆ. ತಮ್ಮ ಕ್ಷೇತ್ರದ ಶಾಸಕ ಬಿ.ಪಿ.ಹರೀಶರನ್ನು ಕೇಳಿದರೆ, ಜಿಲ್ಲಾ ಸಚಿವರು ಬಿಡಬೇಕು. ಹರಿಹರ ತಾಲೂಕಿಗೆ ನೀರಿಲ್ಲವೆಂದು, ಹರೀಶಣ್ಣ ಕೇಳಿದರೆ ನಿಮ್ಮ ಸಾಹುಕಾರ್, ಮಿನಿಸ್ಟರ್‌ಗೆ ಕಡೆಗೆ ಎತ್ತಿಸಪ್ಪಾ ನೀರು ಅಂತಾರೆ. ನಾಲೆಗೆ ನೀರು ಕೊಟ್ಟರೆ, ಬೆಳಕೇರಿ ಕೆರೆಗೆ ನೀರು ಕೊಡುತ್ತೇವೆಂದು ಹರೀಶಣ್ಣ ಹೇಳಿದ್ದಾರೆಂದು ಸಚಿವರ ಗಮನಕ್ಕೆ ತಂದಿದ್ದಾರೆ.
ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಆಗಮಿಸುವ ಮುಂಚೆಯೇ ಶಾಸಕ ಬಿ.ಪಿ.ಹರೀಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅನ್ಯ ಸಮಾರಂಭಕ್ಕೆಂದು ತೆರಳಿದ್ದರು.
ನಂತರ ಹರಿಹರದ ಪಶು ವೈದ್ಯಕೀಯ ಆಸ್ಪತ್ರೆ ಕಾರ್ಯಕ್ರಮಕ್ಕೆ ಬಂದ ಸಚಿವ ಎಸ್ಸೆಸ್ಸ್ ಮಲ್ಲಿಕಾರ್ಜುನರಿಗೆ ನೀರಿನ ವಿಚಾರವಾಗಿ ರೈತರು ಮನವಿ ಮಾಡಿ, ಶಾಸಕ ಹರೀಶಣ್ಣಾ ಅನ್ನುತ್ತಿದ್ದಂತೆಯೇ ಕೆರಳಿದ ಸಚಿವರು, ಯಾವ ಹರೀಶಣ್ಣಾ.. ಬಡೀರಿ. ನಿನ್ನ ಅಣ್ಣನಗೆ ಅಣ್ಣಾ ಅಂತೀಯಾ? ಆ..... ನಡಿ ಅಂತಾ ಸಚಿವರು ವೇದಿಕೆಯತ್ತ ಸಾಗಿದರು. ಇಡೀ ಘಟನೆ ವ್ಯಕ್ತಿಯೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿ, ವೈರಲ್ ಆಗಿ, ಬಿಜೆಪಿ ಪಾಳೆಯದಲ್ಲಿ ಕಿಚ್ಚು ಹೊತ್ತಿಸಿದೆ.
------------------------------------------------------
ಈಗ ಮಗ ತನ್ನ ಮನೆತನದವರದ್ದೇ ಸಮಾಧಿ ಮಾಡಿದ್ದಾನೆ. ಸ್ವಂತ ಅಣ್ಣಂದಿರ ಸಮಾಧಿ ಮಾಡಿದ್ದಾನೆ. ತಾನು, ತನ್ನ ಹೆಂಡತಿ, ಮಗ ಎನ್ನುವುದನ್ನು ಬಿಟ್ಟರೆ, ಬೇರೆಯವರು ಕಣ್ಣಲ್ಲೇ ಇಲ್ಲ. ಇಂತಹವರಿಗೆ ಒಳ್ಳೆಯ ವಿದ್ಯೆ ಎಲ್ಲಿಂದ ಸಿಗಲಿಕ್ಕೆ ಸಾಧ್ಯ? ಒಬ್ಬ ರೈತ ಹರೀಶಣ್ಣ ಅಂದಿದ್ದೇ ಅವನಿಗೆ ಉರಿ. ಅವರಪ್ಪ, ಅವನಿಗಷ್ಟೇ ಅಣ್ಣ ಅನ್ನಬೇಕು. ದುಗ್ಗಾವತಿ ಫ್ಯಾಕ್ಟರಿ ಬಗ್ಗೆ ನಾನು ಮಾಡಿದ್ದ ಆರೋಪಗಳೆಲ್ಲವೂ ಸತ್ಯ. ಆದರೆ, ಭ್ರಷ್ಟ ಕಾಂಗ್ರೆಸ್ ಸರ್ಕಾರ, ಭ್ರಷ್ಟ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಕಿಡಿಕಾರಿದರು.
ಫೋಟೊ:8ಕೆಡಿವಿಜಿ-
..............
ಫೋಟೊ: 8ಕೆಡಿವಿಜಿಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ.
...........................